Advertisement
ಜಿಡಿಎಸ್ ಕಮಿಟಿ ವರದಿಯನ್ನು ಮಾರ್ಪಾಡುಗಳೊಂದಿಗೆ ಜಾರಿಗೊಳಿ ಸುವುದು, ದಿನದ 8 ಗಂಟೆ ಕೆಲಸವನ್ನು ಪರಿಗಣಿಸುವುದು ಹಾಗೂ ಹುದ್ದೆ ಖಾಯಂಗೊಳಿಸುವಿಕೆ, ದಿಲ್ಲಿ ಮತ್ತು ಮದ್ರಾಸ್ ನ್ಯಾಯಾಲಯಗಳ ತೀರ್ಮಾ ನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡುವುದು ಹಾಗೂ ಟಾರ್ಗೆಟ್ ಹೆಸರಿನಲ್ಲಿ ನೌಕರರ ಮೇಲಿನ ದೌರ್ಜನ್ಯ ನಿಲ್ಲಿಸು ವಂತೆ ಆಗ್ರಹಿಸಿ ಹಕ್ಕೊತ್ತಾಯ ಮಂಡಿಸಲಾಯಿತು.
ಕರ್ನಾಟಕ ವಲಯ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಮಾತನಾಡಿ, ದೇಶದಲ್ಲಿ 1,26,498 ಗ್ರಾಮೀಣ ಅಂಚೆ ಕಚೇರಿಗಳಿದ್ದು, 2.70 ಲಕ್ಷ ನೌಕರರು ಇದ್ದಾರೆ. 2014-15ನೇ ಸಾಲಿನಲ್ಲಿ ಬಿ.ಡಿ. ಪ್ರಾಡೆಕ್ಟ್‌ನಲ್ಲಿ 2,600 ಕೋ.ರೂ. ವ್ಯವಹಾರ ಆಗಿದೆ. 2016-17ರಲ್ಲಿ ಪಿಎಂಎಸ್‌ಬಿವೈಯಲ್ಲಿ 12 ಲಕ್ಷ ಖಾತೆ ತೆರೆಯಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ 96 ಲಕ್ಷ ಖಾತೆ ತೆರೆದು, 8,820 ಕೋ.ರೂ. ವ್ಯವಹಾರ ಆಗಿದೆ. ಗ್ರಾಮೀಣ ಅಂಚೆ ಜೀವ ವಿಮೆಯಲ್ಲಿ ಸಾವಿರಾರು ಕೋ.ರೂ.ಗಷ್ಟು ವ್ಯವಹಾರ ಆಗಿದ್ದು, ಇದು ಗ್ರಾಮೀಣ ಅಂಚೆ ನೌಕರರ ಶ್ರಮದ ಪ್ರತಿಫಲ ಎಂದರು. ಪುತ್ತೂರು ವಿಭಾಗದ ಗೌರವಾಧ್ಯಕ್ಷ ಜಗತ್ಪಾಲ ಹೆಗ್ಡೆ ಮಾತನಾಡಿ, ಕೇಂದ್ರ ಸರಕಾರದ ಅಧೀನದ ಇಲಾಖೆ ಯಲ್ಲಿದ್ದು, ಅಂಚೆ ಇಲಾಖೆಗೆ ಗರಿಷ್ಠ ಆದಾಯ ತರುವ ಗ್ರಾಮೀಣ ಅಂಚೆ ನೌಕರರಿಗೆ ಇಎಸ್‌ಐ, ಪಿಎಫ್, ಇನ್‌ಕ್ರಿಮೆಂಟ್ ಸೇರಿದಂತೆ ಯಾವ ಸೌಲಭ್ಯ ನೀಡುತ್ತಿಲ್ಲ. 3ರಿಂದ 5 ತಾಸು ಕೆಲಸ ಎಂದಿದ್ದರೂ ನೌಕರರು 10 ತಾಸು ದುಡಿಯುತ್ತಾರೆ. ನೌಕರ ನಿವೃತ್ತನಾದ ಅನಂತರ ಆತನಿಗೆ ಆದಾಯವೂ ಇಲ್ಲ, ಆಧಾರವೂ ಇಲ್ಲ ಎಂದರು.
Related Articles
ಕೆಲವು ಅಂಚೆ ಕಚೇರಿಯಲ್ಲಿ 2 ಹುದ್ದೆ ಗಳನ್ನು ಓರ್ವನೇ ನಿಭಾಯಿಸುತ್ತಾನೆ. ಸಂಧ್ಯಾ ಸುರಕ್ಷಾ, ವೃದ್ಧಾಪ್ಯವೇತನ, ವಿಧವಾ ವೇತನ ಇನ್ನಿತ್ತರ ಪತ್ರ ವ್ಯವಹಾ ರಗಳನ್ನು ನಿಭಾಯಿಸುತ್ತಾರೆ. ಆದರೂ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬ ನೀತಿಯಂತೆ, ನೌಕರರನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
Advertisement