ಅಲಿಯಾಸ್ ಹೊಟ್ಟೆ ಮಂಜನ ಜಾಮೀನು ಅರ್ಜಿ ವಿಚಾರಣೆಯನ್ನು 70ನೇ ಸಿಸಿಎಚ್ ನ್ಯಾಯಾಲಯ ಜೂ.30ಕ್ಕೆ ಮುಂದೂಡಿದೆ.
Advertisement
ಆರೋಪಿಗೆ ಜಾಮೀನು ನೀಡದಂತೆ ಲಿಖೀತ ರೂಪದಲ್ಲಿ ಆಕ್ಷೇಪಣೆ ಸಲ್ಲಿಸಿದ ಸರ್ಕಾರಿ ಅಭಿಯೋಜಕ ಟಿ.ಎಂ.ನರೇಂದ್ರ ಅವರು, ನವೀನ್ ಕುಮಾರ್ ಪ್ರಕರಣದಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ಮಾಹಿತಿ ಮತ್ತು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೆ,ನವೀನ್ ಕುಮಾರ್ ಬಳಿಯಿದ್ದ ಗುಂಡುಗಳಿಗೂ ಗೌರಿ ಲಂಕೇಶ್ ದೇಹದಲ್ಲಿ ಪತ್ತೆಯಾದ ಗುಂಡುಗಳಿಗೂ ಸಾಮ್ಯತೆ ಇದೆ ಎಂದು ತಿಳಿದು ಬಂದಿದ್ದು, ಈ ಕುರಿತು ವಿಧಿ ವಿಜ್ಞಾನ ಪರೀಕ್ಷಾ ಕೇಂದ್ರದ ಅಧಿಕಾರಿಗಳು ವರದಿ ನೀಡಿದ್ದಾರೆ.
ಕಾಲಾವಕಾಶ ನೀಡಿ ಜೂ.30ಕ್ಕೆ ವಿಚಾರಣೆ ಮುಂದೂಡಿದೆ. ಈ ಮಧ್ಯೆ ಆರೋಪಿ ಪರ ವಕೀಲ ವೇದಮೂರ್ತಿ, ನವೀನ್ ಕುಮಾರ್ ಮಂಪರು ಪರೀಕ್ಷೆಗೆ ಒಪ್ಪಿದ್ದು, ತನಿಖಾಧಿಕಾರಿಗಳು ದಿನಾಂಕ ನಿಗದಿ ಮಾಡಿದರೆ ಅವರೊಟ್ಟಿಗೆ ಹೋಗಲು ಸಿದ್ಧವಾಗಿದ್ದಾನೆ ಎಂದು ಕೋರ್ಟ್ ಗಮನಕ್ಕೆ ತಂದರು