Advertisement
ತಾಲೂಕಿನ ಭೈರಾಪೂರ ಗ್ರಾಮಕ್ಕೆ ರವಿವಾರ ಸಂಜೆ ಸದ್ದಿಲ್ಲದೇ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವ ಬ್ರಿಜ್ ಕಂ ಬ್ಯಾರೇಜ್‌ನ್ನು ವೀಕ್ಷಣೆ ಮಾಡಿದರು. ಬ್ಯಾರೇಜ್ ನಿರ್ಮಾಣ ಮಾಡಿ 4 ವರ್ಷ ಗತಿಸಿದ್ದು ಎಲ್ಲ ಗೇಟ್‌ಗಳು ಕಿತ್ತು ಹೋಗಿವೆ. ಸೇತುವೆಯಲ್ಲಿ ಹೂಳು ತುಂಬಿದ್ದರಿಂದ ನೀರು ಸಂಗ್ರಹ ಆಗುತ್ತಿರಲಿಲ್ಲ. ಇದರ ಮಾಹಿತಿ ಅರಿತ ಶ್ರೀಗಳು ಸದ್ದಿಲ್ಲದೇ ಗ್ರಾಮಕ್ಕೆ ತೆರಳಿದ್ದರು. ಶ್ರೀಗಳು ಊರಿಗೆ ಆಗಮಿಸಿದ್ದನ್ನು ನೋಡಿದ ಜನ ನಮ್ಮೂರಿಗೆ ದೇವರೇ ಬಂದರೆಂದು ಎಲ್ಲೆಡೆಯೂ ಅವರಿಗೆ ಸ್ವಾಗತ ದೊರೆಯಿತು. ಆದರೆ ನೇರ ಸೇತುವೆಯ ಸ್ಥಳಕ್ಕೆ ತೆರಳಿದ ಶ್ರೀಗಳು ಹೂಳು ತುಂಬಿಕೊಂಡಿರುವುದನ್ನು, ಗೇಟ್ ಇರದೇ ಇರುವುದನ್ನು ಗಮನಿಸಿದರು.
ಈ ಗ್ರಾಮಕ್ಕೆ ಶ್ರೀಗಳು ಸದ್ದಿಲ್ಲದೇ ಬಂದು ಸೇತುವೆ ನೋಡಿ ತೆರಳಿದ್ದು ಸ್ವತಃ ಗ್ರಾಮಸ್ಥರಲ್ಲಿಯೇ ಅಚ್ಚರಿ ಮೂಡಿಸಿದೆ. ಶ್ರೀಗಳು ನಮ್ಮೂರಿಗೆ ಆಗಮಿಸಿದ್ದಾರೆಂದರೆ ನಮ್ಮೂರಿನ ಸಮಸ್ಯೆ ಬಗೆ ಹರಿದಂತಾಗಲಿದೆ. ರೈತರ ಬದುಕಿಗೆ ಒಂದು ಮಾರ್ಗ ಸಿಕ್ಕಂತಾಗಲಿದೆ ಎನ್ನುವ ಕನಸು ಕಂಡಿದ್ದಾರೆ. ಶ್ರೀಗಳಿಗೆ ಗ್ರಾಪಂ ಸದಸ್ಯ ನಿಂಗಪ್ಪ ಮೇಟಿ, ದೇವಪ್ಪ ಮೇಟಿ, ದೇವಪ್ಪ ರಡ್ಡೆರ್, ಯಲ್ಲಪ್ಪ ಹರನಾಳಗಿ, ರವಿ ಮೇಟಿ, ರಾಮಣ್ಣ ಸನ್ನಪೂರ, ಭರಮಪ್ಪ ಸಿಂದೋಗಿ, ಬಸಯ್ಯ ಸಿಂದೋಗಿ, ಸಿದ್ಲಿಂಗಪ್ಪ ಹೊಳಿಯಾಚಿ, ಶರಣಪ್ಪ ತಟ್ಟಿ, ಕೊಟ್ರಯ್ಯ ಸಸಿ, ಶರೀಫ್‌ಸಾಬ್ ಬೆಳಗಟ್ಟಿ ಸೇರಿದಂತೆ ಇತರರು ಇದ್ದರು.