Advertisement

Guarantees ; ತೆಲಂಗಾಣದಲ್ಲಿ 6 ಗ್ಯಾರಂಟಿಗಳನ್ನು ಘೋಷಿಸಿದ ಕಾಂಗ್ರೆಸ್

08:14 PM Sep 17, 2023 | Team Udayavani |

ಹೈದರಾಬಾದ್ : ಕರ್ನಾಟಕದಲ್ಲಿ 5 ಗ್ಯಾರಂಟಿಗಳನ್ನು ಘೋಷಿಸಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ತೆಲಂಗಾಣದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದೆ.

Advertisement

ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೈದರಾಬಾದ್ ಸಮೀಪದ ತುಕ್ಕುಗುಡದಲ್ಲಿ ಭಾನುವಾರ ನಡೆದ ಚುನಾವಣ ಪ್ರಚಾರ ರ‍್ಯಾಲಿಯಲ್ಲಿ ಚುನಾವಣೆಗೂ ಮುನ್ನ ಆರು ಭರವಸೆಗಳನ್ನು ಘೋಷಿಸಿದ್ದಾರೆ. ‘ತೆಲಂಗಾಣದಲ್ಲಿ ಕಾಂಗ್ರೆಸ್ ಸರಕಾರವನ್ನು ಕಾಣುವುದು ನನ್ನ ಕನಸು, ಅದು ಸಮಾಜದ ಎಲ್ಲಾ ವರ್ಗಗಳಿಗೆ ಕೆಲಸ ಮಾಡುತ್ತದೆ’ ಎಂದು ಸೋನಿಯಾ ಗಾಂಧಿ ಹೇಳಿದರು.

“ನಾನು ನನ್ನ ಸಹೋದ್ಯೋಗಿಗಳೊಂದಿಗೆ ಈ ಮಹಾನ್ ರಾಜ್ಯ ತೆಲಂಗಾಣದ ಜನ್ಮದ ಭಾಗವಾಗಲು ಅವಕಾಶ ಹೊಂದಿದ್ದೆ”ಎಂದರು.

ತೆಲಂಗಾಣದ ಮಹಿಳೆಯರಿಗೆ ಮಹಾಲಕ್ಷ್ಮೀ ಯೋಜನೆಯಡಿ ಮಾಸಿಕ 2,500 ರೂ. ಆರ್ಥಿಕ ನೆರವು, 500 ರೂ.ಗೆ ಗ್ಯಾಸ್ ಸಿಲಿಂಡರ್, ರಾಜ್ಯಾದ್ಯಂತ ಟಿಎಸ್‌ಆರ್‌ಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆ ಗಳನ್ನು ಘೋಷಿಸಿದ್ದಾರೆ. ತೆಲಂಗಾಣ ಜನತೆಯ ಆಶೋತ್ತರಗಳನ್ನು ಈಡೇರಿಸಲು ನಾವು 6 ಭರವಸೆಗಳನ್ನು ಘೋಷಿಸುತ್ತಿದ್ದೇವೆ. ಮತ್ತು ಅವುಗಳಲ್ಲಿ ಪ್ರತಿಯೊಂದನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ”ಎಂದು ಸೋನಿಯಾ ಹೇಳಿದ್ದಾರೆ.

”ರೈತರಿಗೆ ಭರವಸೆ.ಇದು ನಮ್ಮ ಎರಡನೇ ಗ್ಯಾರಂಟಿ.ರೈತರು ಮತ್ತು ಗೇಣಿದಾರ ರೈತರಿಗೆ ವರ್ಷಕ್ಕೆ 15,000 ರೂ., ಕೃಷಿ ಕೂಲಿಕಾರರಿಗೆ 12,000.ರೂ. ನೀಡುತ್ತೇವೆ. ರೈತರ ಕಲ್ಯಾಣವೇ ಕಾಂಗ್ರೆಸ್‌ನ ಗುರಿ”ಎಂದು ಕಾಂಗ್ರೆಸ್ ಘೋಷಿಸಿದೆ.

Advertisement

”ಕರ್ನಾಟಕದಲ್ಲಿ ಮಾಡಿದ್ದೇವೆ.. ತೆಲಂಗಾಣದಲ್ಲಿ ಮಾಡುತ್ತೇವೆ..ಇದು ನಮ್ಮ ಗ್ಯಾರಂಟಿ.ಗೃಹ ಜ್ಯೋತಿ ಯೋಜನೆಯ ಮೂಲಕ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 200 ಯೂನಿಟ್ ಉಚಿತ ವಿದ್ಯುತ್” ಎಂದು ಕಾಂಗ್ರೆಸ್ ಘೋಷಿಸಿದೆ.

”ಇಂದಿರಿಮ್ಮ ಇಲ್ಲು ಯೋಜನೆ ಮೂಲಕ ವಸತಿ ರಹಿತರಿಗೆ ಮನೆ ನಿವೇಶನ ಹಾಗೂ ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಇದು ರಾಹುಲ್ ಗಾಂಧಿಯವರ ಭರವಸೆ.ಇದು ಜಾರಿಯಾಗುವುದು ನಿಶ್ಚಿತ”ಎಂದು ಕಾಂಗ್ರೆಸ್ ಹೇಳಿದೆ.

“ಬಿಜೆಪಿ, ಬಿಆರ್‌ಎಸ್ ಮತ್ತು ಎಂಐಎಂ ಬೇರೆ ಬೇರೆ ಅಲ್ಲ, ಎಲ್ಲರೂ ಒಂದೇ. ತೆಲಂಗಾಣದಲ್ಲಿ ಕಾಂಗ್ರೆಸ್ ಈ ಮೂರು ಪಕ್ಷಗಳ ವಿರುದ್ಧ ಹೋರಾಡುತ್ತಿದೆ.” ಎಂದು ರಾಹುಲ್ ಗಾಂಧಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next