Advertisement

ಬೌದ್ಧಿಕ ಶ್ರೀಮಂತಿಕೆ, ಕೊಂಚ ಆಲಸ್ಯ ಮಿಥುನರ ಗುಟ್ಟು…

09:35 PM Jul 15, 2016 | |

ಮಿಥುನ ರಾಶಿಯವರು ಮೃದು ಸ್ವಭಾವದವರು. ಆದರೆ ನಿರ್ದಿಷ್ಟವಾದ ತತ್ವದಿಂದ ಹಿಂದೆ ಸರಿಯುವವರಲ್ಲ. ನಾಳೆ ಮಾಡಿದರಾಯ್ತು ಎಂದು ಕೆಲಸ ಮುಂದೂಡುವ ವಿಷಯದಲ್ಲಿ ಸದಾ ನಿರತರು. ಆದರೆ ಮಾಡದೆ ಬಿಡಲಾರರು. ಬೌದ್ಧಿಕ ಶ್ರೀಮಂತಿಕೆ ಇವರ ಗಟ್ಟಿಯಾದ ಆಸ್ತಿ. ಹಾಗೆಯೇ ಆಲಸ್ಯ ಕೂಡಾ. ಅನೇಕಾನೇಕ ಕನಸು ವಾಸ್ತವ ತಾರ್ಕಿಕ ವಿಚಾರ ಚಿಂತನೆಗಳಲ್ಲಿ ಸದಾ ನಿರತರು. ವ್ಯಕ್ತಿತ್ವದ ಅಪಾರ ಪಾರದರ್ಶಕತೆಯಿಂದ, ಕೊಂಚ ವ್ಯವಹಾರಿಕ ಕೌಶಲ್ಯ ಕಡಿಮೆಯೇ ಎಂದು ಮೇಲ್ನೋಟಕ್ಕೆ ಇವರ ಬಗ್ಗೆ ಅನಿಸಿದರೂ ಅದು ಕೇವಲ ತಪ್ಪು ಅಭಿಪ್ರಾಯ ಎಂದು ಸಾಬೀತು ಪಡಿಸುವ ಅಪರೂಪದ ನೈಪುಣ್ಯತೆ ಮಿಥುನ ರಾಶಿಗರ ದೊಡ್ಡ ಶಕ್ತಿ. ಗೋಸುಂಬೆ ತನ ಇವರಿಗೆ ಸುತರಾಂ ಆಗದು.

Advertisement

ಮಿಥುನ ರಾಶಿಯ ಪ್ರಮುಖ ವ್ಯಕ್ತಿಗಳನ್ನು ಹೆಸರಿಸುವುದಾದರೆ ದಿವಂಗತ ಪ್ರಧಾನಿ ಲಾಲ ಬಹಾದೂರ ಶಾಸಿŒ, ಸೋನಿಯಾ ಗಾಂದಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿಯವರ ಗುರು ಬಿಎಸ್‌ಪಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಕಾನ್ಷಿರಾಂ, ಭಾರತದ ಸಂಧಾನ ಶಿಲ್ಪಿ ಭಾರತ ರತ್ನ ಬಿ.ಆರ್‌. ಅಂಬೇಡ್ಕರ್‌, ಗುರುತ್ವಾಕರ್ಷಣ ಶಕ್ತಿಯ ನಿಯಮಗಳ ಸಂಶೋಧಕ ಸರ್‌ ಐಸಾಕ್‌ ನ್ಯೂಟನ್‌ ಬ್ರಿಟಿಷ್‌ ದೇಶದ ಮಹಿಳೆಯಾದರೂ ಭಾರತದ ಕಾಂಗ್ರೆಸ್‌ ಪಕ್ಷದ ಸೂತ್ರಧಾರಿಣಿಯಾಗಿದ್ದ ಮೇಡಮ್‌ ಅನಿಬೆಸೆಂಟ್‌, ಹಿಂದಿ ಸಿನಿಮಾದ ಅಭಿನಯ ಚತುರ ದಿ.ಅಶೋಕ್‌ ಕುಮಾರ್‌, ಭಾರತದ ಚುನಾವಣಾ ಆಯೋಗದ ಕಮೀಷನರ್‌ ಆಗಿ ಚುನಾವಣಾ ಪದ್ದತಿಗೆ ಅಗಾಧ ಶಿಸ್ತು ತಂದ ಟಿ.ಎನ್‌.ಶೇಷನ್‌, ಇತ್ಯಾದಿ ಇತ್ಯಾದಿ ದೊಡ್ಡ ಯಾದಿಯೇ ಇದೆ. 
  ಮಿಥುನ ರಾಶಿ ಯಾವಾಗಲೂ ದ್ವಿ ಸ್ವಭಾವನ್ನು ಸೂಚಿಸುತ್ತದೆ. ಬುಧ ಗ್ರಹವೇ ಈ ರಾಶಿಯ ಅಧಿಪತಿ. ಒಂದು ನಿರ್ದಿಷ್ಟ ವಿಚಾರವನ್ನು ವಿಧವಿಧ ನೆಲೆಯಲ್ಲಿ ವಿಶ್ಲೇಷಿಸುವ ಬೌದ್ಧಿಕ ಶ್ರೀಮಂತಿಕೆ ಮನೋಲಹರಿಯಲ್ಲಿನ ತಾರ್ಕಿಕತೆಗೊಂದು ಅನುಪಮವಾದ ಆಳ ಇರುವುದು ಹಾಗೋ, ಹೀಗೋ ಎಂಬ ದ್ವಿ ಸ್ವಭಾವಗಳಲ್ಲಿ ಮಿಥುನ ರಾಶಿಯ ಜನ ಆವರಣಗೊಂಡಿರುತ್ತಾರೆ. 

ಭ್ರಷ್ಟರನ್ನು ಇವರಿಗೆ ಸಹಿಸಲಾಗದು. ಹಠಮಾರಿಗಳನ್ನು ದೂರವೇ ಇಡುತ್ತಾರೆ. ಮುಖಾಮುಖೀಯಾಗುವ ಪ್ರಸಂಗ ಎದುರಾದಲ್ಲಿ ಬುದ್ಧಿ ಉಪಯೋಗಿಸಿ ಹಠಮಾರಿಗಳನ್ನು ಸಾಗಹಾಕಬಲ್ಲರು. ಮಹತ್ವಾಕಾಂಕ್ಷಿಗಳಾದರೂ ಶತಾಯಗತಾಯ ಆತ್ಮಾಭಿಮಾನ ಬಿಟ್ಟು ಯಾವ ಕೆಲಸಕ್ಕೂ ಕೈ ಹಾಕಲಾರರು. ಹಠಮಾರಿಗಳಲ್ಲಿ, ಭ್ರಷ್ಟರಲ್ಲಿ ಇರಬಹುದಾದ ಉತ್ತಮ ಅಂಶಗಳಿದ್ದಲ್ಲಿ ಅವರಿಂದಲೂ ಒಳ್ಳೆಯದನ್ನು ಸ್ವೀಕರಿಸಬಲ್ಲರು.

ಮಿಥುನ ರಾಶಿಯವರಿಗೆ ನೀರಿನ, ಧೂಳಿನ, ಇನ್ನೂ ಇಷ್ಟು ತಿನಿಸು ಖಾದ್ಯಗಳ ವಿಚಾರದಲ್ಲಿ ಅಲರ್ಜಿಗೆ ತುತ್ತಾಗಿ ನರಳಬಲ್ಲರು. ಗಂಟಲು ನೋವು, ಬಾಯಿ ಹುಣ್ಣೂ, ನೆಗಡಿ, ಕಫ‌, ಪ್ರಕೃತಿ ಇವರ ದೊಡ್ಡ ಶತೃವೇ ಎನ್ನಬಹುದು. ಜೊತೆಗೆ ಚರ್ಮದ ಕಾಯಿಲೆ ಇವರಿಗೆ ಥಟ್ಟನೆ ಹತ್ತಿಕೊಳ್ಳುವ ಸಾಧ್ಯತೆ ಅಧಿಕ. ಸೂರ್ಯನ ಶಾಖಕ್ಕೆ ಸದಾ ಸಮೀಪವೇ ಇರುವ, ಬುಧ ಮಿಥುನ ರಾಶಿಯ ಅಧಿಪತಿಯಾಗಿರುವುದು ಇದಕ್ಕೆ ಕಾರಣ. ಚರ್ಮದ ನೈಸರ್ಗಿಕ ತೇವಾಂಶ ತೈಲದ ಅಂಶಗಳನ್ನು ಬೇಗನೆ ಕಳೆದುಕೊಳ್ಳುವ ಸ್ಥಿತಿ ಉಂಟಾಗಿ ಚರ್ಮದ ಕಾುಲೆಗೆ ಮಿಥುನ ರಾಶಿಯ ಜನ ಸರ್ರನೆ ಬಲಿಯಾಗುತ್ತಾರೆ. 

ಹಲವು ಸಲ ಮಿಥುನ ರಾಶಿಯವರ ವೈವಾಹಿಕ ಬದುಕು ಡೋಲಾಯಮಾನವಾಗಿರುತ್ತದೆ. ಶನಿಯ ಸಂದರ್ಭ ಕುಜನ ಜೊತೆ ಅಸ್ತವ್ಯಸ್ತ ಸಂದರ್ಭದಲ್ಲಿದ್ದಾಗ ಬಾಳ ಸಂಗಾತಿಗಳ ಜೊತೆ ಮನಸ್ತಾಪ, ಅಗಲುವಿಕೆ, ಮಕ್ಕಳ ಅಸ್ತವ್ಯಸ್ತಗಳೆಲ್ಲ ಹೆಚ್ಚು ಗಮನಾರ್ಹ. ಸೂರ್ಯ, ಕುಜ,  ಗುರು, ರಾಹು, ಕೇತುಗಳೆಲ್ಲ  ಮಿಥುನ ರಾಶಿಯವರಿಗೆ ಅಶುಭ ಗ್ರಹಗಳು. ಶುಕ್ರನ ಶಕ್ತಿ ಜಾಸ್ತಿ ಇದ್ದಾಗ ಮಿಥುನ ರಾಶಿಯವರ ಪ್ರಾಭಲ್ಯ ಹೆಚ್ಚು. ಸೂರ್ಯನ ಜೊತೆ ಬಹಳವೇ ಆದ ಸಾಮಿಪ್ಯ ಶುಕ್ರನ ಸ್ಥಿತಿಯೂ ಸೂರ್ಯನಿಂದ ಮಂಕಾಗುವ ಸಾಧ್ಯತೆ ಹೇರಳವಾಗಿರುವುದರಿಂದ ಮಿಥುನ ರಾಶಿಯವರಿಗೆ ಸಮಸ್ಯೆಗಳು ಒದಗಲು ಮಾರ್ಗಗಳು ಅಧಿಕವಾಗಿದೆ.

Advertisement

ಪಾಕಿಸ್ತಾನದ ಪ್ರಥಮ ಗವರ್ನರ್‌ ಜನರಲ್‌ ಆಗಿದ್ದ ಮಹಮದ್‌ ಆಲಿ ಜಿನ್ನ ಮೇಲ್ನೋಟಕ್ಕೆ ಎಲ್ಲಾ ಸರಿ ಇದ್ದಂತೆ ಕಂಡರೂ ಶುಕ್ರ, ಬುಧ ಹಾಗೂ ಶನಿಗಳ ಅಸಂಗತ ಜೋಡಣೆ ಜೊತೆಗೆ ಶನಿ ದೃಷ್ಟಿ ವ್ಯಕ್ತಿತ್ವದಲ್ಲಿ ವಿಷಮತೆಯನ್ನು ತುಂಬಿತ್ತು. ಬುಧಾದಿತ್ಯ ಯೋಗದ ಹಿರಿಮೆಗೆ ಸಂಪನ್ನರಾದ ತೂಕ ಒದಗದೆ ದೂರದರ್ಷಿತ್ವದ ನಿಟ್ಟಿನಲ್ಲಿ ಜಿನ್ನಾ ಬಹುಮಟ್ಟಿಗೆ ಸೋತರು. ಎಲ್ಲಾ ಆದರ್ಶಗಳನ್ನು ಸಂಪನ್ನ ನಾಯಕತ್ವವನ್ನು ಹೊಂದಿಯೂ ಅಂಬೇಡ್ಕರ್‌ ಅನೇಕ ತಲ್ಲಣಗಳನ್ನು ಎದುರಿಸಿದರು. ನಿಜಕ್ಕೂ ಬಹುದೊಡ್ಡ ಮಾನವತಾವಾದಿಯಾಗಿದ್ದ ಅಂಬೇಡ್ಕರ್‌ ಶನಿ, ಕುಜರ ವಿಷಮ ದೃಷ್ಟಿ ದೋಷದಿಂದಾಗಿ ಇನ್ನಿಷ್ಟು ರಾಜಕೀಯ ಪ್ರಭಲತೆಯನ್ನು ಸಾಧಿಸುವಲ್ಲಿ  ವಿಫ‌ಲರಾದರು. ನಿಜಕ್ಕೂ ಚಂದ್ರ ದಶಾ ಅವರಿಗೆ ಯುಕ್ತಕಾಲದಲ್ಲಿ ದೊರಕಿದ್ದರೆ ಭಾರತದ ಪ್ರಧಾನಮಂತ್ರಿಯಾಗುವ ದೊಡ್ಡ ಸೌಭಾಗ್ಯ ಮಿಂಚಿನ ರಣತಂತ್ರಗಳ ಸಿದ್ಧಿ ಅವರಿಗೆ ಒದಗಿ ಬರುತ್ತಿತ್ತು. ನೆಹರು ಅವರ ನಿಜವಾದ ಆಕ‚ರ್ಷಣೆ ಚಂದ್ರನ ಮೂಲಕವಾಗಿ ಒದಗಿ ಬಂದಿತ್ತು. 
ಈ ಕುರಿತು ಮುಂದಿನವಾರ ಚರ್ಚಿಸೋಣ. ಗುರುವೊಬ್ಬ ಶಕ್ತಿ ಪಡೆದಿದ್ದಲ್ಲಿ ಅಂಬೇಡ್ಕರ್‌ ಇನ್ನಿಷ್ಟು ಎತ್ತರ ಏರಲು ಚಂದ್ರನಿಗೆ ರಂಗ ಸಜ್ಜುಗೊಳ್ಳುತ್ತಿತ್ತು. 

ಅಧೀರೆಯಂತೆ ಕಂಡ ಸೋನಿಯಾ ಶಕ್ತಿ ಪಡೆದಿದ್ದೇ ಶುಕ್ರನಿಂದ. ಚಂದ್ರ ದುರ್ಬಲನಾದರೂ 2004 ಮತ್ತು 2009ರ ಲೋಕಸಭಾ ಚುನಾವಣೆಯಲ್ಲಿ ಶುಕ್ರ ಸೋನಿಯಾರಿಗೆ ಶಕ್ತಿ ತುಂಬಿದ. ಜೊತೆಗೆ ಗುರು ಕೂಡಾ ರಾಜಯೋಗ ನಿರ್ಮಿಸಿದ. ದೋಷಪೂರ್ಣ ಚಂದ್ರನ ಮಿಥುನ ಸ್ಥಾನ ಸ್ಥಿತಿ ಬಾಳಸಂಗಾತಿಯಿಂದ ಅಗಲುವ ಸ್ಥಿತಿಯನ್ನು ಒದಗಿಸಿತು. ಆದರೆ ಸಹಜವಾಗೇ ಧೈರ್ಯ ತುಂಬಬಲ್ಲ ಬುಧ ಎಲ್ಲಾ ವಿಷಮ ಸನ್ನಿವೇಷಗಳಲ್ಲೂ ನಿಭಾಯಿಸುವ ಶಕ್ತಿ ಒದಗಿಸಿದ. ಬುಧ ಹಾಗೂ ಶುಕ್ರರ ಬಲಿಷ್ಠ ಸ್ಥಿತಿ ವಿಶೇಷವೇ ಸೋನಿಯಾರನ್ನು ಎತ್ತರಕ್ಕೆ ಏರಿಸಿತು. ರಾಜಕೀಯವಾಗಿ ಸೋನಿಯಾ ಪ್ರಭಲರಾದರು. ಚಂದ್ರನ ದೌರ್ಬಲ್ಯ ನೀಗಿದ್ದರೆ ಇನ್ನಷ್ಟು ಸಂಪನ್ನತೆ ಒದಗಿ ಬರುತ್ತಿತ್ತು. 

ಲಾಲ್‌ ಬಹುದ್ದೂರ್‌ಶಾಸಿŒ ಮೂರ್ತಿ ಚಿಕ್ಕದು. ಆದರೆ ಬಹುದೊಡ್ಡ ಪ್ರಜಾಪ್ರಭುತ್ವದ ಪ್ರಧಾನ ಮಂತ್ರಿಗಳಾದರು. ದುರ್ಬಲರಂತೆ ಕಂಡರೇ ವಿನಾ ಪಾಕಿಸ್ತಾನದ ದುರಾಕ್ರಮಣವನ್ನು ತಡೆದು ಜಯ ಸಂಪಾದಿಸಿದರು. ಪ್ರಭಲನಾಗಿ ಶುಕ್ರ ಗ್ರಹದ ಜಾಗ್ರತ ಶಕ್ತಿ ಸಂಪನ್ನನಾಗಿ ಕೂಡಿ ಬಂದದ್ದೆ ನಾಟಕೀಯವಾಗಿ ರಾಜಕೀಯದ ಉನ್ನತಸ್ಥಾನ ಅಲಂಕರಿಸಿದರು. ಸ್ವತಂತ್ರ ಭಾರತದಲ್ಲಿ ನೆಹರು ತೀರಿಕೊಂಡಾಗ ಶಾಸ್ತ್ರಿ ಯವರು ಪ್ರಧಾನಿಯಾಗಬಹುದೆಂದು ಯಾರೂ ಎಣಿಸಿರಲಿಲ್ಲ. ಮಿಥುನ ರಾಶಿಯವರಾಗಿದ್ದ ಶಾಸ್ತ್ರಿ ಯವರ ಜಾತಕದಲ್ಲಿ ಬುಧನ ಮೇಲೆ ಗುರುಗ್ರಹದ ಅನುಗ್ರಹ ಪೂರ್ಣ ದೃಷ್ಟಿ ಶುಕ್ರನ ಬಲಾಡ್ಯತೆಗಳೆಲ್ಲ ಸೇರಿ ಯಾರೂ ನಿರೀಕ್ಷಿಸಿರದ ಪ್ರಧಾನಿಪಟ್ಟ ಅವರಿಗೆ ನಿರಾಯಾಸವಾಗಿ ಒದಗಿ ಬಂದಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next