Advertisement

ಶಿರಾಡಿ: ಚಾಲಕನ ನಿಯಂತ್ರಣ ತಪ್ಪಿ ಅಡ್ಡಲಾಗಿ ಬಿದ್ದ ಅಡುಗೆ ಅನಿಲ ತುಂಬಿದ್ದ ಟ್ಯಾಂಕರ್

11:50 AM Jun 10, 2021 | Team Udayavani |

ಉಪ್ಪಿನಂಗಡಿ: ಮಂಗಳೂರಿನಿಂದ ಬೆಂಗಳೂರಿಗೆ ಸಾಗುತ್ತಿದ್ದ ಅಡುಗೆ ಅನಿಲ ಹೇರಿಕೊಂಡು ಸಾಗುತ್ತಿದ್ದ ಟ್ಯಾಂಕರೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆ ಶಿರಾಡಿಯ ಕೊಡ್ಯಕಲ್ ಎಂಬಲ್ಲಿ ನಡೆದಿದೆ.

Advertisement

ಬುಧವಾರ ತಡರಾತ್ರಿ ಈ ಘಟನೆ ನಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾನೆ. ಟ್ಯಾಂಕರ್ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು.

ಇದನ್ನೂ ಓದಿ:ಸಚಿವರಿಂದಲೇ ಕೋವಿಡ್ ನಿಯಮ ಉಲ್ಲಂಘನೆ: ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಈಶ್ವರಪ್ಪ ಭೇಟಿ

ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಟ್ಯಾಂಕರ್ ತೆರವುಗೊಳಿಸಲಾಗಿದೆ. ಸುಮಾರು ಒಂದು ಗಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

Advertisement

ಸ್ಥಳಕ್ಕೆ ಪುತ್ತೂರು ಅಗ್ನಿ ಶಾಮಕ ದಳ, ಉಪ್ಪಿನಂಗಡಿ ಎಸ್ ಐ ಕುಮಾರ್ ಕಾಂಬ್ಳೆ ಮತ್ತು ಸಿಬ್ಬಂದಿ ಧಾವಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next