Advertisement
ಅನುಮತಿ ಕೊಟ್ಟವರ್ಯಾರು?ಸದಸ್ಯ ಸುಭೀತ್ ಕುಮಾರ್ ಮಾತನಾಡಿ, ಪುರಸಭೆಯ ಅನುಮತಿ ಇಲ್ಲದೆಯೇ ಪುರಸಭಾ ಕಚೇರಿಯಲ್ಲಿಯೇ ರಾತ್ರಿ ಧರಣಿ ಕೂತ ಸದಸ್ಯರಿಗೆ ಧರಣಿ ಕೂರಲು ಅನುಮತಿ ಕೊಟ್ಟವರ್ಯಾರು? ಕಾನೂನಿನಲ್ಲಿ ಸರಕಾರಿ ಕಚೇರಿಯಲ್ಲಿ ಈ ರೀತಿ ಮಾಡಲು ಅವಕಾಶವಿದೆಯೇ?ಎಂದು ಪ್ರಶ್ನಿಸಿದರು.
ಸದಸ್ಯ ಶುಭದ್ ರಾವ್ ಮಾತನಾಡಿ, ಹೀಗೆ ರಾತ್ರಿ ಕೆಲ ಸದಸ್ಯರು ಪುರಸಭೆಗೆ ನುಗ್ಗುವುದರಿಂದಲೇ ಇಲ್ಲಿ ಕೆಲವು ಕಡತಗಳು ಕಾಣೆಯಾಗುತ್ತಿವೆ. ಇದು ಗಂಭೀರ ವಿಷಯ. ರಾತ್ರಿ ಸರಕಾರಿ ಕಚೇರಿಯಲ್ಲಿ ಧರಣಿ ಕೂತು ಕಾನೂನು ಉಲ್ಲಂಘಿಸಿದ ಸದಸ್ಯರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಮಗೂ ಕಾಳಜಿ ಇದೆ
ಸದಸ್ಯ ನವೀನ್ ದೇವಾಡಿಗ ಮಾತನಾಡಿ, ರಿಕ್ಷಾ ಚಾಲಕರನ್ನು ಕೆಲ ಸದಸ್ಯರು ನಮ್ಮ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ನಮಗೂ ರಿಕ್ಷಾ ನಿಲ್ದಾಣ ಆಗಬೇಕು ಎನ್ನುವ ಕುರಿತು ಕಾಳಜಿ ಇದೆ ಎಂದರು. ಪತ್ರ ಕಾಣೆ
ಸದಸ್ಯ ಪ್ರಕಾಶ್ ರಾವ್ ಮಾತನಾಡಿ, ರಿಕ್ಷಾ ನಿಲ್ದಾಣದ ಕುರಿತು ತಹಶೀಲ್ದಾರ್ ನೀಡಿದ ಪತ್ರವೊಂದು ಪುರಸಭೆಯಲ್ಲಿ ಕಾಣೆಯಾಗಿದೆ ಇದು ಗಂಭೀರ ವಿಚಾರ ಇದನ್ನು ವಿರೋಧಿಸಿ ಧರಣಿ ಕುಳಿತಿದ್ದ ತನ್ನ ವಿರುದ್ದ ಕ್ರಮ ಕೈಗೊಳ್ಳಬಹುದು ಎಂದರು.
Related Articles
ವಿಪಕ್ಷದ ಸದಸ್ಯರು ಧರಣಿ ಕೂತು ಕಾನೂನು ಉಲ್ಲಂಘಿಸಿದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸದನದ ಬಾವಿಗಿಳಿದು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಾಧಿಕಾರಿಯವರು ಇದಕ್ಕೆ ಒಪ್ಪಿಗೆ ಸೂಚಿಸಿದರು.
Advertisement
ಆಗ್ರಹಸದಸ್ಯ ಶುಭದ್‌ರಾವ್ ಮಾತನಾಡಿ, ನಗರದಲ್ಲಿ ರಿಕ್ಷಾ ನಿಲ್ದಾಣ ಮಾಡಬೇಕು ಎನ್ನುವ ಕುರಿತು ನಮ್ಮ ಯಾವುದೇ ವಿರೋಧವಿಲ್ಲ. ರಿಕ್ಷಾ ಸಂಘಟನೆಗಳಿಗೆ ಯಾವತ್ತೂ ನಮ್ಮ ಬೆಂಬಲವಿದೆ. ಈಗಲೂ ಅಷ್ಟೇ ಅವರನ್ನು ಬೆಂಬಲಿಸುತ್ತೇವೆ. ಆ. 15ರ ಒಳಗೆ ಪುರಸಭೆ ವತಿಯಿಂದ ರಿಕ್ಷಾ ನಿಲ್ದಾಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರೂ ಕೂಡ ಇದನ್ನು ಬೆಂಬಲಿಸಿದರು.ಉಪಸ್ಥಿತಿ ಅಧ್ಯಕ್ಷೆ ಅನಿತಾ ಅಂಚನ್, ಉಪಾಧ್ಯಕ್ಷ ಗಿರಿಧರ್ ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಷಯ್ ರಾವ್, ಮುಖ್ಯಾಧಿಕಾರಿ ಮೇಬಲ್ ಡಿ’ಸೋಜಾ ಉಪಸ್ಥಿತರಿದ್ದರು. ಎಂ.ಬಿ. ಪುಸ್ತಕ, ಸಲಕರಣೆ ಕಾಣೆ
ಪುರಸಭೆಯಲ್ಲಿ ಎಂ.ಬಿ ಪುಸ್ತಕ ಕಾಣೆಯಾಗಿದೆ. ಎಲ್ಲಾ ದಾಖಲೆಗಳಿರುವ ಎಂ.ಬಿ.ಪುಸ್ತಕವೇ ಇಲ್ಲಿ ಕಾಣೆಯಾಗುತ್ತದೆ ಎಂದರೆ ಪುರಸಭೆ ಅದೆಷ್ಟು ನಿಯತ್ತಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಗೊತ್ತಾಗುತ್ತದೆ.ಇಷ್ಟೊಂದು ಬೇಜವಾಬ್ದಾರಿ ಪುರಸಭೆಯನ್ನು ಇದುವರೆಗೆ ನೋಡಿಲ್ಲ ಎಂದು ಸದಸ್ಯ ಅಶ³ಕ್ ಅಹಮ್ಮದ್ ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೇ ಮಸ್ತಕಾಭಿಷೇಕದ ಸಂದರ್ಭದಲ್ಲಿ ಖರೀದಿಸಿದ ಸಲಕರಣೆಗಳನ್ನು ಪುರಸಭೆಗೆ ತಂದು ಹಾಕಿದ್ದೇವೆ.ಆದರೆ ಇಂದು ಅವೆಲ್ಲಾ ಕಾಣೆಯಾಗಿವೆ ಅವು ಎಲ್ಲಿ ಹೋಗಿವೆ ಎನ್ನುವ ಮಾಹಿತಿ ಬೇಕಿದೆ ಎಂದು ಹೇಳಿದರು.