Advertisement

TCSನಿಂದ ತಾರತಮ್ಯ: ಅಮೆರಿಕದಲ್ಲಿ ಉದ್ಯೋಗಿಗಳ ದೂರು

01:26 AM Mar 31, 2024 | Team Udayavani |

ವಾಷಿಂಗ್ಟನ್‌: ಭಾರತೀಯ ಐಟಿ ದೈತ್ಯ ಕಂಪೆನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌(ಟಿಸಿಎಸ್‌) ವಿರುದ್ಧ ಅಮೆರಿಕದ ಕೆಲವು ಟೆಕಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಡಿಮೆ ವೇತನಕ್ಕೆ ತಮ್ಮ ಉದ್ಯೋಗವನ್ನು ಎಚ್‌1-ಬಿ ವೀಸಾ ಅಡಿ ಭಾರತೀಯರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Advertisement

ಕಡಿಮೆ ಅವಧಿಗೆ ತಮಗೆ ನೋಟಿಸ್‌ ನೀಡಿ, ಕೆಲಸದಿಂದ ತೆಗದುಹಾಕಲಾಗುತ್ತಿದೆ. ಜನಾಂಗ ಮತ್ತು ವಯಸ್ಸಿನ ಆಧಾರದಲ್ಲಿ ತಮಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ 22 ಉದ್ಯೋಗಿಗಳು ಅಮೆರಿಕದ ಸಮಾನ ಉದ್ಯೋಗ ಅವಕಾಶ ಆಯೋಗಕ್ಕೆ(ಇಇಒಸಿ) ದೂರು ನೀಡಿ ದ್ದಾರೆ. ಆದರೆ ಈ ಆರೋಪ ತಳ್ಳಿ ಹಾ ಕಿ ರು ವ ಟಿಸಿಎಸ್‌, “ಅಮೆರಿಕದಲ್ಲಿ ಟಿಸಿಎಸ್‌ ಎಲ್ಲ ಉದ್ಯೋಗಿಗಳಿಗೆ ಸಮಾನ ಅವಕಾಶ ನೀಡುತ್ತದೆ. ಉದ್ಯೋಗಿಗಳ ವಿಷ ಯದಲ್ಲಿ ಯಾವುದೇ ತಾರತಮ್ಯ ಮಾಡಿಲ್ಲ’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next