Advertisement
ಬೆಟಗೇರಿ ರಂಗಪ್ಪಜ್ಜನ ಮಠದ ಆವರಣದಲ್ಲಿ ಗದಗ ನ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡ “ಗದಗ ಹಬ್ಬ’ದ ಭಾಗವಾಗಿರುವ ವಾರ್ಡ್‌ಗಳ ಹಬ್ಬವನ್ನು ಉದ್ಘಾಟಿಸಿ ಮಾತನಾಡಿದರು.
Related Articles
Advertisement
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಖೇಲೋ ಇಂಡಿಯಾವನ್ನು ವರ್ಷಕ್ಕೆ ಎರಡು ಬಾರಿ ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ, ಪ್ರೋತ್ಸಾಹ ನೀಡುತ್ತಿದೆ. ಹೀಗಾಗಿ, ಕಾಮನ್‌ವೆಲ್ತ್ ಕ್ರೀಡಾಕೂಟ ಸೇರಿದಂತೆ ಭಾರತೀಯ ಕ್ರೀಡಾಪಟುಗಳು ಹೆಚ್ಚು ಹೆಚ್ಚು ಪದಕಗಳನ್ನು ಗೆದ್ದು ಇತಿಹಾಸ ನಿರ್ಮಿಸುತ್ತಿದ್ದಾರೆ. ಗದಗ ಭಾಗದಲ್ಲಿ ಅನಿಲ್ ಮೆಣಸಿನಕಾಯಿ ಅವರು ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುತ್ತಿರುವುದು ಕ್ರೀಡಾಪಟುಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸೋಷಿಯಲ್ ಮೀಡಿಯಾ, ವಿಶುವಲ್ ಮೀಡಿಯಾ ಮೂಲಕ ಪ್ರತಿಯೊಂದು ಕ್ರೀಡೆಗಳು ಇಂದು ಜನಸಾಮಾನ್ಯರನ್ನು ತಲುಪುತ್ತಿವೆ. ನಮ್ಮ ದೇಶದಲ್ಲಿ ಕ್ರೀಡೆ ಹೆಚ್ಚು ಮುಂಚೂಣಿಗೆ ಬರುತ್ತಿದೆ. ಆಟಗಳಲ್ಲಿ ಸೋಲು ಸಹಜ. ಸೋತವರು ಮುಂದಿನ ಬಾರಿ ಗೆದ್ದೇ ಗೆಲ್ಲುತ್ತಾರೆ. ಯಾಕೆ ಗೆಲುವು ಸಾಧ್ಯವಾಗಿಲ್ಲ ಎಂಬುದನ್ನು ಆಟದಿಂದ ನಾವು ಕಲಿಯುತ್ತೇವೆ ಎಂದು 2018ರ ಅನಿಲ್ ಮೆಣಸಿನಕಾಯಿ ಕೂದಲೆಳೆಯ ಅಂತರದ ಸೋಲನ್ನು ನೆನಪಿಸಿಕೊಂಡರು.
ಬಿಜೆಪಿ ಯುವ ಮುಖಂಡ, ಜಿಸಿಎಲ್ ರೂವಾರಿ ಅನಿಲ ಮೆಣಸಿನಕಾಯಿ ಮಾತನಾಡಿ, ಗದಗ ಹಬ್ಬ, ವಾರ್ಡ್ ಹಬ್ಬಗಳ ಸಂಗೀತ, ಸಾಹಿತ್ಯ ಕ್ರೀಡೆ ಒಳಗೊಂಡಿದೆ. ಗದಗ ನ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ಕಳೆದ 2 ಬಾರಿ ಯಶಸ್ವಿಯಾಗಿ ಜಿಸಿಎಲ್ ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿತ್ತು. ಇಂದಿನಿಂದ ಮುಂದಿನ 6 ತಿಂಗಳ ಕಾಲ ಗದಗ-ಬೆಟಗೇರಿ ಭಾಗದಲ್ಲಿ ವಾರ್ಡ್‌ಗಳ ಹಬ್ಬ, ಗ್ರಾಮೀಣ ಭಾಗದಲ್ಲಿ ಹಳ್ಳಿ ಹಬ್ಬ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಸಿಎಲ್ ಸಾಹಿತ್ಯ ರಚನೆಕಾರ ಹೃದಯಶಿವ ಮಾತನಾಡಿದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ್, ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ಸದಸ್ಯೆ ಲಕ್ಷ್ಮೀ ಕಾಕಿ, ವಿಜಯಲಕ್ಷ್ಮೀ ಮಾನ್ವಿ, ಶ್ರೀನಿವಾಸ ಹುಬ್ಬಳ್ಳಿ, ಹನುಮಂತಪ್ಪ ಅಳವಂಡಿ, ರವಿ ದಂಡಿನ, ಉಮೇಶಗೌಡ ಪಾಟೀಲ, ಸಿದ್ದಲಿಂಗೇಶ್ವರ ಮೆಣಸಿನಕಾಯಿ, ಬಿಜೆಪಿ ಜಿಲ್ಲಾಧ್ಯಕ್ಷ ಮುತ್ತಣ್ಣ ಲಿಂಗನಗೌಡ್ರ, ಜಗನ್ನಾಥಸಾ ಬಾಂಡಗೆ, ಕಿಶನ್ ಮೇರವಾಡೆ, ಪ್ರಶಾಂತ ನಾಯ್ಕರ್ ಇತರರಿದ್ದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಯಳವತ್ತಿ ಸ್ವಾಗತಿಸಿ, ಸಿದ್ದಲಿಂಗಶಾಸ್ತ್ರಿ ಸಿದ್ದಾಪೂರ ನಿರೂಪಿಸಿ, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ವಂದಿಸಿದರು.
ರಂಗಪ್ಪಜ್ಜನ ವಾಣಿ ಕಾರ್ಯರೂಪಕ್ಕೆ ತರಲಿದ್ದಾರೆ ಜನ
ಯಾವುದು ಅಲ್ಲ ಅದು ಹೌದು, ಯಾವುದು ಹೌದು ಅದು ಅಲ್ಲ ಎಂಬ ರಂಗಪ್ಪಜ್ಜನ ಸಿದ್ಧಾಂತದಂತೆ ಗದಗ ವಿಧಾನಸಭಾ ಕ್ಷೇತ್ರದ 2018ರ ಚುನಾವಣೆಯಲ್ಲಿ ಯಾರು ಗೆಲ್ಲಬೇಕಾಗಿತ್ತು ಅವರು ಪರಾಜಯಗೊಂಡಿದ್ದರು. ಮುಂಬರುವ 2023ರ ಚುನಾವಣೆಯಲ್ಲಿ ಮತದಾರರು ಪರಾಜಯಗೊಂಡವರನ್ನು ಗೆಲ್ಲಿಸುವ ಮೂಲಕ ರಂಗಪ್ಪಜ್ಜನ ವಾಣಿಯನ್ನು ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಸಚಿವ ಸಿ.ಸಿ. ಪಾಟೀಲ ಅವರು ಪರೋಕ್ಷವಾಗಿ ಅನಿಲ್ ಮೆಣಸಿನಕಾಯಿ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.