Advertisement

ಜ.ಬಿಪಿನ್‌ ಕಣ್ಣಿನಲ್ಲಿ ವಾವ್‌ ತೇಜಸ್‌! 

12:30 AM Feb 22, 2019 | |

ಬೆಂಗಳೂರು: ಹಿಂದೂಸ್ತಾನ್‌ ಏರೋನಾಟಿಕ್ಸ್‌ ಲಿ., (ಎಚ್‌ಎಎಲ್‌) ಸಾಮರ್ಥ್ಯಕ್ಕೆ ಮತ್ತಷ್ಟು ಬಲತುಂಬುವ ನಿಟ್ಟಿನಲ್ಲಿ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಗುರುವಾರ ದೇಶೀಯ ಲಘು ಯುದ್ಧ
ವಿಮಾನ “ತೇಜಸ್‌’ ಏರಿ ಹಾರಾಟ ನಡೆಸಿದರು.ಬುಧವಾರವಷ್ಟೇ ಅಂತಿಮ ಅನುಮತಿ ಪ್ರಮಾಣ ಪತ್ರ ಪಡೆದ ತೇಜಸ್‌ನಲ್ಲಿ ಸುಮಾರು 40 ನಿಮಿಷಗಳ ಕಾಲ ನ್ಯಾವಿಗೇಟರ್‌ ಸೀಟಿನಲ್ಲಿ ಕುಳಿತು ಹಾರಾಟ ನಡೆಸಿದರು. ಈ ಮೂಲಕ ಎಚ್‌ಎಎಲ್‌ಗೆ ಮತ್ತಷ್ಟು ಬಲ ತುಂಬುವ ಕೆಲಸ ಮಾಡಿದರು. ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವೈಮಾನಿಕ ಪ್ರದರ್ಶನದ ವೇಳೆ ತೇಜಸ್‌ನಲ್ಲಿ ಹಾರಾಟ ನಡೆಸಿದ ಅನುಭವವು ನನ್ನ ಜೀವನದಲ್ಲಿನ ಅಪರೂಪದ ಕ್ಷಣಗಳು. ತೇಜಸ್‌ಸೇರ್ಪಡೆ ಯಿಂದ ಭಾರತೀಯ ರಕ್ಷಣಾ ಕ್ಷೇತ್ರ ಮತ್ತಷ್ಟು ಸದೃಢವಾಗಿದೆ. ಈ ಯುದ್ಧ ವಿಮಾನದ ಗುರಿ ತುಂಬಾ ತೀಕ್ಷ್ಣ ಮತ್ತು ಉತ್ತಮವಾಗಿದೆ’
ಎಂದರು.

Advertisement

ತೇಜಸ್‌ ವಿಶೇಷ

ತೇಜಸ್‌ ಯುದ್ಧ  ವಿಮಾನವು ದೇಶದ ಎರಡು ದಶಕಗಳ ಕನಸು. 1980ರಲ್ಲಿ ಈ ವಿಮಾನ
ತಯಾರಿಕೆ ಯೋಜನೆಯನ್ನು ಎಚ್‌ಎಎಲ್‌ ಕೈಗೊಂಡಿತು. 2001ರಲ್ಲಿ ಮೊದಲ ತೇಜಸ್‌
ಯುದಟಛಿವಿಮಾನವನ್ನು ಹೊರತರಲಾಯಿತು. 2016ರಲ್ಲಿ ಇದು ಕಾರ್ಯಾಚರಣೆ ಆರಂಭಿಸಿತು. ತೇಜಸ್‌ ವಿಶೇಷ ತಲಾ ಒಂದು ವಿಮಾನ ತಯಾರಿಕೆಗೆ 200 ಕೋಟಿ ರೂ. ವೆಚ್ಚ ತಗ

Advertisement

Udayavani is now on Telegram. Click here to join our channel and stay updated with the latest news.

Next