Advertisement

Gas price reduction: ಇಂದಿನಿಂದ ಅನಿಲ ಬೆಲೆ ಇಳಿಕೆ

09:28 PM Apr 07, 2023 | Team Udayavani |

ವಾಹನಗಳಲ್ಲಿ ಬಳಸುವ ಅನಿಲ (ಸಿಎನ್‌ಜಿ) ಹಾಗೂ ಅಡುಗೆ ಅನಿಲ (ಪೈಪ್ಡ್ ಗ್ಯಾಸ್‌ -ಪಿಎನ್‌ಜಿ) ಬೆಲೆ ಏರಿಕೆಯಿಂದ ಬಸವಳಿದಿದ್ದ ಜನರಿಗೆ ಶೀಘ್ರವೇ ರಿಲೀಫ್ ಸಿಗಲಿದೆ. ಅಂದರೆ ಗ್ಯಾಸ್‌ ಬೆಲೆ ಇಳಿಕೆಯಾಗಲಿದೆ. ದೆಹಲಿಯಲ್ಲಿ ಕೆಜಿಗೆ 79.56 ರೂ.ಗಳಿರುವ ಅಡುಗೆ ಅನಿಲದ ಬೆಲೆ 73.59 ರೂ.ಗಳಿಗೆ ಇಳಿಕೆಯಾದರೆ, ಪಿಎನ್‌ಜಿ ಬೆಲೆ ಪ್ರತಿ ಸಾವಿರ ಕ್ಯೂಬಿಕ್‌ಗೆ 53.59 ರೂ.ಗಳಿಂದ 47.59 ರೂ.ಗಳಿಗೆ ಇಳಿಕೆಯಾಗಲಿದೆ. ರಾಷ್ಟ್ರ ರಾಜಧಾನಿ ಮಾತ್ರವಲ್ಲ ಮುಂಬೈ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಬೆಲೆ ಏರಿಕೆ ಕಡಿಮೆಯಾಗಲಿದೆ. ಇದಕ್ಕೆ ಕಾರಣವೇನು ? ದಿಢೀರ್‌ ಇಂಥ ಬದಲಾವಣೆ ಏಕೆ ಎಂಬುದರ ವಿವರ ಇಂತಿದೆ.

Advertisement

ಕಿರಿತ್‌ ಪಾರಿಕ್‌ ಸಮಿತಿ ಶಿಫಾರಸು
ಜಾಗತಿಕ ಅನಿಲ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ಅನಿಲ ಬೆಲೆ ಲೆಕ್ಕಾಚಾರ ವಿಧಾನ ಬದಲಾವಣೆಗಾಗಿ ಸರ್ಕಾರ ಕಿರೀಟ್‌ ಪಾರಿಕ್‌ ಸಮಿತಿಯನ್ನು ಸರ್ಕಾರ ರಚಿಸಿತ್ತು. ಇತ್ತೀಚಿನ ಬೆಲೆ ಏರಿಕೆಯನ್ನು ಪರಿಗಣಿಸಿರುವ ಸಮಿತಿ, ಅದರಿಂದ ಗ್ರಾಹಕರಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ 2014ರ ಅನಿಲ ಬೆಲೆ ಮಾರ್ಗಸೂಚಿಯನ್ನು ಪರಿಷ್ಕರಿಸಲು ಶಿಫಾರಸು ನೀಡಿದೆ. ಸಮಿತಿ ಶಿಫಾರಸಿಗೆ ಏ.6ರಂದು ಸರ್ಕಾರ ಅನುಮೋದನೆ ನೀಡಿರುವ ಹಿನ್ನೆಲೆ ಇನ್ನುಮುಂದೆ ಅನಿಲ ಬೆಲೆಗಳಲ್ಲಿ ಇಳಿಕೆಯಾಗಲಿದೆ.

ಯಾವ ಬದಲಾವಣೆಯಾಗಲಿದೆ ?
ಸಮಿತಿಯ ಶಿಫಾರಸಿನ ಪ್ರಕಾರ ಏ.8ರಿಂದ ಭಾರತವು ಹಳೆಯ ಬ್ಲಾಕ್‌ಗಳಿಂದ ಉತ್ಪಾದಿಸುವ ಅನಿಲ ಬೆಲೆಯನ್ನು ಪ್ರತಿ ಬ್ರಿಟಿಷ್‌ ಥರ್ಮಲ್‌ ಯೂನಿಟ್‌ಗೆ (ಎಂಎಂಬಿಟಿಯು) 6.50 ಡಾಲರ್‌ಗಳಿಗೆ ಇಳಿಕೆ ಮಾಡಲಿದೆ. ಇದರಿಂದ ಗೊಬ್ಬರ ಮತ್ತು ನಗರ ಅನಿಲ ವಿತರಣಾ ವಲಯಗಳಲ್ಲಿನ ಕೈಗಾರಿಕಾ ಖರೀದಿದಾರರು ಮತ್ತು ಕಂಪನಿಗಳಿಗೆ ಲಾಭವಾಗಲಿದೆ. ವರದಿಗಳ ಪ್ರಕಾರ, ಸಮಿತಿಯ ಶಿಫಾರಸಿನ ಆಧಾರದ ಮೇಲೆ ಅನಿಲ ಬೆಲೆಯಲ್ಲಿ ಶೇ.9ರಿಂದ 11ರಷ್ಟು ಇಳಿಕೆಯಾಗುವ ಸಾಧ್ಯತೆಗಳಿದೆ.

ಸಿಎನ್‌ಜಿ ಬೆಲೆ ಇಳಿಕೆ ಎಷ್ಟಾಗಬಹುದು (ಕೆಜಿಗೆ ರೂ.ಗಳಲ್ಲಿ)?
ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದರೆ ಬೆಲೆ
ಬೆಂಗಳೂರು 89.5 83.5
ಮುಂಬೈ 87 79
ಮೀರತ್‌ 93 81

ಪಿಎನ್‌ಜಿ ಬೆಲೆ ಇಳಿಕೆ ಎಷ್ಟಾಗಬಹುದು (ಸಾವಿರ ಕ್ಯೂಬಿಕ್‌ ಮೀಟರ್‌ಗೆ)?
ನಗರ ಪ್ರಸಕ್ತ ಬೆಲೆ ಪರಿಷ್ಕೃತವಾದರೆ ಬೆಲೆ
ಬೆಂಗಳೂರು 58.5 52
ಮುಂಬೈ 54 49
ಮೀರತ್‌ 58.5 52

Advertisement
Advertisement

Udayavani is now on Telegram. Click here to join our channel and stay updated with the latest news.

Next