Advertisement
ಚಿಕ್ಕಬಳ್ಳಾಪುರ ಮೂಲದ ತಾಹೀರ್ ಹುಸೇನ್ ಹಲವು ಬಾರಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಪ್ರಕರಣಗಳಲ್ಲಿ ಬಂಧಿತನಾಗಿದ್ದಾನೆ. ಈತನ ವಿರುದ್ದ ಬೆಳಗಾವಿ, ಮೈಸೂರು, ಬೆಂಗಳೂರು, ಕಲಬುರಗಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. 10 ತಿಂಗಳ ಹಿಂದೆಯಷ್ಟೇ ತಾಹೀರ್ ಹುಸೇನ್‌ನನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ನೆರೆ ರಾಜ್ಯಗಳಲ್ಲಿನ ಅಕ್ರಮ ದ್ದ ಪೂರೈಸುವವರೊಂದಿಗೆ ತಾಹೀರ್ ನಿಕಟ ಸಂಪರ್ಕ ಹೊಂದಿದ್ದು, ಆತನನ್ನು ಗೌರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತೇವೆ. ಡಿ.16ರವರೆಗೆ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ನಡುವೆಯೇ ಆರೋಪಿಯನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಎಸ್‌ಐಟಿ ತನಿಖಾಧಿಕಾರಿ ತಿಳಿಸಿದ್ದಾರೆ.
ಪತ್ರಕರ್ತೆ ಗೌರಿ ಹತ್ಯೆಗೈದಿರುವುದು 7.65 ಎಂಎಂ ಕಂಟ್ರಿ ಮೆಡ್ ಪಿಸ್ತೂಲ್‌ನಲ್ಲಿಯೇ ಎಂದು ವಿಧಿ ವಿಜ್ಞಾನ ಪರೀಕ್ಷಾ ವರದಿ ತಿಳಿಸಿದೆ. ಹೆಚ್ಚಾಗಿ ಈ ಕಂಟ್ರಿಮೇಡ್ ಪಿಸ್ತೂಲ್‌ಗಳು ಮಾರಾಟವಾಗುವುದು ಉತ್ತರ ಕರ್ನಾಟಕದ ಭಾಗದಲ್ಲಿ. ಜತೆಗೆ ಗೌರಿ ಹಂತಕರಿಗೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದ ಕಡೆಯವರೇ ಪಿಸ್ತೂಲ್ ಪೂರೈಕೆ ಮಾಡಿದ್ದಾರೆ ಎಂಬ ಅನುಮಾನ ಕೂಡ ಇದೆ. ಈ
ಹಿನ್ನೆಲೆಯಲ್ಲಿ ತಾಹೀರ್‌ನನ್ನು ವಿಚಾರಣೆಗೊಳಪಡಿ ಸುವುದರಿಂದ ಮಹತ್ವದ ಸುಳಿವು ಸಿಗುವ ಸಾಧ್ಯತೆಯಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.