ಮರಗಳಿದ್ದವು. ಇದಕ್ಕೆ ಯಾವುದೇ ರೀತಿಯ ಗೊಬ್ಬರ ಅಗತ್ಯ ಇರಲಿಲ್ಲ. ನೈಸರ್ಗಿಕವಾಗಿ ಬೆಳೆಯುತ್ತಿತ್ತು. ಇದನ್ನು ಯಾರೂ ನೆಟ್ಟದ್ದು ಅಲ್ಲ. ಆದರೆ ಇಂದು ಇಂತಹ ಮರಗಳು ಸಿಗುತ್ತಿಲ್ಲ. ಹೊಸ ಗಿಡ ನೆಡುವುದಕ್ಕಿಂತ ಇಂತಹ ಮರಗಳನ್ನು ಬೆಳೆಸುವುದು ಉತ್ತಮ. ಈ ಕಡೆ ಯಾಕೆ ಗಮನ ಕೊಡಬಾರದು ಎಂದರು.
Advertisement
ಇದಕ್ಕೆ ಉತ್ತರಿಸಿದ ಕೃಷಿಕ ಶೀನಪ್ಪ, ಒಂದೇ ಮರ ಇಷ್ಟು ಇಳುವರಿ ನೀಡುವ ನಿದರ್ಶನ ಇದೆ. ಆದರೆ ಗುಂಪಿನಲ್ಲಿ ದೊಡ್ಡ ಮಟ್ಟಿನ ಇಳುವರಿ ತೆಗೆಯುವುದು ಕಷ್ಟ. ಒಂದು ಮರದಿಂದ ಇನ್ನೊಂದು ಮರ ಸಾಕಷ್ಟು ದೂರ ಇದ್ದರೆ ಮಾತ್ರ, ಹೆಚ್ಚು ಇಳುವರಿ ನೀಡಲು ಸಾಧ್ಯ ಎಂದರು.
ಡಿಸಿಆರ್ ನಿರ್ದೇಶಕ ಎಂ. ಜಿ. ನಾಯಕ್, ಗೇರನ್ನು ಕೃಷಿಯಾಗಿ ಬೆಳೆಸುವಾಗ ಅಷ್ಟು ಜಾಗ ವೇಸ್ಟ್ ಮಾಡುವಂತಿಲ್ಲ. ಇದು ಸಾಧ್ಯವೂ ಇಲ್ಲ. ಮಾತ್ರವಲ್ಲ ಒಂದು ಗಿಡ 40 ವರ್ಷಗಳಷ್ಟು ಕಾಲ ಬದುಕಬೇಕಾದರೆ ತುಂಬಾ ಸಮಯವೂ ಬೇಕು. ಸದ್ಯದ ಸ್ಥಿತಿಯಲ್ಲಿ 20 ವರ್ಷಗಳಷ್ಟು ಹಳೆಯ ಮರಗಳು ಸಿಗಬಹುದು. ಆದರೆ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬಹುದು ಎಂದು ಹೇಳಿದರು. ಕಡ್ಡಿ ತೆಗೆಯುವುದು ಸಮಸ್ಯೆಯೇ?
ಕೃಷಿಕ ಕಡಮಜಲು ಸುಭಾಷ್ ರೈ ಮಾತನಾಡಿ, ಗೇರು ಗಿಡಗಳಿಂದ ಕಡ್ಡಿ ತೆಗೆಯುವುದು ಸಮಸ್ಯೆಯೇ? ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಜ್ಞಾನಿಗಳು ಮಾಹಿತಿ ನೀಡಬೇಕು ಎಂದು ಕೇಳಿಕೊಂಡರು. ಉತ್ತರಿಸಿದ ಎಂ. ಜಿ. ನಾಯಕ್, ಒಂದು ಕಡ್ಡಿಗೆ 2 ರೂ. ಸಿಗಬಹುದು. ಒಂದು ಗಿಡದಿಂದ 10 ಕಡ್ಡಿ ತೆಗೆದರೆ 20 ರೂ. ಆದಾಯ ಬರುತ್ತದೆ. ಅದೇ ಗಿಡದಲ್ಲಿ ಅಷ್ಟು ಕಡ್ಡಿಗಳಿದ್ದರೆ, 10 ಕೆ.ಜಿ.ಯಷ್ಟು ಗೇರು ಇಳುವರಿ ಸಿಗಬಲ್ಲುದು. ಕಡ್ಡಿ ತೆಗೆಯಬಾರದು ಎಂದೇನಿಲ್ಲ. ಆದರೆ ಆದಾಯದ ಬಗ್ಗೆಯೂ ಸ್ವಲ್ಪ ನೋಡಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
Related Articles
Advertisement
ಡಿಸಿಆರ್‌ನ ಅಬ್ರಹಾಂ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಜಿಲ್ಲಾ ನಿರ್ದೇಶಕ ಸೀತಾ ರಾಮ ಶೆಟ್ಟಿ ಉಪಸ್ಥಿತರಿದ್ದರು. ಇದೇ ಸಂದರ್ಭ ಡಾ| ಮೋಹನ್ ತಳಕಳಕೊಪ್ಪ ನಿರ್ದೇಶನದಲ್ಲಿ ರಚಿಸಿದ ಗೇರು ಕೃಷಿಯ ಮಾಹಿತಿ ಹೊತ್ತ ಆ್ಯಂಡ್ರಾಯ್ಡ ಆ್ಯಪನ್ನು ಬಿಡುಗಡೆಗೊಳಿಸಲಾಯಿತು. 2018ರ ಕ್ಯಾಲೆಂಡರ್ ಹಾಗೂ ಜಾರ್ಖಂಡ್‌ನ ವಿಜ್ಞಾನಿ ಮಿನಿ ಪುದುವಾಳ್ ರಚಿಸಿದ ಬೆಂಗಾಳಿ ಕೃತಿ ಫರ್ಟಿಲೈಸರ್ ಅಪ್ಲಿಕೇಶನ್ ಅನ್ನು ಅನಾವರಣಗೊಳಿಸಲಾಯಿತು.
ಸಹಕಾರ ಅಗತ್ಯಕೆಸಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ನಾಟೇಕರ್ ಮಾತನಾಡಿ, ಕರ್ನಾಟಕ ಸ್ಟೇಟ್ ಕ್ಯಾಶ್ಯೂ ಡೆವಲಪ್‌ಮೆಂಟ್ ಕಾರ್ಪೊರೇಶನ್ ಅಡಿಯಲ್ಲಿ 26 ಸಾವಿರ ಹೆಕ್ಟೇರ್‌ನಷ್ಟು ಗೇರು ಕೃಷಿ ಇದೆ. ಆದರೆ ಇದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಕೂಲಿ ಮೊದಲಾದ ಸಮಸ್ಯೆಗಳಿಂದ ನಿರ್ವಹಣೆ ಸಮಸ್ಯೆ ಎದುರಾಗಿದೆ. ಯಂತ್ರಗಳ ಮೂಲಕ ಕೆಲಸ ಮಾಡಿದರೆ, ಸಮಸ್ಯೆ ನೀಗಿಸಬಹುದು. ಇದಕ್ಕೆ ಗೇರು ಸಂಶೋಧನ ನಿರ್ದೇಶನಾಲಯದ ಸಹಕಾರ ಬೇಕಾಗಿದೆ ಎಂದರು.