Advertisement

ಪರಶಿವನ ಪಾಪ ಕಳೆದ ವೊತಿಗೋಡಿನ ಗೌರಿಶಿವಾಲಯ 

02:10 PM May 05, 2018 | |

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ವೋತಿಗೋಡುವಿನಲ್ಲಿ ಪ್ರಾಚೀನವಾದ ಗೌರಿಶಿವಾಲಯವಿದೆ.  ಪುರಾಣವನ್ನು ಕೆದಕಿದಾಗ ಈ ದೇವಾಲಯದ ನಂಟು ತಿಳಿಯುತ್ತದೆ.  ಸಾಕ್ಷಾತ್‌ ಪರಶಿವನು ತನ್ನ ಪಾಪವನ್ನು ಕಳೆದುಕೊಳ್ಳಲು ಆಗಮಿಸಿ, ಇಲ್ಲಿನ ಗೌರಿ ತೀರ್ಥದಲ್ಲಿ ಮಿಂದು ಪಾವನನಾದ ಪವಿತ್ರ ಕ್ಷೇತ್ರವಿದು ಎಂಬ ನಂಬಿಕೆ ಇದೆ. 

Advertisement

ಇತಿಹಾಸದಲ್ಲೂ ಪ್ರಸಿದ್ಧಿ
 ಸಾಗರದಿಂದ ಸುಮಾರು 5 ಕಿ.ಮೀ.ದೂರದಲ್ಲಿ ಈ ಶಿವಗೌರಿ ದೇಗುಲವಿದೆ. ಸ್ಕಂದ ಪುರಾಣದ ಸಹ್ಯಾದ್ರಿ ಕಾಂಡದಲ್ಲಿ ಈ ದೇವಾಲಯದ ವರ್ಣನೆ ಇದೆ. ಆ ಪ್ರಕಾರ ಪುರಾಣಕಾಲದಲ್ಲಿ ಸೃಷ್ಟಿಕರ್ತ ಬ್ರಹ್ಮ, ತನ್ನ ಮಗಳಾದ ಶಾರದೆಯನ್ನೇ ಮದುವೆಯಾಗುತ್ತಾನೆ. ಈ ರೀತಿ ತಂದೆಯಾದವನು ಮಗಳನ್ನು ಮದುವೆಯಾಗುವ ಮೂಲಕ ಲೋಕದ ಜನರಿಗೆ ತಪ್ಪು ಸಂದೇಶ ನೀಡಿದಂತಾಯಿತು ಎಂದು ಶಿವನು ವಾಗ್ವಾದನಡೆಸುತ್ತಾನೆ. ವಾದ ವಿವಾದವಾಗಿ, ಜಗಳವಾಗಿ  5 ತಲೆಗಳಿರುವುದರಿಂದಲೇ ಬ್ರಹ್ಮನಿಗೆ ಗರ್ವ ಹೆಚ್ಚಾಗಿದೆ ಎಂದು ಭಾವಿಸಿ ಸಿಟ್ಟಾದ ಶಿವ ಮಧ್ಯಭಾಗದಲ್ಲಿದ್ದ 5 ನೇ ಶಿರಸ್ಸನ್ನು ಕತ್ತರಿಸುತ್ತಾನೆ. ಇದರಿಂದ ಶಿವನಿಗೆ ಬ್ರಹ್ಮಹತ್ಯಾ ದೋಷ ಉಂಟಾಗುತ್ತದೆ. ಈ ಪಾಪ ನಿವಾರಣೆಗೆ ದಕ್ಷಿಣ ಭಾರತದ ಸಹ್ಯಾದ್ರಿ ತಪ್ಪಲಿನ ಕ್ಷೇತ್ರವಾದ ವರದಾಮೂಲದಲ್ಲಿ ಶಿವನು ಘೋರ ತಪಸ್ಸನ್ನಾಚರಿಸಿದನಂತೆ.

  ಆಗ ವಿಷ್ಣುವು ಅಲ್ಲಿಗೆ ಆಗಮಿಸಿ, ಶಿವನ ಬ್ರಹ್ಮಹತ್ಯಾ ದೋಷ ನಿವಾರಣೆಗೆ ತನ್ನ ಪಾಂಚಜನ್ಯವೆಂಬ ಶಂಖದಿಂದ ಪವಿತ್ರ ಭಾಗೀರಥಿಯನ್ನು ಶಿವನ ತಲೆಯ ಮೇಲೆ ಅಭಿಷೇಕ ಮಾಡುತ್ತಾನೆ. ಇದರಿಂದ ಶಿವನ ಪಾಪ ಕಳೆಯಿತು ಎಂದು ದೇವತೆಗಳೆಲ್ಲ ಆಗಮಿಸಿ ಹರ್ಷಿಸುತ್ತಾರೆ. ಪಾಪ ನಿವಾರಣೆಯ ಜೊತೆಗೆ ಪುಣ್ಯ ಪ್ರಾಪ್ತಿ ಸಹ ಲಭಿಸುವಂತಾಗಲು ಸಮೀಪದಲ್ಲೇ ಇರುವ ಗೌರಿತೀರ್ಥಕ್ಕೆ ತೆರಳಿ ಸ್ನಾನ ಮಾಡುವಂತೆ ವಿಷ್ಣು ಸೂಚಿಸುತ್ತಾನೆ. ಅದಕ್ಕಾಗಿ ಈಶ್ವರ ಓತುಗೋಡಿನಲ್ಲಿರುವ ಈ ಗೌರಿ ತೀರ್ಥಕ್ಕೆ ಆಗಮಿಸಿ ಮಿಂದು, ಪರಿಶುದ್ಧನಾಗುತ್ತಾನೆ. ಇದರ ನೆನಪಿಗಾಗಿ ಈ ಸ್ಥಳದಲ್ಲಿ ಉಳಿದ ದೇವತೆಗಳೆಲ್ಲ ಸೇರಿ ಗೌರಿಶಿವ ದೇಗುಲ ನಿರ್ಮಿಸುತ್ತಾರೆ. ಈ ದೇವಾಲಯದ ಪಕ್ಕದಲ್ಲಿ  ಗೌರಿಯ ಅಗ್ನಿಕುಂಡ ಸಹ ಇದೆ.

 ಆಕರ್ಷಕ ಪುಷ್ಕರಣಿ
 ಈ ದೇವಾಲಯದ ಮುಂದೆ ಕಲ್ಲಿನಿಂದ ಕಟ್ಟಿದ ಆಕರ್ಷಕ ಪುಷ್ಕರಣಿ ಇದೆ. ಇದನ್ನು ಗೌರಿತೀರ್ಥ ಎಂದು ಗುರುತಿಸಲಾಗುತ್ತಿದೆ. ಸಮಸ್ಯೆಗಳಿಗೆ ಕುರಿತು ಪರಿಹಾರ ಕಂಡು ಕೊಳ್ಳಲು ಈ ತೀರ್ಥದಲ್ಲಿ ಬಿಲ್ವ ಪತ್ರೆ ಹಾಕುತ್ತಾರೆ.  ಇಷ್ಟಾರ್ಥ ಈಡೇರುವುದಿದ್ದರೆ ಬಿಲ್ವ ಪತ್ರೆ ಮುಳುಗುತ್ತದೆ. ಇಲ್ಲವಾದರೆ ತೇಲುತ್ತದೆ ಎಂಬ ನಂಬಿಕೆ ಇದೆ.  ಹಲವು ಭಕ್ತರು ನಿತ್ಯವೂ ತಮ್ಮ ಸಮಸ್ಯೆಗಳು ಪರಿಹಾರವಾಗುತ್ತವೆಯೋ ಇಲ್ಲವೋ ಎಂಬುದನ್ನು ಬಿಲ್ವಪತ್ರೆ ಹಾಕು ಮೂಲಕ ತಿಳಿಯಲೆಂದೇ ಇಲ್ಲಿಗೆ ಆಗಮಿಸುತ್ತಾರೆ. 

ಶಿಥಿಲಾವಸ್ಥೆಯಲ್ಲಿದ್ದ ಈ ದೇಗುಲವನ್ನು ಗ್ರಾಮಸ್ಥರೆಲ್ಲ ಸೇರಿ 2000ರಲ್ಲಿ ಪುನರ್‌ ಪ್ರತಿಷ್ಠಾಪನೆ ಮಾಡಿದ್ದಾರೆ. ಪ್ರತಿ ವರ್ಷ ಗೌರಿ ಹುಣ್ಣಿಮೆಯಂದು ಇಲ್ಲಿ ವಿಶೇಷ ಉತ್ಸವ ಹಾಗೂ ಪೂಜೆಗಳು ಜರುಗುತ್ತದೆ. ಮಹಾಶಿವರಾತ್ರಿ, ದೀಪಾವಳಿ ಅಮಾವಾಸ್ಯೆ, ಶ್ರಾವಣಮಾಸ, ಕಾರ್ತಿಕ ಮಾಸಗಳಲ್ಲಿ ವೈಭವದ ಪೂಜೆ ನಡೆಯುತ್ತದೆ. ವಿದ್ಯೆ, ಸಂತಾನ ಪ್ರಾಪ್ತಿ, ಮನೋಕ್ಷೊàಭೆ ನಿವಾರಣೆ ಹಾಗೂ ಮನಃಶಾಂತಿಗಾಗಿ ಭಕ್ತರು ಆಗಮಿಸಿ ಹರಕೆ ಹೊತ್ತು, ಪೂಜೆ ಸಲ್ಲಿಸುತ್ತಾರೆ.

Advertisement

ಎನ್‌.ಡಿ.ಹೆಗಡೆ ಆನಂದಪುರಂ

Advertisement

Udayavani is now on Telegram. Click here to join our channel and stay updated with the latest news.

Next