Advertisement

ದೂರು ಬಾರದಂತೆ ಕಾರ್ಯ ನಿರ್ವಹಿಸಿ

06:14 PM Dec 08, 2020 | Suhan S |

ಹಿರಿಯೂರು: ನಗರಸಭೆಯ ಸಾಮಾನ್ಯ ಸಭೆ ಸೋಮವಾರ ಅಧ್ಯಕ್ಷೆ ಶಂಶುನ್ನೀಸಾ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಗನವಾಡಿ ಕಟ್ಟಡಗಳ ನಿರ್ಮಾಣ, ನಗರೋತ್ಥಾನ ಯೋಜನೆಯಲ್ಲಿ ಮಂಜೂರಾದ ಹಣ, ವಿವಿಧ ಕಾಮಗಾರಿಗಳು, ಹುಳಿಯಾರ್‌ ರಸ್ತೆ ಅಗಲೀಕರಣ, ಸ್ಲಂ ಬೋರ್ಡ್‌ ಮನೆಗಳ ನಿರ್ಮಾಣ, ಇ-ಸ್ವತ್ತು ನೀಡುವ ಬಗ್ಗೆ ಚರ್ಚೆ ನಡೆಯಿತು.

Advertisement

ನಗರಸಭೆ ಬಗ್ಗೆ ಸಾರ್ವಜನಿಕರಿಂದ ದೂರುಗಳ ಸರಮಾಲೆಯೇ ಇದೆ. ಈ ಬಗ್ಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಹೆಚ್ಚಿನ ಗಮನ ಹರಿಸಿ ಸಾರ್ವಜನಿಕರಿಂದ ದೂರುಗಳು ಬಾರದಂತೆನೋಡಿಕೊಳ್ಳಬೇಕು ಎಂದು ಅಧ್ಯಕ್ಷ ಶಂಶುನ್ನೀಸಾ ಸೂಚಿಸಿದರು.

ಬಡವರಿಂದ 50-75 ಸಾವಿರ ರೂ. ಪಡೆದುಕೇವಲ 3 ಲಕ್ಷ ರೂ. ವೆಚ್ಚದಲ್ಲಿ ಮನೆಗಳನಿರ್ಮಾಣ ಮಾಡುತ್ತಿರುವುದು ಕಂಡು ಬಂದಿದೆ.ಒಂದು ವಾರದೊಳಗೆ ಸಾರ್ವಜನಿಕರಿಗೆ ಇ-ಸ್ವತ್ತುಮಾಡಿಕೊಡುವಂತೆ ಸದಸ್ಯ ಅಜಯ್‌ಕುಮಾರ್‌ತಿಳಿಸಿದರು. ಎಲ್ಲಾ ವಾರ್ಡಗಳಲ್ಲಿ ಅಂಗನವಾಡಿಕೇಂದ್ರಗಳ ಸ್ಥಾಪನೆಗೆ ನಗರಸಭೆಯಿಂದ ಜಾಗಒದಗಿಸುವಂತೆ ಸಣ್ಣಪ್ಪ ಒತ್ತಾಯಿಸಿದರು. ನಗರೋತ್ಥಾನ ಯೋಜನೆಯಲ್ಲಿ 35 ಕೋಟಿರೂ. ಬಂದಿದೆ. ಅದರಲ್ಲಿ ಶಾಸಕರು ಹುಳಿಯಾರ್‌ ರಸ್ತೆ ಅಗಲೀಕರಣ ಮಾಡಿಸಬಹುದಾಗಿತ್ತು.ಆದರೆ ವೇದಾವತಿ ನದಿ ಸೇತುವೆ ಕೆಳಗಡೆ ಲಕ್ಕವನಹಳ್ಳಿಗೆ ಹೋಗುವ ರಸ್ತೆ ಮತ್ತು ನಗರದ ಹೊರ ವಲಯದ ವೇದಾವತಿ ಕಾಲೇಜಿನ ಮುಂಭಾಗದ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ ಎಂದು ಸದಸ್ಯ ಈರಲಿಂಗೇಗೌಡ ದೂರಿದರು. ಇದಕ್ಕೆ ಎಷ್ಟು ಖರ್ಚಾಗಿದೆ,

ಉಳಿದಿರುವ ಹಣದ ಬಗ್ಗೆ ಪೌರಾಯುಕ್ತರು ಮಾಹಿತಿ ನೀಡಬೇಕೆಂದರು. ಸಾಮಗ್ರಿಖರೀದಿಯಲ್ಲಿನ ಟೆಂಡರ್‌ ರದ್ದುಪಡಿಸಿ ಹೊಸದಾಗಿ ಟೆಂಡರ್‌ ಕರೆಯುವಂತೆ ಸದಸ್ಯರಾದಗುಂಡೇಶ್‌ ಗೌಡ ಹಾಗೂ ಜಿ.ಟಿ. ತಿಪ್ಪೇಸ್ವಾಮಿ ಒತ್ತಾಯಿಸಿದರು.

ಸಭೆಯಲ್ಲಿ ಉಪಾಧ್ಯಕ್ಷ ಬಿ.ಎನ್‌. ಪ್ರಕಾಶ್‌, ಪೌರಾಯುಕ್ತೆ ಟಿ. ಲೀಲಾವತಿ, ಇಂಜಿಯರ್‌ ವೀರೇಶ್‌, ಕೆಂಚರಾಯಪ್ಪ ಹಾಗೂ ಸದಸ್ಯರು ಭಾಗವಹಿಸಿದ್ದರು.

Advertisement

ಸ್ಲಂ ಬೋರ್ಡ್‌ನಿಂದ ಮನೆಗಳನ್ನು ನಿರ್ಮಾಣ ಮಾಡಿ ಕೊಡುವನೆಪದಲ್ಲಿ ಲಕ್ಷಾಂತರ ರೂಪಾಯಿ ಗೋಲ್‌ ಮಾಲ್‌ ಆಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್‌ ಮುಂದಿನ ಸಭೆಯಲ್ಲಿ ಸೂಕ್ತ ಮಾಹಿತಿ ನೀಡಬೇಕು.  -ಅಜಯ್‌ಕುಮಾರ್‌ ನಗರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next