Advertisement

ಕುಂಟುತ್ತಾ ಸಾಗುತ್ತಿದೆ ಗ್ಯಾಸ್‌ ಪೈಪ್‌ಲೈನ್‌ ಕಾಮಗಾರಿ: ಸವಾರರಿಗೆ ಸಂಕಷ್ಟ

10:39 PM Oct 23, 2021 | Team Udayavani |

ಸುರತ್ಕಲ್‌: ಕೇಂದ್ರ ಸರಕಾರದ ಅಧೀನದಲ್ಲಿರುವ ಹೆದ್ದಾರಿ ಇಲಾಖೆ ಇದೀಗ ಇಂಧನ ಪೈಪ್‌ಲೈನ್‌ ಕಾಮ ಗಾರಿಗೆ ಅನುಮತಿ ಕೊಟ್ಟಿದ್ದು, ಕೆಲವೊಂದು ಕಾರಣಗಳಿಂದ ಕಾಮಗಾರಿ ನಿರೀಕ್ಷಿತ ವೇಗ ಪಡೆದುಕೊಂಡಿಲ್ಲ. ಇದರಿಂದಾಗಿ ನಗರ ಪ್ರದೇಶಗಳಲ್ಲಿ ಬೃಹತ್‌ ಕಬ್ಬಿಣದ ಪೈಪ್‌ಗ್ಳನ್ನು ತಂದು ಇಡಲಾಗಿದ್ದು, ಬಹುತೇಕ ಸರ್ವಿಸ್‌ ರಸ್ತೆಯಲ್ಲಿ ಓಡಾಟ ಮಾಡಲು, ಕಟ್ಟಡಗಳ ಎದುರು ವಾಹನ ನಿಲ್ಲಿಸಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಟ್ರಾಫಿಕ್‌ ಪೊಲೀಸರಿಂದ ಹಲವಾರು ಮಂದಿ ದಂಡದ ಚೀಟಿ ಪಡೆದುಕೊಳ್ಳುವಂತಾಯಿತು.

Advertisement

ಹಲವು ದಿನಗಳಿಂದ ಮಳೆ ಸುರಿಯು ತ್ತಿದ್ದು, ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆ ಇಡೀ ಕೆಸರುಮಯ ಹಾಗೂ ಗ್ಯಾಸ್‌ ಪೈಪ್‌ಲೈನ್‌ಗೆ ಅಗೆದ ಸ್ಥಳ ತಿಳಿಯದೆ ವಾಹನ ಸಿಲುಕಿಕೊಂಡು ಸವಾರರು ಪರದಾಡುತ್ತಿದ್ದಾರೆ.

ಎಂಸಿಎಫ್‌ನಿಂದ ಅನಿಲ ಪೈಪ್‌ ಲೈನ್‌ ಮೂಲ್ಕಿ ವರೆಗೆ ಹಾಕುವ ಕಾರ್ಯವನ್ನು ಗೈಲ್‌ನಿಂದ ಗುತ್ತಿಗೆ ಪಡೆದ ಖಾಸಗಿ ಕಂಪನಿಗಳು ಮಾಡುತ್ತಿವೆ. ರಾತ್ರಿ ಸಮಯ ವಾಹನ ಸಂಚಾರ, ಜನರ ಓಡಾಟ ಕಡಿಮೆ ಇರುವ ವೇಳೆ ಮಾಡಲು ಅವಕಾ ಶವಿದ್ದರೂ ಹಗಲು ಹೊತ್ತಿನಲ್ಲಿ ಮಾತ್ರ ಕೆಲಸವಾಗುತ್ತಿದೆ.

ಸಂಚಾರಕ್ಕೆ ಅಡಚಣೆ
ಈ ರಸ್ತೆಯಲ್ಲಿ ಪಕ್ಕದಲ್ಲಿಯೇ ಇಲ್ಲಿ ಪ್ರೈಮರಿ ಶಾಲೆಗಳು, ಪ್ರೌಢಶಾಲೆಗಳು, ಪ.ಪೂ., ಪದವಿ ಕಾಲೇಜುಗಳಿವೆ. ದೇವ ಸ್ಥಾನ, ಮಂದಿರ ಚರ್ಚ್‌, ಮಸೀದಿ ಗಳಿವೆ. ಶಾಲೆ ಆರಂಭವಾಗಿದ್ದು ಹಾಗಾಗಿ ಬೆಳಗ್ಗೆ, ಸಂಜೆಯ ಹೊತ್ತು ವಾಹನ ಸಂಚಾರ ದಟ್ಟಣೆ ಹೆಚ್ಚು.

ರಸ್ತೆಗೆ ತೊಂದರೆ
ಸರಿಯಾದ ಕ್ರಿಯಾ ಯೋಜನೆಯಿಲ್ಲದೆ ಪ್ರತೀ ಬಾರಿ ಪೈಪ್‌ ಲೈನ್‌ ಕಾಮಗಾರಿ ಮಾಡುವಾಗಲೂ ರಸ್ತೆಗೆ ಕಂಟಕಎದುರಾಗುತ್ತದೆ. ಸ್ಥಳಾವಕಾಶ ಕಡಿಮೆ ಇರುವ ಕಾರಣ ಕೆಲವೊಂದು ಸಲ ರಸ್ತೆಯನ್ನೇ ಅಗೆಯಬೇಕಾದ ಅನಿವಾರ್ಯ ಎದುರಾ ದಾಗ ಪೆಟ್ರೋಲ್‌ ಪೈಪ್‌ ಲೈನ್‌ ಹೋದ ಕಡೆ ಅಗೆತ ಸಾಧ್ಯವಿಲ್ಲ. ಆದರೆ ಅಗೆದ ರಸ್ತೆ ಯನ್ನು ಸರಿ ಮಾಡುವುದು ಯಾರು ಎಂಬ ಪ್ರಶ್ನೆ ಎದುರಾಗಿದೆ. ರಸ್ತೆ ಹಾಳಾದಾಗ ಜನರು ಪ್ರಶ್ನಿಸುವುದು ಪಾಲಿಕೆಯ ಆಡಳಿತವನ್ನು. ಪೈಪ್‌ ಲೈನ್‌ ಅಳವಡಿಸುವಾಗೆಲ್ಲ ಪಾಲಿಕೆಗೆ ಸಂಕಷ್ಟ ಎದುರಾಗುತ್ತದೆ.

Advertisement

ಇದನ್ನೂ ಓದಿ:ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಸಿಎಂ ಬೊಮ್ಮಾಯಿ‌ ಘೋಷಣೆ

ಹೊಂದಾಣಿಕೆ ಇರಲಿ
ಸ್ಥಳೀಯ ಇಲಾಖೆಗಳಿಗೆ ಸಂಬಂಧಪಟ್ಟ ಕೇಂದ್ರದ ಕಂಪೆನಿಗಳು ಸಮನ್ವಯ ಸಾಧಿಸ ಬೇಕು ಪರಸ್ಪರ ಪೂರಕವಾಗಿ ಒಪ್ಪಂದ ಮಾಡಿಕೊಂಡು ಕೆಲಸ ಮಾಡಿದರೆ ಈ ಸಂಕಷ್ಟವೇ ಎದುರಾಗುವುದಿಲ್ಲ. ಇಲ್ಲವಾದರೆ ಅನುಕೂಲಕ್ಕಿಂತ ತೊಂದರೆಯೇ ಹೆಚ್ಚು.

ಲೇಸರ್‌ ಟೆಸ್ಟಿಂಗ್‌ ಅಪಾಯಕಾರಿ
ಲೇಸರ್‌ ಟೆಸ್ಟಿಂಗ್‌ ಮಾನವ ಜೀವಕ್ಕೆ ಅಪಾಯ ಕಾರಿಯಾಗಿದ್ದು, ಜನ ಸಂಚಾರ ಇರುವ ವೇಳೆ ಮಾಡುವಂತಿಲ್ಲ. ದೈಹಿಕ ನೂನ್ಯತೆ ತಂದೊಡ್ಡಬಲ್ಲ ಇದನ್ನು ಮಾಡು ವಾಗ ಐದಾರು ಮೀಟರು ದೂರ ದವರೆಗೆ ಬ್ಯಾರಿಕೇಡ್‌ ಇಟ್ಟು ಜನರ ಓಡಾಟ ನಿರ್ಬಂಧಿಸಬೇಕು. ಕುಳಾಯಿಬಳಿ ಇಂತಹ ಲೇಸರ್‌ ಟೆಸ್ಟಿಂಗ್‌ ನಡೆಯುತ್ತಿದ್ದಾಗ ಜನರೇ ನಿಲ್ಲಿಸಿ ತರಾಟೆಗೆ ತೆಗೆದುಕೊಂಡ ಘಟನೆ ಕಳೆದ ತಿಂಗಳು ನಡೆದಿದ್ದನ್ನು ಸ್ಮರಿಸಬಹುದು.

ಶೀಘ್ರ ಕಾಮಗಾರಿ ಪೂರ್ಣ ಗೊಳಿಸಲು ಕ್ರಮ
ಸುರತ್ಕಲ್‌ ಪ್ರದೇಶದ ನಗರ ಭಾಗದಲ್ಲಿ ಗೈಲ್‌ ಪೈಪ್‌ಲೈನ್‌ ಕಾಮಗಾರಿಯನ್ನು ಆದ್ಯತೆಯ ಮೇರೆಗೆ ಶೀಘ್ರ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಸೂಚಿಸಲಾಗುವುದು.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ ದ.ಕ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next