Advertisement

ಈ ಬಾರಿ ಜಿಡಿಪಿ ಪ್ರಗತಿ ದರ ಶೇ.9ಕ್ಕಿಂತ ಕಡಿಮೆ: ಸಮೀಕ್ಷೆ

11:16 PM May 16, 2021 | Team Udayavani |

ಕೋಲ್ಕತಾ: ಕಳೆದ ವರ್ಷದ ಲಾಕ್‌ಡೌನ್‌ನ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ದೇಶದ ಹಣಕಾಸು ಪರಿಸ್ಥಿತಿ ಕೊರೊನಾ 2ನೇ ಅಲೆಯ ನಿರ್ಬಂಧಗಳಿಂದ ಮತ್ತೆ ಬಿಗಡಾಯಿಸುತ್ತಿದೆ.

Advertisement

ಹಾಗಾಗಿ, 2021-22ರ ಹಣಕಾಸು ವರ್ಷದ ಒಟ್ಟಾರೆ ದೇಶೀಯ ಉತ್ಪನ್ನ (ಜಿಡಿಪಿ) ಪ್ರಗತಿ ದರ ಶೇ.9ಕ್ಕಿಂತ ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

“ಕೇರ್‌ ರೇಟಿಂಗ್ಸ್‌’ ಎಂಬ ಸಂಸ್ಥೆ ನಡೆಸಿರುವ ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದವರಲ್ಲಿ ಶೇ.80ರಷ್ಟು ಜನರು, ನಾನಾ ರಾಜ್ಯಗಳಲ್ಲಿ ಜಾರಿಯಾಗಿರುವ ನಿರ್ಬಂಧಗಳಿಂದಾಗಿ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಕ್ಷೇತ್ರದ ಹಿನ್ನಡೆಗೆ ಕಾರಣವಾಗಲಿದೆ ಎಂದಿದ್ದಾರೆ.

ಬಹುಪಾಲು ಜನರು ಮೇ ಅಂತ್ಯದವರೆಗೆ ಲಾಕ್‌ಡೌನ್‌ ನಿರ್ಬಂಧಗಳು ಮುಂದುವರಿಯಬಹುದು ಎಂದು ಹೇಳಿರುವುದರಲ್ಲದೆ, ಕೊರೊನಾ ಎರಡನೇ ಅಲೆಯನ್ನು ನಿರ್ಬಂಧಿಸಲು ಲಾಕ್‌ಡೌನ್‌ ಸರಿಯಾದ ಮಾರ್ಗ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next