Advertisement

ವೈಯಕ್ತಿಕ, ಸಾಮಾಜಿಕ ಜಾಗೃತಿಯಿಂದ ಕೋವಿಡ್ ಹರಡುವಿಕೆ ತಡೆಯಲು ಸಾಧ್ಯ: ಗವಿಸಿದ್ದೇಶ್ವರ ಶ್ರೀ

11:32 AM Sep 06, 2020 | keerthan |

ಗಂಗಾವತಿ: ಮಹಾಮಾರಿ ಕೋವಿಡ್ ರೋಗವನ್ನು ಓಡಿಸಲು ಪ್ರತಿಯೊಬ್ಬರು ವೈಯಕ್ತಿಕ, ಸಾಮಾಜಿಕ ಅಂತರ ಮತ್ತು ಆರೋಗ್ಯ ಜಾಗೃತಿಯಿಂದ ಹರಡದಂತೆ ತಡೆಯಲು ಸಾಧ್ಯ ಎಂದು ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

Advertisement

ಅವರು ರವಿವಾರ ಪಂಪಾನಗರದ ಪಾಂಡುರಂಗ ದೇವಸ್ಥಾನದ ಆವರಣ ಮತ್ತು ಡೈಲಿ ಮಾರ್ಕೆಟ್ ಕೋವಿಡ್ ರೋಗದ ಬಗ್ಗೆ ಜನ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ನಿಂದ ಪ್ರತಿಯೊಂದು ಕ್ಷೇತ್ರ ನಷ್ಟ ಅನುಭವಿಸುತ್ತಿವೆ. ಜನಸಾಮಾನ್ಯರು ಕಷ್ಟದಲ್ಲಿದ್ದು ಉಳ್ಳವರು ಇಲ್ಲದವರ ನೆರವಿಗೆ ಬರಬೇಕು. ಕೋವಿಡ್ ಹರಡದಂತೆ ತಡೆಯಲು ಸಾಮಾಜಿಕ ಅಂತರ ಸ್ಯಾನಿಟೈಜರ್ ಬಳಕೆ ಪ್ರತಿಯೊಬ್ಬರು ಮಾಸ್ಕ್ ಧರಿಸಿ ತಮ್ಮ ಕಾರ್ಯಗಳನ್ನು ಮಾಡುವಂತೆ ಸ್ವಾಮೀಜಿ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾಧಿಕಾರಿ ವಿಕಾಸ್ ಸುರಳ್ಕರ್ ಕಿಶೋರ್, ವಾರ್ಡಿನ ನಗರಸಭೆ ಸದಸ್ಯ ವಾಸುದೇವ ನವಲಿ, ನಗರ ಮಂಡಲ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಧೂಳ ಹಾಗು ವಾರ್ಡಿನ ನಿವಾಸಿಗಳು, ನಗರಸಭೆ ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next