Advertisement

ಗೌರಮ್ಮನ ಗೌರವರ್ಣ ಮತ್ತು ಇತರ ಸಂಗತಿ 

02:30 PM Jan 25, 2017 | Team Udayavani |

ಫೇಸ್‌ಪ್ಯಾಕ್‌ಗಳು ಅಂದಕೂಡಲೇ ಅದಕ್ಕೆ ಎಷ್ಟು ಖರ್ಚಾಗತ್ತೋ, ಸುಮ್ನೆ ವೇಸ್ಟ್‌, ಎರಡು ದಿನ ಕಳೆದರೆ ಮತ್ತೆ ಸ್ಕಿನ್‌ ಹಿಂದಿನ ಬಣ್ಣಕ್ಕೇ ತಿರುಗುತ್ತೆ ಅಂತ ಗೊಣಗೋ ಹೆಣ್ಮಕ್ಕಳು ನಮ್ಮಲ್ಲಿ ಸಾಕಷ್ಟಿದ್ದಾರೆ. ಆದರೆ ದೀರ್ಘ‌ಕಾಲ ನಿಯಮಿತವಾಗಿ ಫೇಸ್‌ಪ್ಯಾಕ್‌ ಹಾಕ್ಕೊಂಡರೆ ನಿಜಕ್ಕೂ ಮುಖದ ಹೊಳಪು ಹೆಚ್ಚುತ್ತೆ. ಇದಕ್ಕೆ ಖರ್ಚಾಗುತ್ತೆ ಅಂತ ತಲೆಕೆಡಿಸಿಕೊಳ್ಳಬೇಕಿಲ್ಲ. ಇಲ್ಲಿರುವ ಅಷ್ಟೂ ಫೇಸ್‌ಪ್ಯಾಕ್‌ಗಳೂ ಮನೆಯಲ್ಲಿ ನೀವೇ ತಯಾರಿಸಿ ಹಾಕ್ಕೊಳ್ಳುವಂಥವೇ. ಮನೆಯಲ್ಲೇ ಇರೋ ಸಾಮಗ್ರಿಗಳನ್ನ ಬಳಸಿ ಹಾಕೋ ಈ ಫೇಸ್‌ಪ್ಯಾಕ್‌ ನೀವೊಂದಿಷ್ಟು ಟೈಂ ಕೊಟ್ರೆ ಸಾಕು, ಮುಖ ಫ್ರೆಶಾÏಗಿರುತ್ತೆ, ಹೊಳಪು ಮೂಡುತ್ತೆ, ತಾನು ಚೆಂದ ಕಾಣಿ¤ದ್ದೀನಿ ಅಂತ ಗೊತ್ತಾದ್ರೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತೆ. ಇದು ಲೈಫ್ನಲ್ಲಿ ಎಲ್ಲಕ್ಕಿಂತ ದೊಡ್ಡದು. 
*
ಟೊಮ್ಯಾಟೋ ಹಾಗೂ ಸೌತೆಕಾಯಿಯ ಫೇಸ್‌ಪ್ಯಾಕ್‌
ಟೊಮ್ಯಾಟೋದಲ್ಲಿ ಆ್ಯಂಟಿಆಕ್ಸಿಡೆಂಟ್‌ ಲೈಕೋಪಿನ್‌ ಅಂಶ ವಿಫ‌ುಲವಾಗಿದ್ದು ಇದು ನೈಸರ್ಗಿಕ ಸನ್‌ಸ್ಕ್ರೀನ್‌ ಲೋಶನ್‌
ನಂತೆ ಕಾರ್ಯವೆಸಗುತ್ತದೆ. ಚರ್ಮದ ಕಾಂತಿ ವರ್ಧಿಸುತ್ತದೆ. ಇದರಲ್ಲಿರುವ ಆ್ಯಸ್ಟಿಂಜೆಂಟ್‌ ಗುಣದಿಂದ ಚರ್ಮದ ರಂಧ್ರಗಳು, ನೆರಿಗೆಗಳು ನಿವಾರಣೆಯಾಗುತ್ತದೆ. ಅಧಿಕ ತೈಲಾಂಶ ನಿವಾರಕವೂ ಹೌದು. ಅಂತೆಯೇ ಸೌತೆಕಾಯಿಯಲ್ಲಿ ಕಪ್ಪು ಬಣ್ಣ ತಿಳಿಯಾಗಿಸುವ ಹಾಗೂ ಚರ್ಮದ ಆದ್ರìತೆ, ಸ್ನಿಗ್ಧತೆ ವರ್ಧಿಸುವ ಗುಣಗಳಿವೆ. ಕತ್ತರಿಸಿದ ಟೊಮ್ಯಾಟೋ ಹಾಗೂ ಸೌತೆಕಾಯಿಯನ್ನು ಅರೆದು ಪೇಸ್ಟ್‌ ತಯಾರಿಸಬೇಕು. ಈ ಪೇಸ್ಟ್‌ನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ
ತೊಳೆಯಬೇಕು. ಹೀಗೆ ನಿತ್ಯ ಫೇಸ್‌ಪ್ಯಾಕ್‌ ಮಾಡಿದರೆ ಕೆಲವೇ ತಿಂಗಳುಗಳಲ್ಲಿ ಕಪ್ಪು ಬಣ್ಣ ತಿಳಿಯಾಗಿ ಗೌರವರ್ಣ ವೃದ್ಧಿಯಾಗುತ್ತದೆ. ಜೊತೆಗೆ ಮುಖದ ಕಾಂತಿ ಹಾಗೂ ಸ್ನಿಗ್ಧತೆ ಮೃದುತ್ವ ಹೆಚ್ಚುತ್ತದೆ. 

Advertisement

ಸ್ಟ್ರಾಬೆರಿ ಹಾಗೂ ಹಾಲಿನ ಫೇಸ್‌ಪ್ಯಾಕ್‌ 
ಸ್ಟ್ರಾಬೆರಿ ಹಣ್ಣುಗಳು ತಿನ್ನಲೂ ಬಲು ರುಚಿ. ಆರೋಗ್ಯಕ್ಕೂ ಹಿತಕರ ಮಾತ್ರವಲ್ಲ ಮುಖಕ್ಕೆ ಹಾಲಿನ ಜೊತೆಗೆ ಲೇಪಿಸಿದರೆ
ಗೌರವರ್ಣ ಪಡೆಯಬಹುದು. ಸ್ಟ್ರಾಬೆರಿ ಹಣ್ಣಿನಲ್ಲಿ ಎಲ್ಲಾಜಿಕ್‌ ಆಮ್ಲದ ಅಂಶವಿದ್ದು ಇದು ಕಪ್ಪು ಬಣ್ಣ ತಿಳಿಯಾಗಿಸುತ್ತದೆ.

ಸೂರ್ಯನ ನೇರಳಾತೀತ ಕಿರಣಗಳಿಂದ ಚರ್ಮಕ್ಕೆ ಘಾಸಿಯಾಗುವುದನ್ನು ,ಕಪ್ಪಾಗುವುದನ್ನು ಇದು ತಡೆಯುತ್ತದೆ. ಫಾಲಿಕ್‌ ಆಮ್ಲ ಹಾಗೂ ವಿಟಮಿನ್‌ “ಸಿ’ ಸಮೃದ್ಧವಾಗಿರುವುದರಿಂದ ಚರ್ಮದ ಜೀವಕೋಶಗಳ ಉತ್ಪತ್ತಿ ಹಾಗೂ ಕೊಲೆಜನ್‌ ಉತ್ಪತ್ತಿಗೆ ಸಹಕಾರಿ. ಹಾಲಿನಲ್ಲಿ ಗೌರವರ್ಣಕಾರಕ, ಮಾಯಿಶ್ಚರೈಸರ್‌ ಹಾಗೂ ಚರ್ಮ ರಕ್ಷಕ ಪೋಷಕಾಂಶಗಳು ಸಮೃದ್ಧವಾಗಿವೆ. ಸ್ಟ್ರಾಬೆರಿ ಹಣ್ಣುಗಳನ್ನು ಒಂದು ಬೌಲ್‌ನಲ್ಲಿ ಚೆನ್ನಾಗಿ ಮಸೆಯಬೇಕು. ಇದಕ್ಕೆ ತಾಜಾ ಹಾಲು ಬೆರೆಸಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷಗಳ ಬಳಿಕ ತೊಳೆಯಬೇಕು. ಹೀಗೆ ನಿತ್ಯ ಅಥವಾ ವಾರಕ್ಕೆ 3 ಬಾರಿ ಫೇಸ್‌ಪ್ಯಾಕ್‌ ಲೇಪಿಸಿದರೆ ತಿಂಗಳೆರಡರಲ್ಲಿ ಗೌರವರ್ಣದ ಮೊಗದೊಡತಿ
ನೀವಾಗುತ್ತೀರಿ!

ಅರಸಿನ, ಹಾಲು ಹಾಗೂ ಕಡಲೆಹಿಟ್ಟಿನ ಫೇಸ್‌ಪ್ಯಾಕ್‌
ಅರಸಿನವನ್ನು ಆಯುರ್ವೇದ ಶಾಸ್ತ್ರದಲ್ಲಿ “ವರ್ಣದ್ರವ್ಯ’ ಎಂದು ಕರೆಯುತ್ತಾರೆ. ಇದು ಚರ್ಮಕ್ಕೆ ಗೌರವರ್ಣ ನೀಡುವ ಹಾಗೂ ಕಾಂತಿವರ್ಧಕ ಮೂಲಿಕೆಗಳಲ್ಲಿ ಒಂದು. ಹಾಲು ನೈಸರ್ಗಿಕ ಮಾಯಿಶ್ಚರೈಸರ್‌ನಂತೆ ಕಾರ್ಯವೆಸಗುತ್ತದೆ. ಕಡಲೆಹಿಟ್ಟು ಬಿಸಿಲುಗಂದು, ಕಪ್ಪು ಕಲೆಗಳನ್ನು ನಿವಾರಿಸುತ್ತದೆ.

ಈ ಮೂರರ ಮಿಶ್ರಣದ ಫೇಸ್‌ಪ್ಯಾಕ್‌ ನಿತ್ಯ ಲೇಪಿಸಿದರೆ 3-4 ತಿಂಗಳಲ್ಲಿ ಕಾಂತಿಯುತ ಹಾಗೂ ಗೌರವರ್ಣದ ಮೊಗ
ನಿಮ್ಮದಾಗುತ್ತದೆ. ಮೊದಲು ಅರಸಿ® ಹಾಗೂ  ಕಡಲೆಹಿಟ್ಟನ್ನು ಚೆನ್ನಾಗಿ ಒಂದು ಬೌಲ್‌ನಲ್ಲಿ ಬೆರೆಸಬೇಕು.
ತದನಂತರ ಹಾಲು ಬೆರೆಸಿ ಚೆನ್ನಾಗಿ ಕಲಕಿ ಪೇಸ್ಟ್‌ ತಯಾರಿಸಬೇಕು. ಇದನ್ನು ಮುಖಕ್ಕೆ ಲೇಪಿಸಿ 20 ನಿಮಿಷದ ಬಳಿಕ ತಣ್ಣೀರಲ್ಲಿ ತೊಳೆಯಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next