Advertisement

ಲಿಂಗ ತಾರತಮ್ಯ: ಸೆರೆನಾ ಆರೋಪಕ್ಕೆ ಸಿಮನ್‌ ಬೆಂಬಲ

06:00 AM Sep 11, 2018 | |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಫೈನಲ್‌ ಪಂದ್ಯದ ವೇಳೆ ತಮ್ಮ ವಿರುದ್ಧ ಲಿಂಗ ತಾರತಮ್ಯ ನಡೆದಿದೆ ಎಂಬುದಾಗಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮಾಡಿ ರುವ ಆರೋಪಕ್ಕೆ ಅಮೆರಿಕ ಸರಕಾರದ ಮಹಿಳಾ ಟೆನ್ನಿಸ್‌ ವಿಭಾಗ ಸಹಮತ ವ್ಯಕ್ತಪಡಿಸಿದೆ.

Advertisement

ಫೈನಲ್‌ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ತಮಗಾದ ಅನ್ಯಾಯಗಳನ್ನು ಖಂಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಜಾಗದಲ್ಲಿ ಒಬ್ಬ ಪುರುಷ ಇದ್ದಿದ್ದರೆ ಅಂಪಾಯರ್‌ ಭಿನ್ನ ಹಂತದ ಸಹಿಷ್ಣುತೆಯನ್ನು ತೋರುತ್ತಿದ್ದರೆಂದು ಡಬ್ಲ್ಯುಟಿಎ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸ್ಟೀವ್‌ ಸಿಮನ್‌ ಟೀಕಿಸಿದ್ದಾರೆ.

ಜಪಾನ್‌ನ ಯುವ ಆಟಗಾರ್ತಿ ನವೋಮಿ ಒಸಾಕಾ ಅವರ ವಿರುದ್ಧದ ಫೈನಲ್‌ ಪಂದ್ಯದ ವೇಳೆ ಅಂಕಣದ ಅಂಚಿನಿಂದ ಕೋಚ್‌ ಸಂಜ್ಞೆಗಳ ಮೂಲಕ ಸಲಹೆ ನೀಡಿದ್ದಾರೆ ಎಂಬ ಆರೋಪದಲ್ಲಿ ಸೆರೆನಾ ಅವರು ಸಂಹಿತೆ ಉಲ್ಲಂಘನೆ ಶಿಕ್ಷೆಗೆ ಗುರಿಯಾಗಿದ್ದಾರೆ. ರ್ಯಾಕೆಟ್‌ನ್ನು ಸಿಟ್ಟಿನಿಂದ ನೆಲಕ್ಕೆ ಒಗೆದ ತಪ್ಪಿಗಾಗಿ ಒಂದು ಗೇಮ್‌ ಪೆನಾಲ್ಟಿ ವಿಧಿಸಲಾಗಿದೆ. 

ಅಂಪಾಯರ್‌ ಕಾರ್ಲೋಸ್‌ ರಮೋಸ್‌ ಅವರನ್ನು “ಕಳ್ಳ’ ಎಂದು ಸಂಬೋಧಿಸಿದ್ದಾಗಿ 17 ಸಾವಿರ ಡಾಲರ್‌ ದಂಡವನ್ನೂ ತೆರಬೇಕಾಗಿದೆ. ಸೆರೆನಾ ಅವರ ಕೋಚ್‌, ಪ್ಯಾಟ್ರಿಕ್‌ ಅವರು ತಾವು ಕೈಸನ್ನೆ ಮೂಲಕ ತನ್ನ ಆಟಗಾರ್ತಿಗೆ ಕೆಲವು ಸೂಚನೆಗಳನ್ನು ನೀಡಿರುವುದನ್ನು ಒಪ್ಪಿಕೊಂಡಿದ್ದಾರೆ.

ತಾರತಮ್ಯಗಳು ಇರಬಾರದು
ತಪ್ಪುಗಳಿಗೆ ಹಾಗೂ ವರ್ತನೆಗಳಿಗೆ ಶಿಕ್ಷೆ ವಿಧಿಸುವ ಸಂದರ್ಭದಲ್ಲಿ ತಾರತಮ್ಯಗಳು ಇರಬಾರದು. ಬಹಳಷ್ಟು ಪುರುಷ ಕ್ರೀಡಾಪಟುಗಳು ವಿರಾಮದ ಅವಧಿಯಲ್ಲಿ ಕೋಚಿಂಗ್‌ ಸಲಹೆ ಪಡೆದರೂ, ದುರ್ವರ್ತನೆ ತೋರಿದರೂ ಅಂಪಾಯರ್‌ಗಳು ನೋಡಿಯೂ ನೋಡದಂತಿರುತ್ತಾರೆ ಎಂದು ಸಿಮನ್‌ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next