ಬಸವನಬಾಗೇವಾಡಿ: ಪಟ್ಟಣದಲ್ಲಿ ಗೌರಿಶಂಕರ ಜಾತ್ರೆ ಅಂಗವಾಗಿ ಮೂರ್ತಿಗಳ ಪ್ರತಿಷ್ಠಾಪನೆ ಸಂಭ್ರಮದಿಂದ ಜರುಗಿತು. ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ ಭಕ್ತರು ಗೌರಿಶಂಕರ ದೇವಸ್ಥಾನದ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ
ಕಳಸದೊಂದಿಗೆ ಪಲ್ಲಕ್ಕಿ ಉತ್ಸವ ಮಹಾರಾಜರ ಮಠದ ಹತ್ತಿರದ ಪತ್ತಾರ ಅವರ ಮನೆಗೆ ತಲುಪಿತು.
ಮಹಿಳೆಯರು ಗೌರಿಶಂಕರ ಮೂರ್ತಿ ಹಾಗೂ ನಂದಿ ಮೂರ್ತಿಗೆ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ವಾದ್ಯದೊಂದಿಗೆ ಕುಂಬಾರರ ಮನೆತನದವರನ್ನು ಕರೆತಂದ ನಂತರ ಗೌರಿಶಂಕರ ಮೂರ್ತಿಗಳ ಹಾಗೂ ಪಲ್ಲಕ್ಕಿಯ ಮೆರವಣಿಗೆಯು ದೇವಸ್ಥಾನಕ್ಕೆ ತರೆಳಿದ ನಂತರ ಮೂರ್ತಿಗಳ ಪ್ರತಿಷ್ಠಾಪನೆ ಕಳಸಾರೋಹಣ ಸಂಭ್ರಮದಿಂದ ನಡೆಯಿತು.
ಗಂಗಯ್ಯಸ್ವಾಮಿ ಕಾಳಹಸ್ತೇಶ್ವರಮಠ, ಐ.ಕೆ. ಮಠಪತಿ, ಗುರಬಸಯ್ಯ ಮಠಪತಿ, ಸೋಮಪ್ಪ ಸಾರವಾಡ, ಯಮನಪ್ಪ ಮಸಬಿನಾಳ, ರಾಯಣ್ಣ ಮಸಬಿನಾಳ, ಪುರಸಭೆ ಸದಸ್ಯ ಮುದುಕು ಬಸರಕೋಡ, ಪರುತಪ್ಪ ಕುಂಬಾರ, ಸಾಯಬಣ್ಣ ಕುಂಬಾರ, ಈರಣ್ಣ ಪಡಶೆಟ್ಟಿ, ಶಾಂತಪ್ಪ ಪಡಶೆಟ್ಟಿ, ಈರಣ್ಣ ಬಿರಾದಾರ, ಮಾನಪ್ಪ ಪತ್ತಾರಬಸವರಾಜ ಪತ್ತಾರ, ರಮೇಶ ಚಿಂಚೋಳಿ, ಮಹಾಂತೇಶ ಪೂಜಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.