ಹೊಸದಿಲ್ಲಿ : ಕ್ರಿಕೆಟಿಗ ಗೌತಮ್ ಗಂಭೀರ್ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮ ರಾದ ಎಎಸ್‌ಐ ಓರ್ವರ ಮಗಳ ಸಂಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿ ಮಾನವೀಯತೆ ಮೆರೆದಿದ್ದಾರೆ.
ಸೈನಿಕರ ನೋವು ನನ್ನ ನೋವು ಎಂದು ಅವರಿಗಾಗಿ ಸದಾ ನೆರವಾಗುವ ಗಂಭೀರ್ ಅವರು ಅನಂತ್‌ನಾಗ್‌ನಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ಎಎಸ್‌ಐ ಅಬ್ದುಲ್ ರಶೀದ್ ಅವರ ಪುತ್ರಿ ಝೋಹ್ರಾಳ ಸಂಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಗಂಭೀರ್ ”ಝೋಹ್ರಾ ನೀನು ಲಾಲಿ ಹಾಡಿಗೆ ಮಲಗಿಕೊಂಡಿರುವುದು ಬೇಡ. ನೀನು ಎಚ್ಚೆತ್ತುಕೊ,ನಿನ್ನ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ನಾನು ನೆರವಾಗುತ್ತೇನೆ. ನಿನ್ನ ಜೀವಮಾನದ ಪೂರ್ತಿ ಶಿಕ್ಷಣಕ್ಕೆ ನಾನು ನೆರವು ನೀಡುತ್ತೇನೆ. ನಿನ್ನ ಕಣ್ಣೀರು ಬೀಳಲು ಬಿಡಬೇಡ.ನನಗನ್ನಿಸುತ್ತದೆ ಆ ಭೂಮಿ ತಾಯಿ ನಿನ್ನ ನೋವನ್ನು ನುಂಗಬಹುದು. ನಿನ್ನ ಹುತಾತ್ಮ ತಂದೆಗೆ ನನ್ನ ನಮನಗಳು” ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಈ ಹಿಂದೆ ಛತ್ತೀಸ್‌ಘಡದ ಸುಕ್ಮಾದಲ್ಲಿ ಹುತಾತ್ಮರಾದ 25 ಸಿಆರ್‌ಪಿಎಫ್ ಯೋಧರ ಮಕ್ಕಳ ಪೂರ್ಣ ಶಿಕ್ಷಣಕ್ಕೆ ನೆರವು ನೀಡುವುದಾಗಿ ಘೋಷಿಸಿದ್ದರು.
ಗೌತಮ್ ಗಂಭೀರ್ ಫೌಂಡೇಷನ್ ಸ್ಥಾಪಿಸಿಕೊಂಡಿಡಿದ್ದು ಆ ಮೂಲಕ ಈ ನೆರವು ನೀಡುತ್ತಿದ್ದಾರೆ.