Advertisement

ಜಿಇ ಕಾರ್ಖಾನೆ ಆಡಳಿತ ಮಂಡಳಿ-ಕಾರ್ಮಿಕರ ಸಭೆ

11:37 AM May 25, 2018 | Team Udayavani |

ಶಹಾಬಾದ: ನಗರದ ಜಿಇ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಜಿಇ ಕಾರ್ಖಾನೆ ಕಾರ್ಮಿಕ ಮುಖಂಡರ ಸಭೆ ಕಲಬುರಗಿ ಸಹಾಯಕ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ಗುರುವಾರ ನಡೆಯಿತು.

Advertisement

ಸಭೆಯಲ್ಲಿ ಮತನಾಡಿದ ಸಹಾಯಕ ಕಾರ್ಮಿಕ ಆಯುಕ್ತ ದೇವರಾಜ, ಯಾವುದೇ ಸೂಚನೆ ನೀಡದೇ ಕಾರ್ಖಾನೆ ಗೇಟ್‌ ಬಂದ್‌ ಮಾಡಿರುವುದು ಕಾನೂನು ಬಾಹಿರ. ಕಾರ್ಮಿಕರು ಈಗಾಗಲೇ ತಮ್ಮ ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಕೂಡಲೇ ಕಾರ್ಮಿಕರ ಸಮಸ್ಯೆ ಪರಿಹರಿಸಿ ಎಂದು ಸೂಚಿಸಿದರು.

ಕಾರ್ಮಿಕ ಮುಖಂಡರಾದ ಮಾರುತಿ ಮಾನ್ಪಡೆ ಹಾಗೂ ಸತ್ಯನಾರಾಯಣ ಜೋಷಿ ಮಾತನಾಡಿ, ಈಗಾಗಲೇ ಗೇಟ್‌ ಬಂದ್‌ ಮಾಡಿ ಕಾರ್ಮಿಕರಿಗೆ ತೊಂದರೆ ನೀಡಿದ್ದಾರೆ.

ಸದ್ಯ ಕಂಪನಿ ಗೇಟ್‌ ತೆರೆಯಬೇಕು. ಅಲ್ಲದೇ ಹಾಜರಾತಿ (ಕಾರ್ಡ್‌ ಪಂಚ್‌ ಮಾಡಲು) ಹಾಕಲು ಅನುಮತಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಜಿಇ ಅಧಿಕಾರಿಗಳು ಪಂಚ್‌ ಮಷಿನ್‌ ಕೆಟ್ಟು ಹೋಗಿದೆ ಎಂದು ಹೇಳಿದರು. ಆದರೂ ಕಾರ್ಮಿಕರು ಗೇಟ್‌ ತೆಗೆಯಬೇಕು. ಪಂಚ್‌ ಮಾಡಲು ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದರು.

ಜಿಇ ಕಂಪನಿ ಅಧಿಕಾರಿ ಗ್ಲೇನ್‌ ಡಿಸೋಜಾ ಮಾತನಾಡಿ, ಗೇಟ್‌ ತೆರೆಯುವುದಕ್ಕೆ ನಮಗೆ ಯಾವುದೇ ಅಧಿಕಾರ ಇಲ್ಲ. ಅದು ನಮ್ಮ ಮೇಲಾಧಿಕಾರಿಗಳಿಗೆ ಬಿಟ್ಟಿದ್ದು. ಅವರ ಜತೆ ಸಮಾಲೋಚಿಸಿ ನಂತರ ತಿಳಿಸುತ್ತೇವೆ. ಅಲ್ಲದೇ ಕಂಪನಿ ಗೇಟ್‌ ಹತ್ತಿರ ಒಂದು ರಜಿಸ್ಟರ್‌ ಇಡಲಾಗುವುದು. ಕಾರ್ಮಿಕರು ಬಂದು ಸಹಿ ಮಾಡಬಹುದು ಎಂದು ಹೇಳಿದರು.

Advertisement

ಕಂಪನಿ ಅಧಿಕಾರಿಗಳು ಕೇವಲ ಸಬೂಬು ಹೇಳುತ್ತ ಯಾವುದೇ ಇತ್ಯರ್ಥಕ್ಕೆ ಬಾರದ ಕಾರಣ ಸಹಾಯಕ ಕಾರ್ಮಿಕರ ಆಯುಕ್ತರು ಸಭೆಯನ್ನು ಜೂನ್‌ 2ಕ್ಕೆ ಮುಂದೂಡಿದರು. ಅಲ್ಲದೇ ಕಾರ್ಮಿಕರ ಸಮಸ್ಯೆ ಬಗೆಹರಿಯದಿದ್ದರೆ ಕಾನೂನು ಬಾಹಿರ ಕ್ರಮ ತೆಗೆದುಕೊಂಡ ತಮ್ಮ ವಿರುದ್ಧ ಸರಕಾರಕ್ಕೆ ಪತ್ರ ಬರೆಯಲಾವುದು ಎಂದು ಹೇಳಿದರು.

ಜಿಇ ಕಂಪನಿ ಅಧಿಕಾರಿಗಳಾದ ನಿಂಗಪ್ಪ ಕಾರ್ಗಿ, ಎಸ್‌.ಎಸ್‌. ಶಂಕರ್‌, ಶ್ರೀಕಾಂತ ಜೋಷಿ, ಕಾರ್ಮಿಕ ಮುಖಂಡರಾದ ಮಹಾದೇವ ಮಾನಕರ್‌, ಭೀಮರಾಯ ಸಿರಗೊಂಡ, ದಾವೂದ್‌ ಹುಸೇನ್‌, ಮಹಾದೇವ, ಸ್ಟಾನ್ಲಿ, ಜಿ. ರಮೇಶ, ಶರಣು ಪಾಟೀಲ, ಸುಧಾಕರ, ವೀರೇಂದ್ರ, ಸೂರ್ಯಕಾಂತ ಕಲಾಲ, ನಿಂಗಣ್ಣ ಕಾರೊಳ್ಳಿ, ಸ್ಟಾನಿಲಿ, ಜಾನ್‌, ಮಹೇಶ ಹೀರಾಳ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next