Advertisement

ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಉಳಿದಿರುವುದು ಇದೊಂದೆ ಮಾರ್ಗ: ಕೊಹ್ಲಿಗೆ ಗೌತಮ್ ‘ಗಂಭೀರ’ಸಲಹೆ

12:45 PM Nov 07, 2020 | keerthan |

ಅಬುಧಾಬಿ: ‘ಈ ಸಲ ಕಪ್ ನಮ್ಮದೇ’ ಎಂದು ಪ್ರತಿ ಬಾರಿಯಂತೆ ಈ ಸಲವೂ ಹೇಳಿಕೊಂಡು ಟೂರ್ನಿ ಆರಂಭಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಮುಗ್ಗರಿಸಿದೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ಕೂಟದಿಂದಲೇ ಹೊರಬಿದ್ದಿದೆ.

Advertisement

ಕಳಪೆ ಆಟದ ಕುರಿತಂತೆ ಆರ್ ಸಿಬಿ ಮತ್ತು ನಾಯಕ ವಿರಾಟ್ ಕೊಹ್ಲಿ ವಿರುದ್ಧ ಭಾರಿ ಅಸಮಾಧಾನ ಕೇಳಿಬಂದಿದೆ. ಅಭಿಮಾನಿಗಳು ವಿರಾಟ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದರ ಮಧ್ಯೆ ಮಾಜಿ ಆಟಗಾರ ಗೌತಮ್ ಗಂಭೀರ್ ಅವರು ಕೊಹ್ಲಿಗೆ ‘ಗಂಭೀರ’ ಸಲಹೆ ನೀಡಿದ್ದಾರೆ.

ಐಪಿಎಲ್ ಕೂಟದಲ್ಲಿ ಇದುವರೆಗೆ ಎಂಟು ಬಾರಿ ಆರ್ ಸಿಬಿ ತಂಡವನ್ನು ಮುನ್ನಡೆಸಿರುವ ವಿರಾಟ್ ಕೊಹ್ಲಿ ಇದುವರೆಗೂ ಒಂದೂ ಕಪ್ ಗೆದ್ದಿಲ್ಲ. ಹೀಗಾಗಿ ಆರ್ ಸಿಬಿಯ ನಾಯಕತ್ವವನ್ನು ವಿರಾಟ್  ತ್ಯಜಿಸಬೇಕು ಎಂದು ಗಂಭೀರ್ ಹೇಳಿದ್ದಾರೆ.

ಎಂಟು ಬಾರಿ ನಾಯಕನಾಗಿ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ ಎಂದಾದರೆ ನಾಯಕನೇ ಜವಾಬ್ದಾರಿ ಹೊರಬೇಕು. ಎಂಟು ವರ್ಷದಷ್ಟು ದೊಡ್ಡ ಸಮಯವನ್ನೇ ಫ್ರಾಂಚೈಸಿ ನೀಡಿದೆ. ಬೇರೆ ಯಾವ ನಾಯಕನಿದ್ದಾನೆ? ಯಾವ ಆಟಗಾರ ಕಪ್ ಗೆಲ್ಲಲಾಗದೇ ಇಷ್ಟು ಸಮಯ ಒಂದೇ ತಂಡದಲ್ಲಿದ್ದಾನೆ? ಎಂದು ಗಂಭೀರ್ ಖಾಸಗಿ ಕ್ರೀಡಾ ಕಾರ್ಯಕ್ರಮದಲ್ಲಿ ಹೇಳಿದರು.

ಹೈದರಾಬಾದ್ ವಿರುದ್ದದ ಪಂದ್ಯದಲ್ಲಿ ಆರ್ ಸಿಬಿ ಆರು ವಿಕೆಟ್ ಅಂತರದ ಸೋಲನುಭವಿಸಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ಏಳು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಿದ್ದರೆ, ಗುರಿ ಬೆನ್ನಟ್ಟಿದ ಹೈದರಾಬಾದ್ ನಾಲ್ಕು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next