Advertisement

ಅನಿಲ ಸೋರಿಕೆ: ಸಿಲಿಂಡರ್‌ ಸ್ಥಳಾಂತರ

01:05 PM Mar 09, 2022 | Team Udayavani |

ಮೈಸೂರು: ನಗರದ ಕೆಆರ್‌ಎಸ್‌ ರಸ್ತೆಯ ರೈಲ್ವೆ ವಸತಿ ಗೃಹದ ಆವರಣದಲ್ಲಿ ಸೋರಿಕೆಯಾಗಿದ್ದ ಕ್ಲೋರಿನ್‌ ಅನಿಲ ಸಿಲಿಂಡರ್‌ಅನ್ನು ಸ್ಥಳಾಂತರ ಮಾಡಿರುವುದರಿಂದ ಆತಂಕ ನಿವಾರಣೆಯಾಗಿದೆ. ಜತೆಗೆ, ಚೇತರಿಸಿಕೊಂಡ 25 ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು,ಇನ್ನೂ ಮೂವರು ಐಸಿಯುನಲ್ಲಿ ಚಿಕಿತ್ಸೆ

Advertisement

ಮುಂದುವರಿದಿದೆ. ಸಿಲಿಂಡರ್‌ಅನ್ನು ಮಂಗಳವಾರ ಚಿಕ್ಕಮಗಳೂರಿಗೆ ಸ್ಥಳಾಂತರ ಮಾಡಲಾಗಿದೆ. 2015ರಲ್ಲಿ ಚಿಕ್ಕಮಗಳೂರಿನ ನೊರೊನಾ ಏಜೆನ್ಸಿ ಈ ಸಿಲಿಂಡರ್‌ ಅನ್ನು ಕೊಳವೆ ಬಾವಿ ನೀರಿನ ಶುದ್ಧೀಕರಣ ಮಾಡಲುಅಳವಡಿಸಿತ್ತು. ಈಗ ಅದೇ ಏಜೆನ್ಸಿಗೆವಿಲೇವಾರಿ ಮಾಡಲು ನೀಡಲಾಗಿದೆ.

ಕ್ಲೋರಿನ್‌ ಅನಿಲ ಸೋರಿಕೆ: ಕಳೆದೆರಡು ವರ್ಷಗಳ ಹಿಂದೆ ರೈಲ್ವೆ ವಸತಿ ಗೃಹಗಳಿಗೆ ನದಿ ಮೂಲದ ನೀರನ್ನು ಸರಬರಾಜು ಮಾಡಲು ಆರಂಭಿಸಿದ ನಂತರ ಈ ಸಿಲಿಂಡರ್‌ ಅನುಪಯುಕ್ತಗೊಂಡಿತ್ತು. ಸೋಮವಾರವಷ್ಟೇ ಈ ಸಿಲಿಂಡರ್‌ನಿಂದ ಕ್ಲೋರಿನ್‌ ಅನಿಲ ಸೋರಿಕೆಯಾಗಿತ್ತು. ತಕ್ಷಣ ಕಾರ್ಯಾಚರಣೆ ನಡೆಸಿದಅಗ್ನಿಶಾಮಕ ದಳದ 35 ಹೆಚ್ಚು ಸಿಬ್ಬಂದಿ ಸೋರಿಕೆಯನ್ನು ನಿಲ್ಲಿಸಿದ್ದರು.

ಈ ಘಟನೆಯಲ್ಲಿ 69ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಇದರಿಂದ ರಸ್ತೆ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಕೆಮ್ಮು, ವಾಂತಿ, ಉಸಿರಾಟ ಸಮಸ್ಯೆಯಿಂದಾಗಿ ಅಸ್ವಸ್ಥಗೊಂಡು ಆಸ್ಪ ತ್ರೆಗೆ ದಾಖಲಾಗಿದ್ದವರ ಪೈಕಿ ಬಹುತೇಕ ಜನರು ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆ: ಕ್ಲೋರಿನ್‌ ಅನಿಲ್‌ ಸೋರಿಕೆಯಿಂದಾಗಿ ಉಸಿರಾಟದಲ್ಲಿ ವ್ಯತ್ಯಾಸದಿಂದ ರೈಲ್ವೆ ವಸತಿ ಗೃಹದಜನರು ವಿವಿಧ ಆಸ್ಪತ್ರೆಗೆ ದಾಖಲಾಗಿದ್ದರು. ಇಂದಿನವರೆಗೆ ರೈಲ್ವೆ ಆಸ್ಪತ್ರೆಗೆ 27, 30 ಜನ ಕೆ.ಆರ್‌.ಆಸ್ಪತ್ರೆಗೆ, 12 ಮಕ್ಕಳು ಚಲುವಾಂಬ ಆಸ್ಪತ್ರೆ ದಾಖಲಾಗಿದ್ದರು. 12 ಮಕ್ಕಳು ಸೇರಿ 28 ಜನರು ಒಳ ರೋಗಿಗಳಾಗಿ ಚಿಕಿತ್ಸೆಪಡೆಯುತ್ತಿದ್ದಾರೆ. ಮಂಗಳವಾರ ಸಂಜೆಯೊಳಗೆ 25 ಜನ ವಯಸ್ಕರು,11 ಮಕ್ಕಳು ಚೇತರಿಸಿ ಕೊಂಡಿದ್ದು,ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

Advertisement

ಪ್ರಾಣಾಪಾಯದಿಂದ ಪಾರು: ಅಸ್ವಸ್ಥರು ತಕ್ಷಣ ಆಸ್ಪತ್ರೆ ಬಂದಿದ್ದರಿಂದ ಯಾವುದೇ ಹೆಚ್ಚಿನ ತೊಂದರೆ ಆಗಿಲ್ಲ. ತಕ್ಷಣ ಚಿಕಿತ್ಸೆನೀಡಲಾಗಿದೆ. ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಮೂವರಿಗೆತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಮುಂದುವರಿಸಲಾಗಿದೆ. ಆಸ್ಪತ್ರೆ ಬಂದಸಂದರ್ಭದಲ್ಲಿ ಮೂವರ ಸ್ಥಿತಿ ಗಂಭೀರವಾಗಿತ್ತು. ಈಗ ಅವರೂ ಚೇತರಿಸಿಕೊಂಡಿದ್ದಾರೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಕೆಆರ್‌ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಶ್‌ ತಿಳಿಸಿದ್ದಾರೆ.

ಮಕ್ಕಳೂ ಚೇತರಿಕೆ: 12 ಮಕ್ಕಳು ಚಲುವಾಂಬ ಆಸ್ಪತ್ರೆಯಲ್ಲಿ ದಾಖಲಾಗಿದ್ದರು.ಉಸಿರಾಟದ ತೊಂದರೆ ಉಂಟಾಗಿತ್ತು.ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ.ಆಸ್ಪತ್ರೆ ಬಂದ ತಕ್ಷಣ ಆಕ್ಸಿಜನ್‌ನೊಂದಿಗೆಚಿಕಿತ್ಸೆ ನೀಡಲಾಗಿತ್ತು. 11 ಮಕ್ಕಳನ್ನುಮನೆಗೆ ಕಳುಹಿಸಿ ಕೊಡಲಾಗಿದೆ. ಒಂದುಮಗುವಿಗೆ ಉಸಿರಾಟದ ಸಮಸ್ಯೆ ಈಹಿಂದಿನಿಂದಲೂ ಇದ್ದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ಯಾವುದೇ ಗಂಭೀರ ಪ್ರಕರಣಇಲ್ಲ ಎಂದು ಚಲುವಾಂಬ ಆಸ್ಪತ್ರೆಯಸ್ಥಾನಿಕ ವೈದ್ಯಾಧಿಕಾರಿ ಡಾ.ಸುಧಾ ರುದ್ರಪ್ಪ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next