ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನನ್ನ ಆತ್ಮೀಯ ಸ್ನೇಹಿತ ಎಂದು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ಗುರುವಾರ ನಾಲ್ಕು ವೈದ್ಯಕೀಯ ಕಾಲೇಜುಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಸಂದರ್ಭದಲ್ಲಿ ಪ್ರಧಾನಿಯವರು ಈ ಮಾತುಗಳನ್ನಾಡಿದ್ದಾರೆ.
ಪಂಜಾಬ್, ಛತ್ತೀಸ್‌ಗಡದಂತೆ ರಾಜಸ್ಥಾನದಲ್ಲಿ ಕೂಡ ಕಾಂಗ್ರೆಸ್‌ನ ಆಂತರಿಕ ಬೇಗುದಿ ದಿನೇ ದಿನೇ ಹೆಚ್ಚುತ್ತಿರುವಂತೆಯೇ ಈ ಬೆಳವಣಿಗೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.
ಇದನ್ನೂ ಓದಿ:ಉಪ ಚುನಾವಣೆ: ಸಿದ್ದು-ಡಿಕೆಶಿ ಸಮಾಲೋಚನೆ
“ಗೆಹ್ಲೋಟ್ ಅವರು ರಾಜ್ಯದಲ್ಲಿ ಮಾಡಬೇಕಾಗಿರುವ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳ ಪಟ್ಟಿಯನ್ನು ನನಗೆ ತೋರಿಸಿದ್ದಾರೆ. ಅವರು ಮತ್ತು ನಾನು ಬೇರೆ ಪಕ್ಷದವರಾಗಿರಬಹುದು ಆದರೆ ಅವರು ನನ್ನ ಮೇಲೆ ಹೆಚ್ಚು ನಂಬಿಕೆಯಿಟ್ಟಿದ್ದಾರೆ. ಆ ಸ್ನೇಹ, ನಂಬಿಕೆಯೇ ಪ್ರಜಾಪ್ರಭುತ್ವದ ಶಕ್ತಿ’ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಗೆಹ್ಲೋಟ್ ಅವರು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ತೆರೆದು, ವೈದ್ಯಕೀಯ ಸಾಮಾಗ್ರಿ ಪಾರ್ಕ್ ಮತ್ತು ಬೃಹತ್ ಔಷಧ ಪಾರ್ಕ್ ತೆರೆಯುವಂತೆಯೂ ಪ್ರಧಾನಿಯವರಲ್ಲಿ ಮನವಿ ಮಾಡಿದರು.