Advertisement
ಹಾಂ! ಚಳಿಗಾಲದಲ್ಲಿ ಕೂದಲಿಗೆ ಅಧಿಕ ಪೋಷಕಾಂಶಗಳು ಅವಶ್ಯ.ಆದ್ದರಿಂದಲೇ ಚಳಿಗಾಲಕ್ಕಾಗಿಯೇ ಕೆಲವು ವಿಶೇಷ ಹೇರ್‌ಪ್ಯಾಕ್‌ಗಳನ್ನು ಈ ಕೆಳಗೆ ನೀಡಲಾಗಿದೆ.
ಎರಡು ಆಲೂಗಡ್ಡೆಗಳ ಸಿಪ್ಪೆ ತೆಗೆದು, ಕತ್ತರಿಸಿ, ಮಿಕ್ಸರ್‌ನಲ್ಲಿ ತಿರುವಿ ರಸ ತೆಗೆಯಬೇಕು. ಇದಕ್ಕೆ 10 ಚಮಚ ಎಲೋವೆರಾ (ಕುಮಾರೀ) ಗಿಡದ ಎಲೆಯ ತಿರುಳು ಬೆರೆಸಬೇಕು. ತದನಂತರ 8 ಚಮಚ ಶುದ್ಧ ಜೇನು ಸೇರಿಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ ಮಾಲೀಶು ಮಾಡಿ ಹೇರ್‌ಮಾಸ್ಕ್ ಮಾಡಬೇಕು. ಕೂದಲಿಗೆ ಶವರ್ ಕ್ಯಾಪ್ ಹಾಕಿ 45 ನಿಮಿಷಗಳ ಬಳಿಕ ಬೆಚ್ಚಗಿನ ನೀರಿನಿಂದ ಕೂದಲು ತೊಳೆಯಬೇಕು. ಹೀಗೆ ವಾರಕ್ಕೆ 1-2 ಬಾರಿ ಈ ಹೇರ್‌ಮಾಸ್ಕ್ ಬಳಸಿದರೆ ಕೂದಲು ಮೃದು, ಸ್ನಿಗ್ಧ , ಸೊಂಪಾಗಿ ಬೆಳೆಯುತ್ತದೆ. ಜೊತೆಗೆ ತಲೆಕೂದಲಿನಲ್ಲಿ ಹೊಟ್ಟು , ಗುಳ್ಳೆ , ತುರಿಕೆಗಳು ಉಂಟಾಗುವುದಿಲ್ಲ. ತೆಂಗಿನಕಾಯಿ ಹಾಲು ಮತ್ತು ಜೇನಿನ ಹೇರ್‌ಪ್ಯಾಕ್
ಅರ್ಧ ತೆಂಗಿನಕಾಯಿಯ ತುರಿಗೆ ಸ್ವಲ್ಪ ನೀರು ಬೆರೆಸಿ ಮಿಕ್ಸರ್‌ನಲ್ಲಿ ತಿರುವಿ ದಪ್ಪ ರಸ ತೆಗೆಯಬೇಕು. 1/2 ಕಪ್ ಈ ದಪ್ಪ ತೆಂಗಿನ ಹಾಲಿಗೆ 10 ಚಮಚ ಜೇನು ಬೆರೆಸಿ ಚೆನ್ನಾಗಿ ಬೆರೆಸಬೇಕು. ತದನಂತರ ಕೂದಲಿಗೆ ಲೇಪಿಸಿ ಚೆನ್ನಾಗಿ ಮಾಲೀಶು ಮಾಡಿ, ತಲೆಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್ ಮಾಡಬೇಕು. ಒಂದು ಗಂಟೆಯ ಬಳಿಕ ಬೆಚ್ಚಗಿನ ನೀರಲ್ಲಿ ಕೂದಲು ತೊಳೆಯಬೇಕು.
Related Articles
Advertisement
ಮೆಂತ್ಯೆಕಾಳು ಮತ್ತು ಸಾಸಿವೆ ಎಣ್ಣೆಯ ಹೇರ್ಪ್ಯಾಕ್ಕಾಲು ಕಪ್ ಮೆಂತೆಯನ್ನು ರಾತ್ರಿ ಬಿಸಿನೀರಿನಲ್ಲಿ ನೆನೆಸಿ ಇಡಬೇಕು. ಮರುದಿನ ಬೆಳಿಗ್ಗೆ ಸ್ವಲ್ಪ ಹಾಲು ಬೆರೆಸಿ ನಯವಾಗಿ ಅರೆಯಬೇಕು. ಅದಕ್ಕೆ 10 ಚಮಚ ಸಾಸಿವೆ ಎಣ್ಣೆ ಬೆರೆಸಿ ಚೆನ್ನಾಗಿ ಮಿಶ್ರಮಾಡಿ ದಪ್ಪ ಪೇಸ್ಟ್ ತಯಾರಿಸಿ ತಲೆಕೂದಲಿಗೆ ಹಚ್ಚಿ ಒಂದು ಗಂಟೆಯ ಬಳಿಕ ನೀರಿನಲ್ಲಿ ತೊಳೆಯಬೇಕು. ಬಾಳೆಹಣ್ಣು-ಮೊಟ್ಟೆ ಹೇರ್‌ಪ್ಯಾಕ್
ಚೆನ್ನಾಗಿ ಕಳಿತ ಎರಡು ಬಾಳೆಹಣ್ಣನ್ನು ತೆಗೆದುಕೊಂಡು ಚೆನ್ನಾಗಿ ಮಸೆಯಬೇಕು. ಅದಕ್ಕೆ ಚೆನ್ನಾಗಿ ಗೊಟಾಯಿಸಿದ ಎರಡು ಮೊಟ್ಟೆಯ ಪೇಸ್ಟನ್ನು ಬೆರೆಸಿ ಕಲಕಬೇಕು. 10 ಹನಿ ನಿಂಬೆರಸ ಸೇರಿಸಿ ಮಿಶ್ರಮಾಡಿ ಕೂದಲಿಗೆ ಲೇಪಿಸಬೇಕು. 1/2 ಗಂಟೆ ಬಳಿಕ ಈ ಹೇರ್‌ಪ್ಯಾಕ್‌ನ್ನು ಬಿಸಿನೀರಲ್ಲಿ ತೊಳೆಯಬೇಕು. ವಾರಕ್ಕೆ 1-2 ಬಾರಿ ಈ ಹೇರ್‌ಪ್ಯಾಕ್ ಬಳಸಿದರೆ ಒಣಗಿದ ಕೂದಲು ಕಾಂತಿಯುತವಾಗುತ್ತದೆ ಮತ್ತು ಕೂದಲಿಗೆ ಅಧಿಕ ಪೋಷಕಾಂಶ ದೊರೆತು ಕೂದಲು ಉದುರುವುದು ನಿವಾರಣೆಯಾಗುತ್ತದೆ. ಬೆಣ್ಣೆಹಣ್ಣು ಹಾಗೂ ಜೇನಿನ ಹೇರ್‌ಪ್ಯಾಕ್
ಚೆನ್ನಾಗಿ ಕಳಿತ ಬೆಣ್ಣೆಹಣ್ಣನ್ನು ಮಸೆದು ಪೇಸ್ಟ್ ತಯಾರಿಸಿ, ಅದಕ್ಕೆ 10 ಚಮಚ ಜೇನುತುಪ್ಪ , 10 ಹನಿ ಆಲಿವ್‌ತೈಲ ಅಥವಾ ತಾಜಾ ಹಸಿ ಕೊಬ್ಬರಿ ಎಣ್ಣೆ ಬೆರೆಸಬೇಕು. ಇದನ್ನು ಚೆನ್ನಾಗಿ ಮಿಶ್ರಮಾಡಿ ಕೂದಲಿಗೆ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ಬಿಸಿನೀರಿನಲ್ಲಿ ಕೂದಲು ತೊಳೆಯಬೇಕು. ಇದು ಸಹ ಕೂದಲಿಗೆ ಚಳಿಗಾಲದಲ್ಲಿ ಅವಶ್ಯವಿರುವ ಅಧಿಕ ಪೋಷಕಾಂಶಗಳನ್ನು ಒದಗಿಸಿ, ಕೂದಲು ಒಣಗುವುದು, ಒರಟಾಗುವುದು, ಉದುರುವುದು ಮೊದಲಾದ ತೊಂದರೆಗಳನ್ನು ನಿವಾರಣೆ ಮಾಡುತ್ತದೆ. ಚಳಿಗಾಲಕ್ಕೆ ಕೂದಲ ಆರೈಕೆ ಇಂತಿರಲಿ
*ನಿತ್ಯ ಅಥವಾ ಎರಡು ದಿನಗಳಿಗೊಮ್ಮೆ ಮೆಂತ್ಯೆ , ಒಂದೆಲಗ, ಕರಿಬೇವು ಎಲೆಗಳನ್ನು ಹಾಕಿ ಕುದಿಸಿ ಇಟ್ಟ ಕೊಬ್ಬರಿ ಎಣ್ಣೆಯನ್ನು ಲೇಪಿಸಿದರೆ ಹಿತಕರ.
*ಡ್ರೈಯರ್‌ಗಳನ್ನು ಬಳಸಿ ಕೂದಲು ಒಣಗಿಸುವುದು ಹಿತಕರವಲ್ಲ.
*ಚಳಿಗಾಲದ ಸಮಯದಲ್ಲಿ ಹೇರ್ ಸ್ಟ್ರೇಯ್r ನಿಂಗ್ ಅಥವಾ ಹೇರ್ ಕರ್ಲಿಂಗ್ ಮುಂತಾದ ವಿನ್ಯಾಸಗಳನ್ನು ಅಧಿಕವಾಗಿ ಪ್ರಯೋಗಿಸಿದರೆ ಕೂದಲು ಕಾಂತಿ ಕಳೆದು ಒರಟು ಹಾಗೂ ರೂಕ್ಷವಾಗುತ್ತದೆ.
*ತೀಕ್ಷ್ಣ ಶ್ಯಾಂಪೂ, ರಾಸಾಯನಿಕಗಳ ಬದಲಾಗಿ ಮೃದು ಗುಣಯುಕ್ತ ಶ್ಯಾಂಪ್ಯೂ, ಗಿಡಮೂಲಿಕೆಗಳ ಶ್ಯಾಂಪೂ ಹಾಗೂ ಮೇಲೆ ತಿಳಿಸಿದರುವ ಹೇರ್‌ಪ್ಯಾಕ್‌ಗಳು ಕೂದಲ ಕಾಂತಿ ವರ್ಧಿಸಿ, ಸೌಂದರ್ಯ ರಕ್ಷಿಸುತ್ತದೆ. – ಡಾ| ಅನುರಾಧಾ ಕಾಮತ್