Advertisement

ಲಿಂಗ ಪರಿವರ್ತನೆ: ಯಶ್ ಪಾಲ್ ಹೇಳಿಕೆಗೆ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ

03:25 PM Jul 28, 2023 | Team Udayavani |

ತುಮಕೂರು: ”ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ತಮಾಷೆಗೆ ಆಗಿರಬಹುದು” ಎಂಬ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿರಾಕರಿಸಿದ್ದಾರೆ.

Advertisement

ಸುದ್ದಿಗಾರರು ಕೇಳಿದಾಗ ”ಅವರು ಏನೂ ಬೇಕಾದರೂ ಹೇಳಿಕೊಳ್ಳಲಿ, ಹೇಳಿಕೆ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಬೇಕು” ಎಂದು ಹೇಳಿದ್ದಾರೆ.

ನಿಂದನಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ ವಲಯದಿಂದ ಆಕ್ರೋಶ ವ್ಯಕ್ತವಾದ ಬಳಿಕ ಶಾಸಕ ಯಶ್ ಪಾಲ್ ಸುವರ್ಣ ಸಮರ್ಥಿಸಿಕೊಂಡಿದ್ದು ”ವಿಡಿಯೋ ಪ್ರಕರಣದ ಸಂತ್ರಸ್ತ್ರ ರ ನೋವು ಅರ್ಥವಾಗಲಿ ಎಂದು ಹೇಳಿದ್ದು, ಇದು ವೈಯಕ್ತಿಕ ನಿಂದನೆ ಅಲ್ಲ” ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಘಟನೆಗೆ ಸಂಬಂಧಿಸಿದಂತೆ ಉಡುಪಿಯಲ್ಲಿ ಶುಕ್ರವಾರ ಬಿಜೆಪಿ ಕರೆ ನೀಡಿದ್ದ ಬೃಹತ್ ಪ್ರತಿಭಟನೆ ಯಲ್ಲಿ ಶಾಸಕ ಯಶ್ ಪಾಲ್ “ಇದು ತಮಾಷೆಯ ವಿಚಾರವಲ್ಲ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಸುಮ್ಮನಿರುವುದಿಲ್ಲ. ಗೃಹ ಸಚಿವರ ಮಗ ಲಿಂಗ ಪರಿವರ್ತನೆ ಮಾಡಿಕೊಂಡಿರುವುದು ತಮಾಷೆಗೆ ಆಗಿರಬಹುದು, ಆದರೆ ಇದು ತಮಾಷೆಯ ವಿಚಾರವಲ್ಲ” ಎಂದು ಕಿಡಿ ಕಾರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next