Advertisement

Gayatri Siddeshwara: ಜಿಲ್ಲೆ ಅಭಿವೃದ್ಧಿಗೆ ಮೋದಿ ಲಕ್ಷೀ ಕಟಾಕ್ಷ : ಗಾಯತ್ರಿ ಸಿದ್ದೇಶ್ವರ

09:15 AM Apr 02, 2024 | Team Udayavani |

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆಗೆ ಸ್ಮಾರ್ಟ್‌ಸಿಟಿ ಸೇರಿದಂತೆ ಅನೇಕ ಯೋಜನೆಗಳನ್ನು ಲಕ್ಷ್ಮೀ ರೂಪದಲ್ಲಿ ಕಳುಹಿಸಿ ಜಿಲ್ಲೆಯ
ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು. ಸೋಮವಾರ ಮಾಯಕೊಂಡ ವಿಧಾನಸಭಾ ಕ್ಷೇತ್ರದ
ಅಣಜಿ ಮತ್ತು ಆನಗೋಡು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಪ್ರಚಾರ ನಡೆಸಿದ ಅವರು, ದೇಶದಲ್ಲಿ 65 ವರ್ಷಗಳಲ್ಲಿ ಆಗದ ಅಭಿವೃದ್ಧಿ
ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿ ತೋರಿಸಿದ್ದಾರೆ ಎಂದರು.

Advertisement

ಕಾಂಗ್ರೆಸ್‌ 65 ವರ್ಷಗಳ ಕಾಲ ಭ್ರಷ್ಟಾಚಾರ ಮಾಡಿದ ಪರಿಣಾಮ ದೇಶ ಅಭಿವೃದ್ಧಿ ಕಂಡಿರಲಿಲ್ಲ. ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 10 ವರ್ಷದಲ್ಲೇ
ಭಾರತ ವಿಶ್ವಗುರು ಆಗುವತ್ತ ಸಾಗುತ್ತಿದೆ. ಇದರಿಂದ ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತಾಗಿದೆ. ಮೋದಿಯವರು ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡುವ ಸಂಕಲ್ಪದೊಂದಿಗೆ ಎಲ್ಲರೂ ನನಗೆ ಹೆಚ್ಚಿನ ಸಂಖ್ಯೆ ಯಲ್ಲಿ ಮತ ನೀಡಿ ಗೆಲ್ಲಿಸಿ ದೆಹಲಿಗೆ ಕಳುಹಿಸಬೇಕು ಎಂದು ಮನವಿ ಮಾಡಿದರು.

ಕಳೆದ ಚುನಾವಣೆಯಲ್ಲಿ ಮೋದಿ ಅವರು ದಾವಣಗೆರೆಗೆ ಬಂದಾಗ “ನೀವು ದೆಹಲಿಗೆ ಕಮಲ ಕಳುಹಿಸಿ, ನಾನು ಲಕ್ಷ್ಮೀ ಕಳುಹಿಸುತ್ತೇನೆ’ ಎಂದಿದ್ದರು.
ಕೊಟ್ಟ ಮಾತಿನಂತೆ ಮೋದಿ ಅವರು ದಾವಣಗೆರೆಗೆ ಸ್ಮಾರ್ಟ್‌ಸಿಟಿ ಸೇರಿದಂತೆ ಅನೇಕ ಯೋಜನೆಗಳನ್ನು ಲಕ್ಷ್ಮೀ ರೂಪದಲ್ಲಿ ಕಳುಹಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಅಣಬೇರು ಜೀವನಮೂರ್ತಿ, ರಾಜ್ಯ ಯುವ ಮೋರ್ಚಾದ ಉಪಾಧ್ಯಕ್ಷ ಜಿ.ಎಸ್‌. ಶ್ಯಾಮ್‌, ಬಿ.ಟಿ. ಸಿದ್ದಪ್ಪ, ಜಿ.ಎಸ್‌. ಅಶ್ವಿ‌ನಿ, ಜಿ.ಎಲ್‌. ರಾಜೀವ್‌, ಆಲೂರು
ನಿಂಗರಾಜ್‌, ಶ್ಯಾಗಲೆ ದೇವೇಂದ್ರಪ್ಪ, ಹನುಮಂತ ನಾಯ್ಕ, ಗ್ಯಾರಳ್ಳಿ ಶಿವಕುಮಾರ್‌, ಎಚ್‌.ಸಿ. ಜಯಮ್ಮ, ಅನಿಲ್‌ ಕುಮಾರ್‌ ನಾಯ್ಕ, ಕವಿತಾ ಜಯಣ್ಣ ಇದ್ದರು.

ವಿವಿಧೆಡೆ ಬಿಜೆಪಿ ಬಿರುಸಿನ ಪ್ರಚಾರ
ಕಿತ್ತೂರು, ಕುರುಡಿ, ಐಗೂರು, ಬೋರಗೊಂಡನಹಳ್ಳಿ, ಗಾಂಧಿ ನಗರ, ಹುಲಿಕಟ್ಟೆ, ಕೆರೆಯಾಗಳಹಳ್ಳಿ, ಗಿರಿಯಾಪುರ, ಗೊಲ್ಲರಹಳ್ಳಿ, ಅಣಜಿ, ಮೆಳ್ಳೆಕಟ್ಟೆ, ಆಲೂರುಹಟ್ಟಿ, ಲಿಂಗಾಪುರ, ಆಲೂರು, ಬಸವನಾಳು, ಬಸನವಾಳು ಗೊಲ್ಲರಹಟ್ಟಿ, ಶ್ರೀಕೃಷ್ಣ ನಗರ (ಐಗೂರು ಗೊಲ್ಲರಹಟ್ಟಿ), ಐಗೂರು, ಅಗಸನಕಟ್ಟೆ, ತುಂಬಿಗೆರೆ, ರುದ್ರನಕಟ್ಟೆ, ಶಾಸ್ತ್ರಿಹಳ್ಳಿ, ಕಂದನ ಕೋವಿ, ಮೂಡೇನಹಳ್ಳಿ, ಜಮ್ಮಾಪುರ, ಗುಡಾಳ್‌, ಮ್ಯಾಸರಹಳ್ಳಿ, ಕೆಂಚಮ್ಮನಹಳ್ಳಿ, ಗುಮ್ಮನೂರು, ಕದರಪ್ಪನಹಟ್ಟಿ, ಹೊಸಳ್ಳಿ, ಪವಾಡರಂಗವ್ವನಹಳ್ಳಿ, ಶಿವಪುರ ಗ್ರಾಮಗಳಲ್ಲಿ ಗಾಯತ್ರಿ ಸಿದ್ದೇಶ್ವರ ಮತಯಾಚನೆ ಮಾಡಿದರು. ಅಭಿಮಾನಿಗಳು, ಕಾರ್ಯಕರ್ತರು, ಗ್ರಾಮಸ್ಥರು ಅದ್ಧೂªರಿಯಾಗಿ ಸ್ವಾಗತಿಸಿದರು. ಬಿಜೆಪಿ ಅಭ್ಯರ್ಥಿ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

Advertisement

ಇದನ್ನೂ ಓದಿ: Subedar Thanseia: ಎರಡನೇ ಮಹಾಯುದ್ಧದ ವೀರ ಸುಬೇದಾರ್ ಥಾನ್ಸೆಯಾ ನಿಧನ

Advertisement

Udayavani is now on Telegram. Click here to join our channel and stay updated with the latest news.

Next