Advertisement
ಮತ್ತೂಂದೆಡೆ ಅಕ್ರಮ ಶಸ್ತ್ರಾಸ್ತ್ರ ಹಾಗೂ ಸಾಹಿತಿ ಕೆ.ಎಸ್.ಭಗವಾನ್ ಹತ್ಯೆಗೆ ಸಂಚು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಂಡ್ಯ ಮೂಲದ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನ ಹೇಳಿಕೆಯನ್ನಾಧಿರಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಿರಂತವಾಗಿದೆ.
Related Articles
Advertisement
ಈ ಆರೋಪಿಗಳನ್ನು ಗೌರಿಲಂಕೇಶ್ ಹತ್ಯೆ ಪ್ರಕರಣದಲ್ಲಿ ಕೈವಾಡ ಇರುವ ಸಂಬಂಧ ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಹೇಳಿಕೆಯನ್ನಾಧರಿಸಿ ಕರ್ನಾಟಕ, ಮಹಾರಾಷ್ಟ್ರದ ಏಳು ಕಡೆಗಳಲ್ಲಿ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಹೊಟ್ಟೆ ಮಂಜ ಮತ್ತೆ ವಶಕ್ಕೆ: ಫೆ.18 ರಂದು ಮೆಜೆಸ್ಟಿಕ್‌ನಲ್ಲಿ ಶಸ್ತ್ರಾಸ್ತ್ರ ಸಾಗಣೆ ಆರೋಪದಡಿ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ (ಹೊಟ್ಟೆ ಮಂಜ) ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಇದರೊಂದಿಗೆ ನ್ಯಾಯಾಲದ ಮುಂದೆ ಮಂಪರು ಪರೀಕ್ಷೆಗೆ ಒಪ್ಪಿಗೆ ಸೂಚಿಸಿ, ಪರೀಕ್ಷೆಗೆಂದು ಗುಜರಾತ್‌ಗೆ ಕರೆದೊಯ್ದಾಗ ನಿರಾಕರಿಸಿದ ಮಂಜನನ್ನು ಬುಧವಾರ ಮತ್ತೂಮ್ಮೆ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ವಶಕ್ಕೆ ಪಡೆಯಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.
ಬುಧವಾರ ದೋಷಾರೋಪ ಪಟ್ಟಿ ಸಲ್ಲಿಕೆ: ಎಸ್‌ಐಟಿ ಅಧಿಕಾರಿಗಳು 560ಕ್ಕೂ ಹೆಚ್ಚು ಪುಟಗಳ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದು, ಬುಧವಾರ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ. ಈ ವೇಳೆ ಸುಮಾರು 250ಕ್ಕೂ ಅಧಿಕ ಮಂದಿಯ ಸಾಕ್ಷ್ಯಾಗಳ ಹೇಳಿಕೆ, ಸಂಚು ರೂಪಿಸಿದ್ದು ಹೇಗೆ?, ಪ್ರಕರಣದಲ್ಲಿ ಇದುವರೆಗೂ ಎಷ್ಟು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಸೇರಿದಂತೆ ಮಾಹಿತಿ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
ಹೊಟ್ಟೆ ಮಂಜ ಜಾಮೀನಿಗೆ ಅರ್ಜಿ: ಹೊಟ್ಟೆ ಮಂಜನನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು ಪ್ರಕರಣ(ಅಕ್ರಮ ಶಸ್ತ್ರಾಸ್ತ್ರ)ಕ್ಕೆ ಸಂಬಂಧಿಸಿದಂತೆ ಇದುವರೆಗೂ ಜಾರ್ಜ್‌ಶೀಟ್ ಸಲ್ಲಿಸಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ಆರೋಪಿ ಪರ ವಕೀಲರು ಹೊಟ್ಟೆ ಮಂಜನಿಗೆ ಜಾಮೀನು ನೀಡುವಂತೆ ಮನವಿ ಮಾಡಲಿದ್ದಾರೆ. ಜತೆಗೆ ಪ್ರಕರಣ ನಿಮಿತ್ತ ಮತ್ತೂಮ್ಮೆ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆಯಲಿದ್ದಾರೆ.
ಗೌರಿ ಹಂತಕರ ಬಂಧನವಾಗಿಲ್ಲ: ವಿಶೇಷ ತನಿಖಾ ತಂಡ ಪ್ರಕರಣದಲ್ಲಿ ನೂರಾರು ಮಂದಿಯ ಸಾಕ್ಷ್ಯಾಗಳನ್ನು ಸಂಗ್ರಹಿಸಿ ತನಿಖೆ ನಡೆಸಿದರಾದರೂ ಇದುವರೆಗೂ ಒಬ್ಬ ಆರೋಪಿಯನ್ನು ಗೌರಿ ಪ್ರಕರಣದಲ್ಲಿ ಬಂಧಿಸಿಲ್ಲ. ಮತ್ತೂಂದೆಡೆ ಹಿಂದೂಪರ ಸಂಘಟನೆ ಕೈವಾಡವಿದೆ ಎಂಬ ಶಂಕೆ ಮೇಲೆ ಕೆಲ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮುಖಂಡರನ್ನು ವಿಚಾರಣೆ ನಡೆಸಿದ್ದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ.