Advertisement
“ನನಗೆ ಗೊತ್ತಿರುವ ಪ್ರಕಾರ, ಕೊಹ್ಲಿ ನಾಯಕತ್ವದ ಅವಧಿ ವಿಶ್ವಕಪ್ ವರೆಗೆ ಮಾತ್ರ ಇತ್ತು. ಅನಂತರ ಆಯ್ಕೆ ಸಮಿತಿ ಒಂದು ಸಭೆ ನಡೆಸಬೇಕಿತ್ತು. ಕನಿಷ್ಠ ಐದು ನಿಮಿಷದ ಸಭೆ ನಡೆಸಿಯಾದರೂ ಪುನರಾಯ್ಕೆ ಮಾಡಬಹುದಿತ್ತು’ ಎಂದು ಗಾವಸ್ಕರ್ ಕುಟುಕಿದ್ದಾರೆ.
ಒಂದು ಕಡೆ ಕೊಹ್ಲಿ, ತನ್ನ ಮತ್ತು ರೋಹಿತ್ ನಡುವೆ ಯಾವುದೇ ಭಿನ್ನಮತವಿಲ್ಲ ಎಂದು ಹೇಳಿಕೊಂಡಿದ್ದಾರೆ. ಮತ್ತೂಂದು ಕಡೆ ಬಿಸಿಸಿಐ ಅವರಿಬ್ಬರ ನಡುವೆ ಉದ್ಭವಿಸಿದೆ ಎಂದು ಹೇಳಲಾಗಿರುವ ಭಿನ್ನಮತಕ್ಕೆ ತೇಪೆ ಹಾಕಲು ಹೊರಟಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ, ಈಗಿನ ಕಾಲದಲ್ಲಿ ಬೆಂಬಲಿಗರು ಕಣಕ್ಕೆ ಪ್ರವೇಶ ಮಾಡುವುದರಿಂದ ವಿಷಯ ವಿಷಮ ಸ್ಥಿತಿಗೆ ಹೋಗುತ್ತಿದೆ. ಇಬ್ಬರೂ ಪ್ರಬುದ್ಧರು. ಅವರಿಬ್ಬರೊಂದಿಗೆ ಮಾತುಕತೆ ನಡೆಸಿದ ಬಳಿಕ ವಿಷಯ ಹದಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.