Advertisement

Politics: ಗೀತಾ ಪಠಣ; ಬಿಜೆಪಿ-ಟಿಎಂಸಿ ನಡುವೆ ಹೊಸ ವಿವಾದದ ಕಿಡಿ

11:12 PM Dec 24, 2023 | Pranav MS |

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಭಗವದ್ಗೀತೆ ಸಾಮೂಹಿಕ ಪಠಣ ಕಾರ್ಯಕ್ರಮವು ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಹೊಸ ರಾಜಕೀಯ ಸಮರಕ್ಕೆ ಕಾರಣವಾಗಿದೆ. ಹಿಂದೂಗಳ ಐಕ್ಯತೆಗಾಗಿ ಈ ಕಾರ್ಯ ಕ್ರಮ ಎಂದು ಬಿಜೆಪಿ ಹೇಳಿಕೊಂಡರೆ, ಇದೊಂದು ರಾಜಕೀಯ ಕಾರ್ಯಕ್ರ ಮವೆಂದು ಟಿಎಂಸಿ ಕಿಡಿ ಕಾರಿದೆ. ವಿಧಾನಸಭೆ ವಿಪಕ್ಷ ನಾಯಕ ಸುವೇಂದು ಅಧಿ ಕಾರಿ, ಭಗವದ್ಗೀತೆ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಕೊಡುಗೆ. ಇದರ ಮೇಲೆ ನಂಬಿಕೆ ಇಲ್ಲದವರು ಅಪಹಾಸ್ಯ ಮಾಡುತ್ತಾರೆ.

Advertisement

ಈ ಕಾರ್ಯಕ್ರಮ ಬರೀ ಗೀತೆ ಪಠಣಕ್ಕೆ ಸಾಕ್ಷಿಯಾಗಿಲ್ಲ, ವಿಭಜಕ ಶಕ್ತಿಗಳ ವಿರುದ್ಧ ಹಿಂದೂಗಳು ಒಂದಾಗುವುದಕ್ಕೆ ಮುನ್ನುಡಿಯಾಗಿದೆ ಎಂದಿದ್ದರು. ಇದಕ್ಕೆ ಟಿಎಂಸಿ ನಾಯಕ ಉದಯನ್‌ ಗುಹಾ , ಬಿಜೆಪಿಗೆ ಧರ್ಮದೊಂದಿಗೆ ರಾಜಕೀಯ ಬೆರೆಸುವ ಅಭ್ಯಾಸವಿದೆ. ಇದರ ಬದಲಿಗೆ ಫ‌ುಟ್ಬಾಲ್‌ ಪಂದ್ಯವನ್ನೇ ಆಯೋಜಿಸಬಹುದಿತ್ತು ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next