Advertisement

ರೋಹಿತ್ ಜತೆಗೆ ಈ ಆಟಗಾರನೇ ಇನ್ನಿಂಗ್ಸ್ ಆರಂಭಿಸಲಿ: ರಾಹುಲ್ ಗೆ ಅವಕಾಶ ನೀಡದ ಗಂಭೀರ್

06:13 PM Dec 31, 2022 | Team Udayavani |

ಮುಂಬೈ: ಮುಂಬರುವ ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿ ರೋಹಿತ್ ಶರ್ಮಾ ಜೊತೆಗೆ ಇಶಾನ್ ಕಿಶನ್ ಭಾರತದ ಮೊದಲ ಆಯ್ಕೆಯ ಆರಂಭಿಕ ಆಟಗಾರನಾಗಬೇಕು ಎಂದು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಚಟ್ಟೋಗ್ರಾಮ್‌ ನಲ್ಲಿ ಬಾಂಗ್ಲಾದೇಶದ ವಿರುದ್ಧದ ತನ್ನ ಇತ್ತೀಚಿನ ಪಂದ್ಯದಲ್ಲಿ, ಕಿಶನ್ ತನ್ನ ಮೊದಲ ಏಕಿದನ ಶತಕವನ್ನೇ ದ್ವಿಶತಕವಾಗಿ ಪರಿವರ್ತಿಸಿದ್ದರು. ವಿಕೆಟ್‌ ಕೀಪರ್ ಬ್ಯಾಟರ್ ತನ್ನ ಏಕದಿನ ಇತಿಹಾಸದಲ್ಲಿ ಅತ್ಯಂತ ವೇಗದ ದ್ವಿಶತಕ ಬಾರಿಸಿದ್ದಾರೆ. ಈಗ ಶಿಖರ್ ಧವನ್ ಅವರನ್ನು ಏಕದಿನಗಳಲ್ಲಿ ಪರಿಗಣಿಸುತ್ತಿಲ್ಲ. ಹೀಗಾಗಿ ಇಶಾನ್ ಕಿಶನ್ ಓಪನರ್ ರೂಪದಲ್ಲಿ ಮುಂದುವರಿಸಬೇಕು ಎಂದು ಗಂಭೀರ್ ಭಾವಿಸಿದ್ದಾರೆ.

” ಚರ್ಚೆ ಮುಗಿದಿದೆ. ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಬೇಕು. ಉತ್ತಮ ಬೌಲಿಂಗ್ ದಾಳಿಯ ವಿರುದ್ಧ ಆ ಪರಿಸ್ಥಿತಿಗಳಲ್ಲಿ ದ್ವಿಶತಕ ಗಳಿಸಿದ ಆತ ಆಡಬೇಕು” ಎಂದು ಕೇಳಿದಾಗ ಗಂಭೀರ್ ಹೇಳಿದ್ದಾರೆ.

ಜನವರಿ 3 ರಿಂದ ಜನವರಿ 15 ರವರೆಗೆ ಪ್ರಾರಂಭವಾಗುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗೆ ಕಿಶನ್ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ:ಚಿನ್ನ, ಬೆಳ್ಳಿಯ ಆಡಂಬರದ ಹರಕೆ ಈ ದೇವರಿಗೆ ಬೇಕಾಗಿಲ್ಲ… ಭಕ್ತರಿಂದ ಬಯಸುವುದು ಮಣ್ಣಿನ ಮೂರ್ತಿಗಳನ್ನು ಮಾತ್ರ

Advertisement

ಸೂರ್ಯಕುಮಾರ್ ಯಾದವ್ ಅವರ 50 ಓವರ್‌ ಗಳ ಬ್ಯಾಟಿಂಗ್ ಅವರ T20 ಪ್ರದರ್ಶನಗಳಂತೆ ಗಮನಾರ್ಹವಲ್ಲದಿದ್ದರೂ ಸಹ, ಅವರು ಏಕದಿನದಲ್ಲಿ ನಂ. 4 ರಲ್ಲಿಆಡಬೇಕು ಎಂದು ಗಂಭೀರ್ ಅಭಿಪ್ರಾಯ ಪಟ್ಟಿದ್ದಾರೆ. ಸೂರ್ಯಕುಮಾರ್ 16 ಏಕದಿನಗಳಲ್ಲಿ ಕೇವಲ ಎರಡು ಅರ್ಧ ಶತಕಗಳೊಂದಿಗೆ 384 ರನ್ ಗಳಿಸಿದ್ದಾರೆ.

” ರೋಹಿತ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ, ವಿರಾಟ್ ಮೂರರಲ್ಲಿ, ಸೂರ್ಯ ನಾಲ್ಕರಲ್ಲಿ, ಐದರಲ್ಲಿ ಶ್ರೇಯಸ್ ಅಯ್ಯರ್ ಆಡಬೇಕು. ಅವರನ್ನು ಮೀರಿ ನೋಡುವುದು ತುಂಬಾ ಕಷ್ಟ, ಏಕೆಂದರೆ ಕಳೆದ ಒಂದೂವರೆ ವರ್ಷಗಳಲ್ಲಿ ಅವರು ನಂಬಲಾಗದಂತಹ ಫಾರ್ಮ್ ನಲ್ಲಿದ್ದಾರೆ. ಅವರಿಗೆ ಶಾರ್ಟ್ ಬಾಲ್ ಸಮಸ್ಯೆಗಳಿದ್ದರೂ, ಅವರು ಅದನ್ನು ನಿರ್ವಹಿಸಲು ಸಮರ್ಥರಾಗಿದ್ದಾರೆ. ಹಾರ್ದಿಕ್ ಪಾಂಡ್ಯ 6 ನೇ ಕ್ರಮಾಂಕದಲ್ಲಿ ಆಡಬೇಕು ಎಂದು” ಗಂಭೀರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next