ಅಹಮದಾಬಾದ್: ಕೈಗಾರಿಕೋದ್ಯಮಿ ಉದ್ಯಮಿ ಗೌತಮ್ ಅದಾನಿ ಅವರ ಪುತ್ರ ಜೀತ್ ಅದಾನಿ ಭಾನುವಾರ (ಮಾ.12 ರಂದು) ದಿವಾ ಜೈಮಿನ್ ಶಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಗುಜರಾತಿನ ಅಹಮದಾಬಾದ್ ನಲ್ಲಿ ಕೆಲವೇ ಕೆಲ ಆತ್ಮೀಯರ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ಸಮಾರಂಭ ನಡೆದಿದ್ದು, ಒಂದು ಫೋಟೋ ಮಾತ್ರ ರಿವೀಲ್ ಆಗಿದೆ.
ದಿವಾ ಜೈಮಿನ್ ಶಾ ಸಿ.ದಿನೇಶ್ ಆ್ಯಂಡ್ ಕಂ ಪ್ರೈ.ಲಿ.ನ ವಜ್ರದ ವ್ಯಾಪಾರಿ ಜೈಮಿನ್ ಶಾ ಅವರ ಪುತ್ರಿಯಾಗಿದ್ದಾರೆ. ಎಂಗೇಜ್ ಮೆಂಟ್ ಆಗಿರುವ ಫೋಟೋಗಳು ಅಷ್ಟಾಗಿ ಹೊರ ಬಿದ್ದಿಲ್ಲ. ಕೇವಲ ಒಂದು ಫೋಟೋ ಮಾತ್ರ ಹೊರ ಬಿದ್ದಿತ್ತು. ಇಬ್ಬರು ಸುಂದರವಾಗಿ ಕಾಣಿಸಿಕೊಂಡಿದ್ದಾರೆ.
ಯುನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸಸ್‌ನಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿರುವ ಜೀತ್ ಅದಾನಿ 2019 ರಲ್ಲಿ ಅದಾನಿ ಗ್ರೂಪ್‌ಗೆ ಸೇರಿದರು. ಪ್ರಸ್ತುತ ಅವರು ಅದಾನಿ ಗ್ರೂಪ್ ಫೈನಾನ್ಸ್‌ನ ಉಪಾಧ್ಯಕ್ಷರಾಗಿದ್ದಾರೆ.