Advertisement

ವಿನಾಯಕ ನಗರಕ್ಕೆ ವಿಘ್ನ ತಂದೊಡ್ಡಲಿರುವ ಅಕ್ರಮ ಗ್ಯಾಸ್ ಫಿಲ್ಲಿಂಗ್

12:48 PM Sep 26, 2021 | Team Udayavani |

ದಾಂಡೇಲಿ : ಅದು ಜನವಸತಿ ಪ್ರದೇಶ, ಅಲ್ಲೆ ಸನಿಹದಲ್ಲಿ ಆಂಗ್ಲ ಮಾದ್ಯಮ ಶಾಲೆಯಿದೆ. ಇವೆಲ್ಲವುಗಳ ಮಧ್ಯೆ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ದಂಧೆ ನಿರಾಂತಕವಾಗಿ ನಡೆಯುವುದರ ಮೂಲಕ ಸ್ಥಳೀಯ ಜನರಲ್ಲಿ ಆತಂಕವನ್ನು ಸೃಷ್ಟಿಸಿದೆ. ಹಾಗಾದ್ರೆ ಇದು ಎಲ್ಲಿ ಅಂದುಕೊಂಡಿರಾ? ಮುಂದೆ ಕೇಳಿ.

Advertisement

ದಾಂಡೇಲಿ ನಗರದ ಜನವಸತಿ ಪ್ರದೇಶವಾದ ಹಳಿಯಾಳ ರಸ್ತೆಯ ವಿನಾಯಕ ನಗರದಲ್ಲಿರುವ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತಿರದಲ್ಲೆ ಅಕ್ರಮವಾಗಿ ವಾಹನಗಳಿಗೆ ಗ್ಯಾಸ್ ಫಿಲ್ಲಿಂಗ್ ಮಾಡಲಾಗುತ್ತದೆ. ಮಾಹಿತಿಯ ಪ್ರಕಾರ ಕಳೆದ ಅನೇಕ ವರ್ಷಗಳಿಂದ ಈ ದಂಧೆ ಲಂಗು ಲಗಾಮಿಲ್ಲದೆ ನಡೆಯುತ್ತಿದೆಯಂತೆ. ಓಮ್ನಿ ವಾಹನವೊಂದಕ್ಕೆ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿರುವುದು ಈ ದೃಶ್ಯದಲ್ಲಿ ಕಾಣಬಹುದಾಗಿದೆ. ಇನ್ನೂ ಗ್ಯಾಸ್ ಫಿಲ್ಲಿಂಗ್ ಮಾಡುವ ಹತ್ತಿರದಲ್ಲೆ ವಿದ್ಯುತ್ ಟ್ರಾನ್ಸಫಾರ್ಮರ್ ಕಂಬವೊಂದಿದ್ದು, ಏನಾದರೂ ಅವಘಢ ಸಂಭವಿಸಿದ್ದಲ್ಲಿ ದೊಡ್ಡ ಪ್ರಮಾಣದ ಹಾನಿ ಸಂಭವಿಸಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಇದನ್ನೂ ಓದಿ:ಕಾಪು : ಗೃಹೋಪಯೋಗಿ ಮಾರಾಟ ಮಳಿಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

ಇತ್ತೀಚಿನ ಮೂರ್ನಾಲ್ಕು ವರ್ಷಗಳ ಹಿಂದೆ ಇಲ್ಲೆ ಹತ್ತಿರದ ಇನ್ನೊಂದು ರಸ್ತೆಯಲ್ಲಿ ಅಕ್ರಮವಾಗಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಬೆಂಕಿ ಅವಘಡ ಸಂಭವಿಸಿ, ಓಮ್ನಿಯೊಂದು ಸಂಪೂರ್ಣ ಭಸ್ಮವಾಗಿರುವ ಘಟನೆ ಇನ್ನೂ ಯಾರು ಮರೆತಿಲ್ಲವಾದರೂ, ವಿನಾಯಕ ನಗರದಲ್ಲಿ ಮಾತ್ರ ಎಗ್ಗಿಲ್ಲದೇ ನಡೆಯುವ ಗ್ಯಾಸ್ ಫಿಲ್ಲಿಂಗ್ ದಂಧೆಗೆ ಕಡಿವಾಣ ಯಾವಾಗ? ಎಂಬ ಪ್ರಶ್ನೆ ಎದುರಾಗಿದೆ. ಒಟ್ಟಿನಲ್ಲಿ ವಿನಾಯಕ ನಗರಕ್ಕೆ ಅಕ್ರಮ ಗ್ಯಾಸ್ ಫಿಲ್ಲಿಂಗ್ ವಿಘ್ನ ತಂದೊಡ್ಡಲಿರುವುದು ಖಚಿತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next