Advertisement
ಆಸ್ಪತ್ರೆಯಿಂದ ತುರ್ತು ಚಿಕಿತ್ಸೆ, ಪೊಲೀಸ್ ಇಲಾಖೆಯಿಂದ ಸೂಕ್ತ ಕ್ರಮ ಹಾಗೂ ಭದ್ರತೆ, ಕಾನೂನು ಇಲಾಖೆಯಿಂದ ಉಚಿತ ಕಾನೂನು ನೆರವು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬುವ ಕಾರ್ಯ ಘಟಕದಲ್ಲಿ ಆಗಲಿದೆ. ರಾಜ್ಯಾದಾದ್ಯಂತ ಏಕ ಕಾಲದಲ್ಲಿ ಎಲ್ಲ ತಾಲೂಕುಗಳಲ್ಲಿ ಯೋಜನೆಯ ಉದ್ಘಾಟನೆ ನಡೆಯುತ್ತಿದ್ದು, ಇದರಿಂದಾಗಿ ಸಂತ್ರ ಸ್ತರಿಗೆ ಒಂದೇ ಕಡೆ ಸೂಕ್ತ ರೀತಿಯಲ್ಲಿ ಸೇವೆ ಶೀಘ್ರವಾಗಿ ದೊರೆಯಲಿವೆ ಎಂದರು.
ಸಹಾಯಕ ಕಮಿಷನರ್ ಎಚ್.ಕೆ. ಕೃಷ್ಣಮೂರ್ತಿ ಮಾತನಾಡಿ, ಕಾನೂನಿನ ಅರಿವಿನ ಕೊರತೆ ಹಾಗೂ ಭಯದ ಕಾರಣಕ್ಕೆ ದೌರ್ಜನ್ಯ ಪ್ರಕರಣಗಳು ತಡವಾಗಿ ಬೆಳಕಿಗೆ ಬರುತ್ತದೆ. ಇಂತಹ ಘಟನೆಗಳು ನಡೆದಾಗ ಇಲಾಖೆಗಳ ಗಮನಕ್ಕೆ ತರಬೇಕು. ಆಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು. ಆತ್ಮೀಯತೆಯಿಂದ ಸಹಕಾರ ಮಾಡುವ ಮಾದರಿಯಲ್ಲಿ ಗೆಳತಿ ವಿಶೇಷ ಯೋಜನೆಯ ಮುಖಾಂತರ ಉಚಿತ ಸೇವೆಗಳು ದೊರೆಯಲಿವೆ ಎಂದರು. ತಾ. ಪಂ. ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ದೌರ್ಜನ್ಯದಂತಹ ಪ್ರಕರಣಗಳು ನಡೆದಾಗ ಶೀಘ್ರವಾಗಿ ನ್ಯಾಯ ತೀರ್ಮಾನ ನಡೆಯಬೇಕು. ನೊಂದವರಿಗೆ ಪರಿಹಾರ ನೀಡುವ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಮನವಿ ಮಾಡಿದರು.
Related Articles
Advertisement
ನ್ಯಾಯವಾದಿ ನೇಮಕಮುಖ್ಯ ಅತಿಥಿಯಾಗಿ ಭಾಗವಹಿಸಿದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಸಿ.ಕೆ. ಬಸವರಾಜ್ ಮಾತನಾಡಿ, ಗೆಳತಿ ವಿಶೇಷ ಚಿಕಿತ್ಸಾ ಘಟಕಕ್ಕೆ ಕಾನೂನು ಸೇವೆಗಳ ಪ್ರಾಧಿಕಾರದಿಂದ ಒಬ್ಬ ನ್ಯಾಯವಾದಿಯನ್ನು ನೇಮಿಸಿ ಕಾನೂನಿನ ಉಚಿತ ಸೇವೆಗಳು ದೊರೆಯಲಿವೆ. ಆ ಮೂಲಕ ಪ್ರಕರಣಗಳು ಶೀಘ್ರ ಇತ್ಯರ್ಥಕ್ಕೆ ಅಥವಾ ನ್ಯಾಯ ಒದಗಿಸಿಕೊಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.