Advertisement

ಸಿಲಿಂಡರ್ ಗ್ಯಾಸ್ ಸೋರಿಕೆಯಿಂದ ಬ್ಲಾಸ್ಟ್, ಗಂಭೀರ ಗಾಯಗೊಂಡ ವೃದ್ದೆ

09:58 AM Dec 28, 2019 | keerthan |

ದಾವಣಗೆರೆ: ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು ಹಾನಿಯಾದ ಘಟನೆ ದಾವಣಗೆರೆಯ ನಿಜಲಿಂಗಪ್ಪ ಬಡಾವಣೆಯಲ್ಲಿ ಸಂಭವಿಸಿದೆ.

Advertisement

ಶಿವಮ್ಮ( 60 ) ಸಿಲಿಂಡರ್ ಸ್ಫೋಟದಿಂದ ಗಾಯಗೊಂಡ ಮಹಿಳೆ.

ಮಧ್ಯರಾತ್ರಿ ಅಡುಗೆ ಸಿಲಿಂಡರ್ ನಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿದೆ. ಮನೆಯಲ್ಲಿದ್ದ ಶಿವಮ್ಮ ಸ್ಟೋಟದಿಂದ ಗಾಯಗೊಂಡಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಸ್ಫೋಟದ ಶಬ್ದದಿಂದ ಅಕ್ಕ ಪಕ್ಕ ಮನೆಯವರು ಆತಂಕಗೊಂಡಿದ್ದರು.  ಸಿಲಿಂಡರ್ ಸ್ಫೋಟಕ್ಕೆ ಮನೆಗೆ ಹಾನಿಯಾಗಿದ್ದು,  ಗೋಡೆ ಹಾಗೂ ಸಾಮಗ್ರಿಗಳು ಹಾಳಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next