Advertisement
“ಕ್ಷಿರಪಥ ಮೂವೀಸ್’ ಬ್ಯಾನರ್ ಅಡಿಯಲ್ಲಿ ನರಸಿಂಹ ಮೂರ್ತಿ. ಎಸ್ ಬಂಡವಾಳ ಹೂಡಿ ನಿರ್ಮಿಸಿರುವ “ಗರುಡಾಕ್ಷ’ ಚಿತ್ರಕ್ಕೆ ಶ್ರೀಧರ್ ವೈಷ್ಣವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. “ತನ್ನ ತಂದೆಯ ಸಾವು ಆಕಸ್ಮಿಕವಲ್ಲ ಅದು ಕೊಲೆ ಎಂದು ತಿಳಿದ ಮಗ, ಆ ರಹಸ್ಯವನ್ನು ಹೇಗೆ ಭೇದಿಸುತ್ತಾನೆ ಅನ್ನೋದು ಚಿತ್ರದ ಕಥೆಯ ಒಂದು ಎಳೆ. “ಗರುಡಾಕ್ಷ’ ಚಿತ್ರದಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ, ಬಾಂಧವ್ಯ, ಜೊತೆಗೆ ಹಣ, ಸ್ವಾರ್ಥ, ದುರಾಸೆ ಹೀಗೆ ಹಲವು ಅಂಶಗಳನ್ನು ಹೇಳಲಾಗಿದೆ. ಸಂಬಂಧಗಳ ಮೌಲ್ಯದ ಜೊತೆಗೆ ಒಂದು ಸಂದೇಶ ಕೂಡ ಇದೆ’ ಎನ್ನುತ್ತದೆ ಚಿತ್ರತಂಡ. ಸೆಂಟಿಮೆಂಟ್ ಕಂ ಆ್ಯಕ್ಷನ್-ಕ್ರೈಂ ಕಥಾ ಹಂದರ ಈ ಚಿತ್ರವನ್ನು ಸುಮಾರು 35 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತ ಸಂಯೋಜನೆಯಿದ್ದು, ಅನುರಾಧ ಭಟ್, ಸಂತೋಷ್ ವೆಂಕಿ, ಅಪೂರ್ವ ಶ್ರೀಧರ್, ನೇಹಾ ವೇಣುಗೋಪಾಲ್ ಮೊದಲಾದವರು ಹಾಡಿಗೆ ಧ್ವನಿಯಾಗಿದ್ದಾರೆ. ಅರಸು ಅಂತಾರೆ, ರಾಜು ಭಾಯಿ ಚಿತ್ರದ ಗೀತೆಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಎನ್.ಟಿ. ಎ ವೀರೇಶ್ ಛಾಯಾಗ್ರಹಣ, ಎನ್.ಎಂ ವಿಶ್ವ ಸಂಕಲನ ಕಾರ್ಯವಿದೆ. ಸದ್ಯ ಸೆನ್ಸಾರ್‌ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರುವ “ಗರುಡಾಕ್ಷ’ ಏಪ್ರಿಲ್ ಕೊನೆ ಅಥವಾ ಮೇ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. Advertisement
ಬಿಡುಗಡೆಯತ್ತ ಗರುಡಾಕ್ಷ
10:08 AM Mar 21, 2020 | mahesh |
Advertisement
Udayavani is now on Telegram. Click here to join our channel and stay updated with the latest news.