Advertisement

ಹವಾಮಹಲ್‌ ಸಿರಿ:ಎಲ್‌ಇಡಿ ಬೆಳಕಿನ ಕಮಾಲ್‌

12:50 PM Dec 15, 2018 | Team Udayavani |

ದೀಪಗಳ ಹಬ್ಬ ಕಳೆದು ದಿನಗಳೇ ಕಳೆದಿವೆ. ಆದರೆ, ಬೆಂಗಳೂರಿಗೆ “ದೀಪಗಳ ಹಬ್ಬ’ (ಲೈಟ್‌ ಫೆಸ್ಟಿವಲ್‌) ಮತ್ತೆ ಬಂದಿದೆ… 

Advertisement

ಮೈಸೂರು ಅರಮನೆ ದೀಪಾಲಂಕೃತಗೊಂಡು ರಾತ್ರಿಯ ಹೊತ್ತು ಜಗಮಗಿಸುವುದನ್ನು ಬಹುತೇಕರು ನೋಡಿಯೇ ಇರುತ್ತಾರೆ. ಅದರಲ್ಲೂ ದಸರಾ ಸಮಯದಲ್ಲಿ ಕೇಳಬೇಕೆ? ಇಡೀ ಅರಮನೆಯನ್ನೇ ಬೆಳಕಿನಿಂದ ಸಿಂಗರಿಸಲಾಗುತ್ತದೆ. ಗರುಡಾ ಮಾಲ್‌ನಲ್ಲಿ ಅಂಥದ್ದೇ ಒಂದು ಲೋಕ ಸೃಷ್ಟಿಯಾಗಿದೆ. ಇಲ್ಲಿ ಬೆಳಕಿನ ಅರಮನೆಯೇ ನಿರ್ಮಾಣಗೊಂಡಿದೆ. ಬೆಳಕಿನ ತುಣುಕುಗಳನ್ನು ಬಳಸಿಯೇ ಅರಮನೆಯ ಆಕೃತಿಗಳನ್ನು ಸೃಷ್ಟಿಸಲಾಗಿದೆ. ಇವೆಲ್ಲವೂ ಗರುಡಾ ಶಾಪಿಂಗ್‌ ಫೆಸ್ಟಿವಲ್‌ನ ಪ್ರಯುಕ್ತ. 

ಈ ಸಲದ ಆಕರ್ಷಣೆ ಜೈಪುರದ ಹವಾ ಮಹಲ್‌ ಅರಮನೆ. ಈ ಪ್ರತಿಕೃತಿ 45 ಅಡಿ ಅಗಲ ಮತ್ತು 38 ಅಡಿ ಎತ್ತರವಿದೆ. ಇದರೊಂದಿಗೆ ಚಿಟ್ಟೆಗಳಿಂದ ಅಲಂಕೃತ ಕ್ರಿಸ್‌ಮಸ್‌ ಟ್ರೀ ಕೂಡಾ ಗಮನ ಸೆಳೆಯುತ್ತಿದೆ. ಹವಾಮಹಲ್‌ನ ಪ್ರತಿಕೃತಿಗೆ ಸುಮಾರು 60,000ಕ್ಕೂ ಹೆಚ್ಚು ಎಲ್‌ಇಡಿ ದೀಪಗಳನ್ನು ಬಳಸಲಾಗಿದೆ. ಮಾಲ್‌ನ ಮತ್ತೂಂದು ದ್ವಾರದಲ್ಲಿ ಸಂಪೂರ್ಣವಾಗಿ ದೀಪಗಳಿಂದ ಅಲಂಕೃತಗೊಂಡ ಕ್ರಿಸ್‌ಮಸ್‌ ಆಭರಣಗಳ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಎಲ್‌.ಇ.ಡಿ. ಪ್ರತಿಕೃತಿ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ 3 ತಿಂಗಳು. 200 ಮಂದಿ ಕುಶಲಕರ್ಮಿಗಳು ಇದರ ತಯಾರಿಗೆ ಶ್ರಮವಹಿಸಿದ್ದಾರೆ. ಇದರ ಪರಿಕಲ್ಪನೆ ಖ್ಯಾತ ಕಲಾನಿರ್ದೇಶಕರಾದ ಮೋಹನ್‌ ಬಿ. ಕೆರೆ.

ಎಲ್ಲಿ?: ಗರುಡಾ ಮಾಲ್‌
ಯಾವಾಗ?: ಜನವರಿ 1, 2019ರ ತನಕ

Advertisement

Udayavani is now on Telegram. Click here to join our channel and stay updated with the latest news.

Next