Advertisement

ಗೀತಾರ್ಥ ಚಿಂತನೆ-3: 18= ವಿಶ್ವ+ದೇವನ ಸಂಕೇತ

08:39 PM Aug 10, 2024 | Team Udayavani |

ಜ್ಞಾನದ ಪಕ್ವತೆಯನ್ನು ಸೂಚಿಸುವ “ಪುಂಡರೀಕಾಕ್ಷ’ ಶಬ್ದವನ್ನು ಇನ್ನೊಂದು ಕಡೆ ಬಣ್ಣಿಸಲಾಗಿದೆ. ಅರಳಿದ ಕಣ್ಣುಳ್ಳವನು ಎಂದು ಅರ್ಥ. ಲೋಚನ ಮತ್ತು ಆಲೋಚನ ಶಬ್ದ ಇದರಿಂದಲೇ ಬಂದುದು.

Advertisement

ನಾರಾಯಣ ಎನ್ನುವುದು ಗೀತೆ ಮತ್ತು ಮಹಾಭಾರತ ಎರಡನ್ನೂ ಕ್ರೋಡೀಕರಿಸುವ ಶಬ್ದವಾಗಿದೆ. ನಾರಾಯಣ ಅಂದರೆ 18ರ ಸಂಕೇತ. ನಾ =5 (ತಥದಧನ), ರಾ=2 (ಯರ), ಯ=1 (ಯರಲವ), ಣ =10 (ತಥದಧನ, ಟಠಡಢಣ) ಒಟ್ಟು 18. ಇಡೀ ಜಗತ್ತನ್ನು ಪ್ರತಿನಿಧಿಸುವ ಕ್ರೋಡೀಕರಣ, ಎಲ್ಲ ಜೀವರಾಶಿಗಳ ಕ್ರೋಡೀಕರಣ ಇಲ್ಲಿದೆ. ಜೀವ 15 ಬೇಲಿಗಳಲ್ಲಿ ಬಂಧಿ, 16ನೆಯ ಜೀವ, 17ನೆಯ ಅಕ್ಷರತತ್ವ, 18ನೆಯ ಭಗವಂತ ಎಂಬರ್ಥವೂ ಇದೆ. ಆದ್ದರಿಂದಲೇ ನಮಸ್ಕಾರ ಮಾಡುವಾಗ ತ್ರಿಮತಸ್ಥ ಸ್ವಾಮೀಜಿಯವರೂ “ನಾರಾಯಣ’ ಎಂದು ಹೇಳುವುದು. ಭಕ್ತರು ಮಾಡಿದ ನಮಸ್ಕಾರವು ಭಗವಂತನ ಮೂಲರೂಪಕ್ಕೆ ಸಲ್ಲುವಂತಹದು ಎಂಬ ಅರ್ಥದಲ್ಲಿ ಹೀಗೆ ಹೇಳುವುದು. ತ್ರಿಮತಾಚಾರ್ಯರಾದ ಶಂಕರ, ರಾಮಾನುಜ, ಮಧ್ವರು ಗೀತೆಯ ಮಂಗಲಶ್ಲೋಕದಲ್ಲಿ ಮೊದಲಾಗಿ ನಾರಾಯಣನನ್ನು ಸ್ಮರಿಸಿದ್ದಾರೆ. ನಾರಾಯಣನೇ ಈ ಜಗತ್ತಿನ ಒಡೆಯ, ಆತನಿಂದಲೇ ಜಗತ್ತಿನ ಸೃಷ್ಟಿಯಾಯಿತು ಎಂಬುದು ಮೂಲದಲ್ಲಿ ಒಪ್ಪಿತ ವಿಷಯ.

Advertisement

Udayavani is now on Telegram. Click here to join our channel and stay updated with the latest news.

Next