Advertisement

ಕುಮಟಾದಲ್ಲಿ ತಪ್ಪಿದ ಇನ್ನೊಂದು ಗ್ಯಾಸ್‌ ಟ್ಯಾಂಕರ್‌ ಅವಘಡ 

09:49 AM Oct 17, 2017 | |

ಕುಮಟಾ: 2 ವರ್ಷದ ಹಿಂದೆ ಭೀಕರ ದುರಂತಕ್ಕೀಡಾಗಿದ್ದ ಬರ್ಗಿಯಲ್ಲಿ  ಮಂಗಳವಾರ ಬೆಳಗ್ಗೆ  ಗ್ಯಾಸ್‌ ಟ್ಯಾಂಕರ್‌ವೊಂದು ರಸ್ತೆಯಿಂದ ಕೆಳಗೆ ಜಾರಿದ್ದು, ಅದೃಷ್ಟವಷಾತ್‌ ಯಾವುದೇ ಹಾನಿ ಸಂಭವಿಸಿಲ್ಲ. 

Advertisement

ಮಂಗಳೂರಿನಿಂದ ಗೋವಾಕ್ಕೆ ತೆರಳುತ್ತಿದ್ದ ಟ್ಯಾಂಕರ್‌ ಎದುರುಗಡೆಯಿಂದ ಬರುತ್ತಿದ್ದ ಲಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಬದಿಗೆ ಜಾರಿದೆ. 

ಸ್ಥಳಕ್ಕೆ ಕುಮಟಾ ಠಾಣಾ ಪೊಲೀಸರು ದೌಡಾಯಿಸಿ ಟ್ಯಾಂಕರ್‌ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗ್ಯಾಸ್‌ ಸೋರಿಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಜನರು ಗ್ಯಾಸ್‌ ಟ್ಯಾಂಕರ್‌ ಅವಘಡದ ಬಗ್ಗೆ ಕೇಳಿ ತೀವ್ರ ಭೀತಿಗೊಂಡಿದ್ದರು. ಪೊಲೀಸರು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. 

2015 ರ ಸೆಪ್ಟಂಬರ್‌ ತಿಂಗಳಿನಲ್ಲಿ ಸಂಭವಿಸಿದ ಗ್ಯಾಸ್‌ ಟ್ಯಾಂಕರ್‌ ದುರಂತದಲ್ಲಿ 13 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next