ನವದೆಹಲಿ:ಕೋವಿಡ್ 19 ಸೋಂಕಿತರಿಗೆ ಬಳಕೆ ಮಾಡುವ ತುರ್ತು ಔಷಧಿಗಳ ಅನಧಿಕೃತ ದಾಸ್ತಾನು, ವಿತರಣೆಗೆ ಸಂಬಂಧಿಸಿದಂತೆ ಗೌತಮ್ ಗಂಭೀರ್ ಫೌಂಡೇಶನ್ ದೋಷಿಯಾಗಿರುವುದಾಗಿ ದೆಹಲಿಯ ಔಷಧ ನಿಯಂತ್ರಕ ಮಂಡಳಿ ಪತ್ತೆಹಚ್ಚಿದೆ ಎಂದು ದೆಹಲಿ ಹೈಕೋರ್ಟ್ ಗುರುವಾರ(ಜೂನ್ 03) ಮಾಹಿತಿ ನೀಡಿರುವುದಾಗಿ ವರದಿಯೊಂದು ತಿಳಿಸಿದೆ.
ಇದನ್ನೂ ಓದಿ;ಕಾಂಗ್ರೆಸ್ ಮಾತು ಕೇಳಿದರೆ ಜೀವ ಹೋಗುತ್ತವೆ,ಬಿಜೆಪಿ ಮಾತು ಕೇಳಿದರೆ ಜೀವ ಉಳಿಯುತ್ತದೆ: ರಾಮುಲು
ವಿಳಂಬ ಮಾಡದೇ ಗೌತಮ್ ಗಂಭೀರ್ ಫೌಂಡೇಶನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ದೆಹಲಿ ಸರ್ಕಾರದ ಡ್ರಗ್ ಕಂಟ್ರೋಲರ್ ಕೋರ್ಟ್ ಗೆ ವರದಿಯನ್ನು ಸಲ್ಲಿಸಿದೆ. ಕೋವಿಡ್ ಚಿಕಿತ್ಸೆಯಲ್ಲಿ ಬಳಕೆ ಮಾಡುತ್ತಿದ್ದ ಫ್ಯಾಬಿಫ್ಲೂ ಮಾತ್ರೆಗಳನ್ನು ಗಂಭೀರ್ ಫೌಂಡೇಶನ್ ಸಂಸ್ಥೆ ಸಂಗ್ರಹಿಸಿ ವಿತರಣೆ ಮಾಡಿತ್ತು ಎಂದು ವರದಿ ತಿಳಿಸಿದೆ.
ಗೌತಮ್ ಗಂಭೀರ್ ಫೌಂಡೇಶನ್ ಕೋವಿಡ್ 19 ತುರ್ತು ಔಷಧಗಳನ್ನು ಸಂಗ್ರಹ ಮಾಡಿರುವ ವಿಚಾರದಲ್ಲಿ ದೋಷಿ ಎಂದು ಪತ್ತೆಯಾಗಿದೆ. ಅಲ್ಲದೇ ಇಂತಹ ಪ್ರಕರಣಗಳು ಕಂಡು ಬಂದರೆ ಮಾಹಿತಿ ನೀಡುವಂತೆ ಇತರ ಔಷಧ ವಿತರಕರಿಗೂ ಸೂಚನೆ ನೀಡಲಾಗಿದೆ ಎಂದು ಹೇಳಿದೆ.
ಶಾಸಕ ಪ್ರವೀಣ್ ಕುಮಾರ್ ಕೂಡಾ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ ಅಪರಾಧಿಯಾಗಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಇನ್ನು ಆರು ವಾರಗಳಲ್ಲಿ ಈ ಪ್ರಕರಣದ ಸ್ಥಿತಿಗತಿ ಬಗ್ಗೆ ವರದಿ ನೀಡುವಂತೆ ದೆಹಲಿ ಹೈಕೋರ್ಟ್ ಡ್ರಗ್ ಕಂಟ್ರೋಲ್ ರ್ ಗೆ ಸೂಚಿಸಿದ್ದು, ಜುಲೈ 29ರಂದು ಮುಂದಿನ ವಿಚಾರಣೆ ನಡೆಯಲಿದೆ ಎಂದು ತಿಳಿಸಿದೆ.