Advertisement

ಚಿತ್ತಿ ಮಳೆ ಅಬ್ಬರಕ್ಕೆ ಜನಜೀವನ ಸ್ತಬ್ಧ! 30ಕ್ಕೂ ಹೆಚ್ಚು ಮನೆಗಳಿಗೆ ಹಾನಿ

03:00 PM Oct 15, 2020 | sudhir |

ಗದಗ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಚುರುಕುಗೊಂಡಿರುವ “ಚಿತ್ತಿ’ ಮಳೆ ಬುಧವಾರ ಜಿಲ್ಲೆಯಲ್ಲಿ ವೃದ್ಧೆಯೊಬ್ಬರನ್ನು
ಬಲಿ ಪಡೆದಿದ್ದು, 30ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಬುಧವಾರ ದಿನವಿಡೀ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಆಂಧ್ರ ಪ್ರದೇಶದ ಕರವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದ “ಚಿತ್ತ’ ಮಳೆ ಆರಂಭದಲ್ಲೇ ರೌದ್ರಾವತಾರ ಪ್ರದರ್ಶಿಸುತ್ತಿದೆ.
ವಾಯುಭಾರ ಕುಸಿತದಿಂದಾಗಿ ಜಿಲ್ಲೆಯಲ್ಲಿ ಅ. 14 ಮತ್ತು 15ರಂದು ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಗದಗ ತಾಲೂಕು ಹಾಗೂ ರೋಣ, ನರಗುಂದ, ಗಜೇಂದ್ರಗಡ, ಮುಂಡರಗಿ ಕಳೆದ ಮೂರ್‍ನಾಲ್ಕು ದಿನಗಳಿಂದ ಮಳೆ ಆರ್ಭಟ ಮುಂದುವರಿದೆ. ಜನರು ಮನೆಯಿಂದ ಹೊರ ಬಾರದ ಸ್ಥಿತಿ ನಿರ್ಮಾಣಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿದೆ.

Advertisement

ಮಳೆಯಿಂದಾಗಿ ಬುಧವಾರ ಬೆಳಗ್ಗೆ ಜಿಲ್ಲೆಯ ಮಾಡಲಗೇರಿಯಲ್ಲಿ ಮನೆ ಗೋಡೆ ಕುಸಿದು, ಶಂಕ್ರವ್ವ(70) ಎಂಬ ವೃದ್ಧೆ ಬಲಿಯಾಗಿದ್ದಾರೆ. ಗದಗ ಸೇರಿದಂತೆ ವಿವಿಧೆಡೆ ಸುಮಾರು 30ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿರುವ ಬಗ್ಗೆ ಕಂದಾಯ ಇಲಾಖೆ ಅ ಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಈ ನಡುವೆ ಶಿರಹಟ್ಟಿ ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಮನೆಗಳು ಕುಸಿದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಭೇಟಿ ನೀಡಿ, ಪರಿಶೀಲಿಸಿದರು. ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು, ಸರಕಾರದ ವಸತಿ ಯೋಜನೆಯಲ್ಲಿ ಮನೆ ಒದಗಿಸುವ ಭರವಸೆ ನೀಡಿದರು. ಕಟಾವಿಗೆ ಬಂದಿರುವ ಶೇಂಗಾ,
ಸೂರ್ಯಕಾಂತಿ ಹಾಗೂ ಈರುಳ್ಳಿ ಬೆಳೆಗಳು ಬಹುತೇಕ ಹಾನಿಯಾಗಿವೆ.

ಮತ್ತೆ ಪ್ರವಾಹ ಭೀತಿ: ಜಿಲ್ಲೆಯಲ್ಲಿ ಬಹುತೇಕ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಕಳೆದ ಐದು ದಿನಗಳಿಂದ ನೀರಿನ ಹರಿವು ಸಾಧಾರಣವಾಗಿದೆ. ಆದರೆ ಬೆಣ್ಣೆಹಳ್ಳದಲ್ಲಿ ನೀರು ಅಪಾಯ ಮಟ್ಟಕ್ಕೆ ತಲುಪುತ್ತಿದ್ದು, ಹೊಳೆಆಲೂರು ಬಳಿ ಹೊಳೆಆಲೂರು-ಬದಾಮಿ ಸಂಪರ್ಕ ಕಲ್ಪಿಸುವ ರಸ್ತೆ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಮೂರು ದಿನಗಳಿಂದ
ಬೆಣ್ಣೆಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next