ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಸೂರ್ಯಕುಮಾರ್ ಯಾದವ್ ರನ್ನು 2018ರಲ್ಲಿ ಮುಂಬೈ ಇಂಡಿಯನ್ಸ್ ತಂಡ ಖರೀದಿಸಿತ್ತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ಹೊಸ ಸೆನ್ಸೇಶನ್ ಸೃಷ್ಠಿಸಿದ ಸೂರ್ಯ ಕುಮಾರ್ ಯಾದವ್ ಬಳಿಕ ಟೀಂ ಇಂಡಿಯಾಗೂ ಆಯ್ಕೆಯಾಗಿದ್ದರು. ಸದ್ಯ ಮುಂಬರುವ ಟಿ20 ವಿಶ್ವಕಪ್ ಗೂ ಸೂರ್ಯಕುಮಾರ್ ಯಾದವ್ ಸ್ಥಾನ ಪಡೆದಿದ್ದಾರೆ.
ಸೂರ್ಯ ಕುಮಾರ್ ಯಾದವ್ ಯಶಸ್ಸಿನ ಕುರಿತು ಮಾತನಾಡಿರುವ ಮಾಜಿ ಕೆಕೆಆರ್ ನಾಯಕ ಗೌತಮ್ ಗಂಭೀರ್ ತನ್ನ ತಪ್ಪನ ಕುರಿತು ಹೇಳಿಕೊಂಡಿದ್ದಾರೆ.
ಸೂರ್ಯ ಕುಮಾರ್ ನನ್ನು ಮೂರನೇ ಕ್ರಮಾಂಕದಲ್ಲಿಆಡಿಸಲು ನನಗೆ ಸಾಧ್ಯವಾಗಲಿಲ್ಲ. ಆಗ ತಂಡದಲ್ಲಿ ಮನೀಷ್ ಪಾಂಡೆ, ಯೂಸುಫ್ ಪಠಾಣ್ ಇದ್ದರು. ಹೀಗಾಗಿ ಸೂರ್ಯ ಕುಮಾರ್ ಗೆ ಫಿನಿಶರ್ ಜವಾಬ್ದಾರಿ ನೀಡಲಾಗಿತ್ತು. ಸೂರ್ಯಕುಮಾರ್ ನನ್ನು ತಂಡದಿಂದ ಕೈಬಿಟ್ಟಿದ್ದು ಕೆಕೆಆರ್ ದೃಷ್ಠಿಯಿಂದ ನೋಡಿದರೆ ಇದು ದೊಡ್ಡ ನಷ್ಟ. ನಾಲ್ಕು ವರ್ಷ ಆತನನ್ನು ಬೆಳೆಸಿ ನಂತರ ಆತನನ್ನು ಕೈಬಿಡುಬಾರದಿತ್ತು. ಈಗ ಆತ ಅದ್ಭುತ ಪ್ರದರ್ಶನ ನೀಡುತ್ತಿದ್ದಾನೆ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಶಾರ್ಜಾದ ಐಪಿಎಲ್ ಪಂದ್ಯದಲ್ಲಿ ಹುಲಿ ಕುಣಿತದ ಸಂಭ್ರಮ: ವಿಡಿಯೋ ವೈರಲ್
ಕೆಕೆಆರ್ ನಲ್ಲಿದ್ದಾಗ ಸೂರ್ಯ ಕುಮಾರ್ ಹೆಚ್ಚಿನ ರನ್ ಗಳಿಸಿರಲಿಲ್ಲ. ಗೌತಮ್ ಗಂಭೀರ್ ಅದಕ್ಕೂ ಕಾರಣ ನೀಡಿದ್ದಾರೆ.
ಹೌದು, ಅದಕ್ಕೆ ಕಾರಣ ನಾವು ಆತನಿಗೆ ಸರಿಯಾದ ಜಾಗ ನೀಡಲಿಲ್ಲ. ಒಂದು ವೇಳೆ ಮೂರನೇ ಕ್ರಮಾಂಕದಲ್ಲಿ ಆಡಿದ್ದರೆ ಸೂರ್ಯ ಕುಮಾರ್ ಯಾದ ಒಂದು ಸೀಸನ್ ನಲ್ಲಿ 500, 600 ರನ್ ಗಳಿಸುತ್ತಿದ್ದ. ಒಬ್ಬರ ನಷ್ಟ-ಮತ್ತೊಬ್ಬರಿಗೆ ಲಾಭ. ಮುಂಬೈ ಗೆ ಇದೇ ಲಾಭವಾಯಿತು ಎಂದು ಗಂಭೀರ್ ಹೇಳಿದ್ದಾರೆ.