Advertisement

ಭಾರತದಲ್ಲಿ ಜಿಎಂ ಕಂಪೆ‌ನಿ ಕಾರು ಮಾರಾಟ ಸ್ಥಗಿತ

10:54 AM May 19, 2017 | Team Udayavani |

ಹೊಸದಿಲ್ಲಿ: ಶವರ್ಲೆ ಕಾರು ಮತ್ತು ಇತರ ಜನಪ್ರಿಯ ಕಾರುಗಳನ್ನು ತಯಾರಿಸುವ ಅಮೆರಿಕದ ಪ್ರಮುಖ ವಾಹನ ತಯಾರಿಕ ಸಂಸ್ಥೆ ಜನರಲ್‌ ಮೋಟಾರ್ ಭಾರತದಲ್ಲಿ ತನ್ನ ವಾಹನಗಳ ಮಾರಾಟವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ. ಆದರೆ ಭಾರತದಲ್ಲಿರುವ ತಯಾರಿಕಾ ಘಟಕದಲ್ಲಿ ತಯಾರಿಕೆ ಮುಂದುವರಿಸಿ, ಹೊರ ದೇಶಗಳಿಗೆ ರಫ್ತು ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Advertisement

2 ದಶಕಗಳಿಂದ ಭಾರತದಲ್ಲಿ ನಮ್ಮ ಸಂಸ್ಥೆಯ ಕಾರುಗಳು ಉತ್ತಮ ಮಾರುಕಟ್ಟೆ ಹೊಂದಲು ವಿಫ‌ಲವಾಗುತ್ತಿರುವ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಕಂಪೆನಿ ಹೇಳಿದೆ. ಕಳೆದ ತಿಂಗಳಷ್ಟೇ ಗುಜರಾತ್‌ನ ಹಲೋಟ್‌ನಲ್ಲಿಯ ತನ್ನ ವಾಹನ ತಯಾರಿಕ ಘಟಕವನ್ನು ಸಂಸ್ಥೆ ಸ್ಥಗಿತಗೊಳಿಸಿತ್ತು. ಆದರೆ ಮಹಾರಾಷ್ಟ್ರದ ತಲೆಗೊವಾನ್‌ನಲ್ಲಿಯ ಘಟಕ ಮುಚ್ಚುವುದಿಲ್ಲ. ಆ ಘಟಕದಲ್ಲಿಯೇ ವಾಹನಗಳನ್ನು ತಯಾರಿಸಿ ಉತ್ತಮ ಮಾರುಕಟ್ಟೆ ಇರುವ ರಷ್ಯಾ ಮತ್ತು ಯುರೋಪ್‌ ದೇಶಗಳಿಗೆ ರಫ್ತು ಮಾಡಲಾಗುವುದು. ಬೆಂಗಳೂರಿನ ಟೆಕ್‌ ಕೇಂದ್ರದ ಕೆಲಸವೂ ಎಂದಿನಂತೆ ನಡೆಯಲಿದೆ ಎಂದು ಕಂಪೆನಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next