Advertisement

ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯ ರಶ್ಮಿ; ಸಹಸ್ರಾರು ಭಕ್ತರಿಗೆ ನಿರಾಸೆ

07:11 PM Jan 14, 2021 | Team Udayavani |

ಬೆಂಗಳೂರು: ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಇಂದು ಬೆಳಕಿನ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ. ಆಗಸದಲ್ಲಿ ಮೋಡ ಅಡ್ಡ ಬಂದ ಹಿನ್ನಲೆಯಲ್ಲಿ ಐತಿಹಾಸ ಪ್ರಸಿದ್ದ ಗವಿ ಗಂಗಾಧರೇಶ್ವರನನ್ನು ಸೂರ್ಯನ ರಶ್ಮಿ ಸ್ಪರ್ಶಿಸಿದೆ ಪಥ ಬದಲಾಯಿಸಿದ್ದಾನೆ.

Advertisement

ಸೂರ್ಯ ದಕ್ಷಿಣಾಯ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ವೇಳೆ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ, ಶಿವಲಿಂಗವನ್ನು ಸ್ಪರ್ಶಿಸಿದೆ ಭಾಸ್ಕರ ಪಥ ಬದಲಾಯಿಸಿದ್ದಾನೆ. ಆ ಮೂಲಕ ಅಗೋಚರವಾಗಿಯೇ ಗವಿಗಂಗಾಧರನನ್ನು ಭಾಸ್ಕರ ಸ್ಪರ್ಶಿಸಿದ್ದಾನೆ.

ಪ್ರತಿ ಸಂಕ್ರಾಂತಿಯಂದು ಈ ದೇಗುಲದ ಶಿವಲಿಂಗದ ಮೇಲೆ ಸೂರ್ಯರಶ್ಮಿ ಅಭಿಷೇಕವಾಗುತ್ತಿತ್ತು. ಈ ಬಾರಿ ಸಂಜೆ 5:27ಕ್ಕೆ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ ಎಂದು ಸಹಸ್ರಾರು ಭಕ್ತರು ಕಾಯುತ್ತಲಿದ್ದರು. ಆದರೆ ಮೋಡ ಅಡ್ಡ ಬಂದ ಕಾರಣ ಸೂರ್ಯ ಶಿವಲಿಂಗವನ್ನು ಸ್ಪರ್ಶಿಸದೆ ಪಥ ಬದಲಿಸಿದ್ದಾನೆ.

ಆಗಸದಲ್ಲಿ ಮೋಡ ಅಡ್ಡ ಬಂದ ಹಿನ್ನಲೆಯಲ್ಲಿ ಐತಿಹಾಸ ಪ್ರಸಿದ್ದ ಗವಿ ಗಂಗಾಧರೇಶ್ವರನನ್ನು ಸೂರ್ಯನ ರಶ್ಮಿ ಸ್ಪರ್ಶಿಸಲು ಸಾಧ್ಯವಾಗಿಲ್ಲ ಎಂದು  ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next