Advertisement

ಗೀರ್‌ ತಳಿ, ವಿದೇಶಗಳಲ್ಲಿ ಬ್ರಹ್ಮ

11:24 PM Feb 22, 2020 | mahesh |

ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ ಸೌರಾಷ್ಟ್ರ ಬಳಿಯ ಗೀರ್‌ ಅರಣ್ಯಪ್ರದೇಶ ಇವುಗಳ ಮೂಲಸ್ಥಾನವಾಗಿದೆ. ಈ ಕಾರಣಕ್ಕಾಗಿ ಗುಜರಾತ್‌ನ ಪಶುಸಂಗೋಪನೆ ಇತಿಹಾಸದಲ್ಲಿ ಗೀರ್‌ ಪ್ರಮುಖ ತಳಿಯಾಗಿದೆ. ಗೀರ್‌ ಭಾರತದ ಅತ್ಯಂತ ಪ್ರಾಚೀನ ತಳಿಯೂ ಹೌದಾಗಿದ್ದು, ಬರೋಬ್ಬರಿ 1,200 ವರ್ಷಗಳಷ್ಟು ಹಳೆಯದು.

Advertisement

ದಿನಕ್ಕೆ 12-14 ಲೀಟರ್‌ ಹಾಲು ಕೊಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಹೆಚ್ಚು ರೋಗ ನಿರೋಧಕ ಶಕ್ತಿ ಮತ್ತು ಅಚ್ಚರಿ ಹುಟ್ಟಿಸುವಂತ ಬುದ್ಧಿಶಕ್ತಿಯನ್ನು ಇವು ಹೊಂದಿವೆ. ಗೀರ್‌ ದೊಡ್ಡಗಾತ್ರದ ತಳಿ ದನಗಳು 400-450 ಕಿ.ಗ್ರಾಂ. ತೂಗುತ್ತದೆ. ಇನ್ನು ಹೋರಿಗಳ ತೂಕ 550ರಿಂದ 650ಕೆ.ಜಿ. ಇದ್ದು, ಹೆಚ್ಚಾಗಿ ಕೆಂಪು ಮಿಶ್ರಿತ ಕಂದು ಬಣ್ಣವನ್ನು ಹೊಂದಿರುತ್ತವೆ. ಗೀರ್‌ ದನಗಳನ್ನು ಗುರುತಿಸುವುದು ತುಂಬಾ ಸುಲಭ. ಅಗಲ ಉಬ್ಬಿದ ಹಣೆ ಇದರ ವೈಶಿಷ್ಟ್ಯ. ತಜ್ಞರ ಪ್ರಕಾರ ಗೀರ್‌ ಸಾಮಾನ್ಯವಾಗಿ 21 ದಿನಕ್ಕೊಮ್ಮೆ ಬೆದೆಗೆ ಬರುತ್ತದೆ. ಬಹಳ ಸುಲಭವಾಗಿ ತಜ್ಞರ ಅಗತ್ಯವೇ ಇಲ್ಲದೆ ಗುರುತಿಸಬಹುದಾದಷ್ಟು ಸ್ಪಷ್ಟವಾಗಿ ಬೆದೆ ಲಕ್ಷಣಗಳು ಗೋಚರಿಸುತ್ತದೆ. ಮೊದಲನೇ ಬೆದೆ 20-24 ತಿಂಗಳುಗಳಲ್ಲಿ ಬರುತ್ತದೆ. 36 ತಿಂಗಳಲ್ಲಿ ಮೊದಲ ಕರುವಾದ ಬಳಿಕ ಹೆಚ್ಚು ಕಡಿಮೆ 300-320 ದಿನ ಹಾಲು ಕೊಡುತ್ತದೆ. 12-15 ವರ್ಷಗಳ ಆಯಸ್ಸಿನಲ್ಲಿ 6-10 ಕರುಗಳನ್ನು ಕೊಡುತ್ತದೆ.

ವಿದೇಶಗಳಲ್ಲೂ ಈ ಮಾದರಿಯ ದನಗಳು ಇವೆ. ಮುಖ್ಯವಾಗಿ ದಕ್ಷಿಣ ಅಮೆರಿಕದಲ್ಲಿ ಗೀರ್‌ ದನಗಳನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸಾಕಲಾಗುತ್ತದೆ. ಗೀರ್‌ ಅನ್ನು ವಿದೇಶದಲ್ಲಿ ಬ್ರಹ್ಮನ್‌ ಎಂಬ ಹೆಸರಿನಿಂದ ಕರೆಯುತ್ತಾರೆ. ಆಫ್ರಿಕಾ, ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡುಬರುವ ತಳಿ ಯಾಗಿವೆ. ಯಾವ ದೇಶಕ್ಕೆ ಹೋದರೂ ಗೀರ್‌ನ ಗುಣಲಕ್ಷಣ ಕೆಂಪು ಮಿಶ್ರಿತ ಕಂದು ಬಣ್ಣ, ಅಗಲ ಮುಖ, ಜೋತಾಡುವ ಕಿವಿಗಳು. ಈ ಜೋತಾಡುವ ಕಿವಿಗಳು ಕೆಳಗೆ ಒಂದನ್ನೊಂದು ತಾಕಿದರೆ ಅದನ್ನು ಪರಿಶುದ್ಧ ಗೀರ್‌ ತಳಿಯಾಗಿ ಗುರುತಿಸುತ್ತಾರೆ ಎನ್ನುತ್ತವೆ ಮೂಲಗಳು.

Advertisement

Udayavani is now on Telegram. Click here to join our channel and stay updated with the latest news.

Next