ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವ ಅರುಣ್ ಜೇತ್ಲಿ ವಿರುದ್ಧ ತನ್ನ ಮಾತಿನ ದಾಳಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತದ ಆರ್ಥಿಕತೆಯು ಅನುಭವಿಸಿರುವ ನಷ್ಟಕ್ಕೆ ಕೇಂದ್ರ ಸರಕಾರವೇ ಕಾರಣ ಎಂದು ಟೀಕಿಸಿದ್ದಾರೆ.
ಮೋದಿ ಸರಕಾರದಲ್ಲಿ ಜಿಡಿಪಿ ಎಂದರೆ Gross Divisive Politics ಎಂದೇ ಅರ್ಥ ಎಂಬುದಾಗಿ ರಾಹುಲ್ ಲೇವಡಿ ಮಾಡಿದ್ದಾರೆ.
ದೇಶದ ಆರ್ಥಿಕತೆಗೆ ಉಂಟಾಗಿರುವ ನಷ್ಟವನ್ನು ರಾಹುಲ್‌ಗಾಂಧಿ ಈ ರೀತಿ ಪಟ್ಟಿಮಾಡಿದ್ದಾರೆ.
ಹೊಸ ಬಂಡವಾಳ : 13 ವರ್ಷಗಳ ಕನಿಷ್ಠ
ಬ್ಯಾಂಕ್ ಸಾಲ ನೀಡಿಕೆ ಪ್ರಗತಿ : 63 ವರ್ಷಗಳ ಕನಿಷ್ಠ
ಉದ್ಯೋಗ ಸೃಷ್ಟಿ : 8 ವರ್ಷಗಳ ಕನಿಷ್ಠ
ಕೃಷಿ ಜಿವಿಎ ಪ್ರಗತಿ: 8 ವರ್ಷಗಳ ಕನಿಷ್ಠ
ವಿತ್ತೀಯ ಕೊರತೆ : 8 ವರ್ಷಗಳ ಗರಿಷ್ಠ
ನಿಂತು ಹೋಗಿರುವ ಯೋಜನೆಗಳು : ಗರಿಷ್ಠ .
Related Articles
ತಮ್ಮ ಟ್ವಿಟರ್ ಬರಹದಲ್ಲಿ ರಾಹುಲ್, Dear Mr Jait-lie ಎಂದು ಸಂಬೋಧಿಸಿದ್ದು ಕೇಂದ್ರವನ್ನು ಸುಳ್ಳು ಹೇಳುವ ಸರಕಾರ ಎಂದು ಟೀಕಿಸಿದ್ದಾರೆ.
‘ನಮ್ಮ ಪ್ರಧಾನಿಗೆ ಧನ್ಯವಾದಗಳು, ಅವರು ಹೇಳುವುದರ ಅರ್ಥವನ್ನು ಅವರು ಉದ್ದೇಶಿಸಿರುವುದಿಲ್ಲ ಅಥವಾ ತಾನು ಉದ್ದೇಶಿಸಿರುವುದನ್ನು ಅವರು ಹೇಳುವುದಿಲ್ಲ’ ಎಂದು ರಾಹುಲ್ ಲೇವಡಿ ಮಾಡಿದ್ದಾರೆ.
ರಾಹುಲ್ ಈ ಮೊದಲು ಜೇತ್ಲಿ ಅವರನ್ನು ದೇಶದ ಕಳಪೆ ಆರ್ಥಿಕತೆಗೆ ಕಾರಣರೆಂದು ದೂರಿದದ್ದರು.