Advertisement
ಹೌದು, ನಂಜನಗೂಡಿನ ರಾಜೇಶ ಜೈನ್ ಹೈನುಗಾರಿಕೆಯಿಂದ ವೈನಾದ ಜೀವನ ನಡೆಸುತ್ತಿದ್ದಾರೆ. ವಿಶೇಷ ಎಂದರೆ, ಡೈರಿ ಎಂದರೆ ಹಾಲು ಮಾರಾಟ ಎಂದೇ ತಿಳಿದಿರುವ ಈ ಕಾಲದಲ್ಲಿ ಹಾಲು ಅಥವಾ ಮೊಸರು ಮಾರಾಟ ಮಾಡದೆಯೂ ಡೈರಿಯಿಂದ ಲಾಭಗಳಿಸಬಹುದು ಎನ್ನುವುದನ್ನು ನೋಡಲು ನೀವು ಇಲ್ಲಿಗೆ ಬರಬೇಕು.
Related Articles
Advertisement
ಇಲ್ಲಿ ದಿನಕ್ಕೆ 250 ಕ್ಕೂ ಹೆಚ್ಚು ಲೀ. ದೇಸಿ ಹಸುವಿನ ಹಾಲು ದೊರೆಯುತ್ತಿದೆ. ಅದನ್ನು ಮೊಸರು ಮಾಡಿ ಬೆಣ್ಣೆ ತೆಗೆದು ಇಲ್ಲಿಯೇ ತುಪ್ಪ ಮಾಡಲಾಗುತ್ತಿದೆ. ಒಂದು ರಾಜಸ್ಥಾನಿ ಕುಟುಂಬ ಇದಕ್ಕಾಗಿ ಇಲ್ಲಿಯೇ ವಾಸ ಮಾಡುತ್ತಿದೆ. ರಾಜೇಶ್ ನಿತ್ಯವೂ ತುಪ್ಪದ ತಯಾರಿ ಹಾಗೂ ಹಸುಗಳ ಮೇಲ್ವಿಚಾರಣೆ ನಡೆಸುತ್ತಾರೆ. ದೇಶಿ ಹಸುವಿನ ತುಪ್ಪಕ್ಕೆ ಭಾರಿ ಬೇಡಿಕೆ ಇದೆ. ಸಧ್ಯ ಇಲ್ಲಿನ ತುಪ್ಪ ಮಾರಾಟವಾಗುತ್ತಿರುವುದು ಚೆನ್ನೈ, ಬೆಂಗಳೂರಿನಲ್ಲಿ ಮಾತ್ರ. ಅದೂ ಆನ್ ಲೈನ್ ಬುಕಿಂಗ್ ಮೂಲಕ ತುಪ್ಪದ ಮಾರಾಟ ನಡೆಯುತ್ತಿದೆ. ಇಲ್ಲಿ ಎ, ಬಿ ಗ್ರೇಡ್ ಎಂಬ ಎರಡು ಬಗೆಯ ತುಪ್ಪ ಮಾರಾಟ ಮಾಡುತ್ತಿದ್ದಾರೆ. ಎ ಗ್ರೇಡ್ ತುಪ್ಪ ಕೆ.ಜಿ ಗೆ 2.000 ರೂ ಹಾಗೂ ಬಿ ಗೇÅಡ್ ತುಪ್ಪ ಪ್ರತಿ ಕೆ.ಜಿಗೆ 1.500 ರೂ. ಬೆಲೆ ಇದೆ. ಪ್ರತಿ ದಿನ ಒಂದೂವರೆ ಎರಡು ಕೆ.ಜಿಯಂತೆ ವಾರಕ್ಕೆ 10-12 ಕೆ.ಜಿ ತುಪ್ಪ ತಯಾರಿಸುತ್ತಾರೆ. ತಿಂಗಳಿಗೆ ಹೆಚ್ಚುಕಮ್ಮಿ 70-80 ಕೆ.ಜಿ ತುಪ್ಪ ತಯಾರಾಗುತ್ತದೆ.
ಶುದ್ಧ ಬೆಣ್ಣೆಯಿಂದ ತುಪ್ಪ ತಯಾರಿಸಿ ಅದನ್ನು ಪ್ರತಿ 500 ಗ್ರಾಂ. ಬಾಟಲ್‌ನಲ್ಲಿ ತುಂಬಿ ಅಂತರ್ಜಾಲದಲ್ಲಿ ಆರ್ಡರ್ ಮಾಡಿದ ಗ್ರಾಹಕರಿಗೆ ಕಳಿಸಲಾಗುತ್ತಿದೆ. ಗುಜರಾತಿನಿಂದ ತಂದಿರುವ ಹಸುಗಳಿಗೆ ತೆನೆ ಸಹಿತ ಹಸಿ ಜೋಳದ ದಂಟು ಹಾಗೂ ಹಿಂಡಿಯನ್ನು ಅಹಾರವಾಗಿ ನೀಡುತ್ತಾರೆ.
ಅಜೋಲವನ್ನು ಪ್ರತಿ ಹಸುವಿಗೆ ನಿತ್ಯ ಅರ್ಧ ಕೆ.ಜಿ ನೀಡಲಾಗುತ್ತದೆ. ಜಮೀನಿನಲ್ಲೆ ನೀರಿನ ಹೊಂಡವನ್ನು ನಿರ್ಮಿಸಿ ಅಜೋಲವನ್ನು ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಸಾವಯವ ಗೊಬ್ಬರಕ್ಕೆ ಭಾರೀ ಬೇಡಿಕೆ ಇದೆ. ರಾಜೇಶ್ ಜೈನ್- ಗೊಬ್ಬರ ಮಾರಿಕೊಂಡರೆ ಸಾಕು ಸಾರ್, ನಮ್ಮ ಖರ್ಚು ಬಂದು ಬಿಡುತ್ತದೆ ಎನ್ನುತ್ತಾರೆ. ಪ್ರಸ್ತುತ ಟನ್ ಗೊಬ್ಬರಕ್ಕೆ 12ಸಾವಿರ ರೂ. ಬೆಲೆ ಇದೆ.
– ಶ್ರೀಧರ್ ಆರ್. ಭಟ್