Advertisement

ರಾವತ್ ಒಬ್ಬ ಅತ್ಯುತ್ತಮ ಸೈನಿಕ,ನಿಜವಾದ ದೇಶಭಕ್ತ: ಪ್ರಧಾನಿ ಮೋದಿ

07:28 PM Dec 08, 2021 | Team Udayavani |

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 8 ರ ಬುಧವಾರದಂದು ಹೆಲಿಕಾಪ್ಟಾರ್ ದುರಂತದಲ್ಲಿ ಮಡಿದ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ ಸಿಬ್ಬಂದಿಗಳ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ, ಇದು ಅನಿರೀಕ್ಷಿತ ದುರಂತ ಎಂದು ಹೇಳಿದ್ದಾರೆ.

Advertisement

ಟ್ವೀಟ್ ಮಾಡಿರುವ ಪ್ರಧಾನಿ, ”ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ನಾವು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಸಶಸ್ತ್ರ ಪಡೆಗಳ ಇತರ ಸಿಬ್ಬಂದಿಯನ್ನು ಕಳೆದುಕೊಂಡಿದ್ದೇವೆ. ಅವರು ಅತ್ಯಂತ ಶ್ರದ್ಧೆಯಿಂದ ಭಾರತಕ್ಕೆ ಸೇವೆ ಸಲ್ಲಿಸಿದ್ದರು. ನನ್ನ ಭಾವನೆಗಳು ದುಃಖಿತ ಕುಟುಂಬಗಳೊಂದಿಗೆ ಇವೆ. ಎಂದು ಬರೆದಿದ್ದಾರೆ.

ಜನರಲ್ ಬಿಪಿನ್ ರಾವತ್ ಒಬ್ಬ ಅತ್ಯುತ್ತಮ ಸೈನಿಕ. ನಿಜವಾದ ದೇಶಭಕ್ತ, ಅವರು ನಮ್ಮ ಸಶಸ್ತ್ರ ಪಡೆಗಳು ಮತ್ತು ಭದ್ರತಾ ಉಪಕರಣಗಳನ್ನು ಆಧುನೀಕರಿಸುವಲ್ಲಿ ಮಹತ್ತರವಾಗಿ ಕೊಡುಗೆ ನೀಡಿದ್ದಾರೆ. ಕಾರ್ಯತಂತ್ರದ ವಿಷಯಗಳ ಬಗ್ಗೆ ಅವರ ಒಳನೋಟಗಳು ಮತ್ತು ದೃಷ್ಟಿಕೋನಗಳು ಅಸಾಧಾರಣವಾಗಿವೆ. ಅವರ ಅಗಲಿಕೆ ನನಗೆ ಅತೀವ ದುಃಖ ತಂದಿದೆ. ಓಂ ಶಾಂತಿ,” ಎಂದು ಬರೆದಿದ್ದಾರೆ.

”ಭಾರತದ ಮೊದಲ ಸಿಡಿಎಸ್ ಆಗಿ, ಜನರಲ್ ರಾವತ್ ಅವರು ರಕ್ಷಣಾ ಸುಧಾರಣೆಗಳು ಸೇರಿದಂತೆ ನಮ್ಮ ಸಶಸ್ತ್ರ ಪಡೆಗಳಿಗೆ ಸಂಬಂಧಿಸಿದ ವಿವಿಧ ಅಂಶಗಳಲ್ಲಿ ಕೆಲಸ ಮಾಡಿದರು. ಅವರು ಸೈನ್ಯದಲ್ಲಿ ಸೇವೆ ಸಲ್ಲಿಸಿ ಶ್ರೀಮಂತ ಅನುಭವವನ್ನು ತಂದರು. ಅವರ ಅಸಾಧಾರಣ ಸೇವೆಯನ್ನು ಭಾರತ ಎಂದಿಗೂ ಮರೆಯುವುದಿಲ್ಲ” ಎಂದು ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next